*ಹೊಸ ವರ್ಷದ ಮತ್ತೊಂದು ವಿಚಿತ್ರ ಕಥೆ* *ಪ್ರೇಮಿಯನ್ನು ಮನೆಗೆ ಕರೆದಳು… ಗುಪ್ತಾಂಗವನ್ನೇ ಕತ್ತರಿಸಿದಳು!*
*ಹೊಸ ವರ್ಷದ ಮತ್ತೊಂದು ವಿಚಿತ್ರ ಕಥೆ*
*ಪ್ರೇಮಿಯನ್ನು ಮನೆಗೆ ಕರೆದಳು… ಗುಪ್ತಾಂಗವನ್ನೇ ಕತ್ತರಿಸಿದಳು!*
ಹೊಸ ವರ್ಷದ ಹಿಂದಿನ ದಿನ ನ್ಯೂ ಇಯರ್ ಸೆಲಬ್ರೇಷನ್ಗೆ (New Year Celebration) ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿದ ವಿವಾಹಿತ ಮಹಿಳೆ ಅವನ ಗುಪ್ತಾಂಗಗಳನ್ನು ಕತ್ತರಿಸಿದ್ದಾಳೆ.
ಕೊಲೆಯ ಪ್ರಯತ್ನದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ.
ತನ್ನ 45 ವರ್ಷದ ಪ್ರೇಮಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಆಕೆ ಆತನ ಗುಪ್ತಾಂಗವನ್ನು ಕಟ್ ಮಾಡಿದ್ದಾಳೆ.
ಸಾಂತಾಕ್ರೂಜ್ ಪೂರ್ವದ ಜಂಬ್ಲಿಪಾದದಲ್ಲಿರುವ ಆರೋಪಿಯ ನಿವಾಸದಲ್ಲಿ ನಿನ್ನೆ ಬೆಳಗಿನ ಜಾವ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಜೋಗಿಂದರ್ ಲಖನ್ ಮಹಾತೋ ಎಂಬ ವ್ಯಕ್ತಿ ಕಾಂಚನ್ ರಾಕೇಶ್ ಮಹಾತೋ ಎಂಬ ವಿವಾಹಿತ ಮಹಿಳೆಯ ಜೊತೆ ಸುಮಾರು 7 ವರ್ಷಗಳಿಂದ ಸಂಬಂಧದಲ್ಲಿದ್ದ. ಆಕೆ ಪದೇ ಪದೇ ತನ್ನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರೂ ಜೋಗಿಂದರ್ ಅದಕ್ಕೆ ಒಪ್ಪಿರಲಿಲ್ಲ. ಆತನಿಗೂ ಮದುವೆಯಾಗಿ ಮಕ್ಕಳಿದ್ದರು. ಅವರಿಬ್ಬರಿಗೂ ಮಕ್ಕಳಿದ್ದರು. ಕಾಂಚನ್ ಜೋಗಿಂದರ್ಗೆ ಹೆಂಡತಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು.
ಇದೇ ವಿಚಾರಕ್ಕೆ ಜಗಳವಾಗಿ ನವೆಂಬರ್ 2025ರಿಂದ ಆತ ಅವಳೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದ. ಆಕೆಯಿಂದ ದೂರವಾಗಲು ಆತ ತನ್ನ ಸ್ವಂತ ಊರಿಗೆ ಹೋಗಿದ್ದ. ಆದರೆ ಕಾಂಚನ್ ಅವನಿಗೆ ನಿರಂತರವಾಗಿ ಕರೆ ಮಾಡಿ ಮುಂಬೈಗೆ ವಾಪಾಸ್ ಬಂದು ತನ್ನನ್ನು ಮದುವೆಯಾಗುವಂತೆ ಬೆದರಿಕೆ ಹಾಕಿದ್ದಳು. ಇದರಿಂದ ಆತ ಡಿಸೆಂಬರ್ 19ರಂದು ಮುಂಬೈಗೆ ಹಿಂತಿರುಗಿದ್ದ. ಕೊನೆಗೆ ಆಕೆಯನ್ನು ಒಂದೆರಡು ಬಾರಿ ಭೇಟಿಯೂ ಆಗಿದ್ದ.
ಜನವರಿ 1ರಂದು ಬೆಳಗಿನ ಜಾವ 1.30ರ ಸುಮಾರಿಗೆ ಕಾಂಚನ್ ಆತನಿಗೆ ಫೋನ್ ಮಾಡಿ ಹೊಸ ವರ್ಷಕ್ಕೆ ಕೇಕ್, ಸ್ವೀಟ್ ತಂದಿರುವುದಾಗಿ ಹೇಳಿದ್ದಳು. ಅವನು ಬಂದಾಗ ಅವನ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ಮಾಡಿ ಕೋಪದಿಂದ ಅವನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆ 25 ವರ್ಷದ ಮಹಿಳೆಯನ್ನು ಜನವರಿ 1ರಂದು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹಲ್ಲೆಗೆ ಒಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


