ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;’ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಕೊಡಿ ವಾರದೊಳಗೆ ಕೊಡದಿದ್ದರೆ ಉಗ್ರ ಹೋರಾಟ’

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;

‘ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಕೊಡಿ
ವಾರದೊಳಗೆ ಕೊಡದಿದ್ದರೆ ಉಗ್ರ ಹೋರಾಟ’

ರಾಜ್ಯದಲ್ಲಿ ರಾಜ್ಯ ಸರ್ಕಾರದ ಧೋರಣೆ ರೇಷನ್ ಕಾರ್ಡ್ ಗೊಂದಲ. ಬಡವರಿಗೆ ಬಹಳ ತೊಂದರೆ. 3.80 ಲಕ್ಷ ಬಿಪಿಎಲ್ ಕಾರ್ಡ್ ಇದಾವೆ ಶಿವಮೊಗ್ಗದಲ್ಲಿ. 2780 ಮಾತ್ರ ಏಪಿಎಲ್ ಆಗಿ ಕನ್ವರ್ಟ್ ಮಾಡಿದೀವಿ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ.
ಗೊಂದಲ ವಿಪರೀತ ಇದೆ. ಸರ್ಕಾರ ಕೂಡಲೇ ಪರಿಹಾರ ಕಂಡುಕೊಳ್ಳಬೇಕು.ಆಹಾರ ಸಚಿವ ಮುನಿಯಪ್ಪ ವಾರದಲ್ಲಿ ಸರಿ ಮಾಡದಿದ್ದರೆ ಬಡವರ ಜೊತೆ ಹೋರಾಟ ಮಾಡ್ತೀವಿ.

ರಾಜ್ಯ ಸರ್ಕಾರದ ಧೋರಣೆ ಏನೇ ಇರಲಿ. ರದ್ದಾದ ಕಾರ್ಡ್ ಗಳನ್ನು ಮರಳಿ ಕೊಡಿ ಅಧಿಕಾರಿಗಳೇ. ಗುಡಿಸಲಲ್ಲಿರೋ ಬಡವರ ಹೊಟ್ಟೆ ಮೇಲೆ ಹೊಡೀಬೇಡಿ. ಬಿಪಿಎಲ್ ಬಂದ್ ಆದ್ರೆ ಬಡವರು ಆತ್ಮಹತ್ಯೆ ವಿಪರೀತವಾಗುತ್ತೆ. ರೇಷನ್ ರದ್ದಿನ ಕಾನೂನು ಹೊಸದಲ್ಲ. ಬಡವರ ಪರವಾಗಿ ಈ ಸರ್ಕಾರ ಇರಬೇಕು.

ರಾಜ್ಯ ಸರ್ಕಾರ ದಿವಾಳಿ ಆಗಿದೆ. ಶ್ರೀಮಂತರನ್ನು ಹುಡುಕಿ ಖಜಾನೆ ತುಂಬಿಕೊಳ್ಳಿ. ಹೊರ ರೋಗಿಗಳಿಗೂ ಭಾರ ಹಾಕೋ ಕೆಲಸ ಮಾಡ್ತಿದ್ದೀರಿ. ಬಿಪಿಎಲ್ ಕಾರ್ಡ್ ತೆಗೆಯಲೇಬಾರದು. ಬಿಪಿಎಲ್ ಕಾರ್ಡ್ ವಾಪಸ್ ಕೊಡೋವರೆಗೂ ಬಿಡೋಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿ ಸರಿಪಡಿಸಿ. ವಾರದೊಳಗೆ ಆಗದಿದ್ದರೆ ತೀವ್ರ ಹೋರಾಟ ಖಂಡಿತ.

ಹೋರಾಟ ಮಾಡಿದ್ರೇನೇ ಸಮಸ್ಯೆ ಬಗೆಹರಿಸೋದಾ? ಆಶ್ರಯ ಮನೆ ಬೊಮ್ಮನಕಟ್ಟೆ ಖಾತೆಗೆ ದೃಢೀಕರಣ ಕೊಡಬೇಕು. ಅದಕ್ಕೂ ಲಂಚ ನಡೀತಿದೆ. ಕೂಲಿ ಮಾಡೋರಿಂದಲೂ ಹತ್ತು ಸಾವಿರ ರೂ., ಗಳವರೆಗೆ ವಸೂಲು ಮಾಡಲಾಗ್ತಿದೆ.ಆಯುಕ್ತರು ಗಮನಿಸಬೇಕು

ಕಾರ್ಪೊರೇಷನ್ ಬದುಕಿದೆಯೋ ಸತ್ತಿದೆಯೋ? ನೀರು ಬರ್ತಿಲ್ಲ. ಇ- ಖಾತೆಗೆ ಹಣ ವಸೂಲು ನಡೀತಿದೆ. ರಸ್ತೆಗಳು ಕಣ್ಮರೆ ಆಗ್ತಿವೆ. ಗುಂಡಿಗಳು ವಿಪರೀತ ಆಗಿವೆ. ಕಾರ್ಪೊರೇಷನ್ ಇದೆಯಾ? ಹಣ ಹಂಚಿಕೊಂಡು ಅಧಿಕಾರಿಗಳು ಆರಾಮಿದಾರೆ. ಜನ ಸಾಯ್ತಿದ್ದಾರೆ. ಕಮೀಷನರ್ ಗಮನಿಸಿ.

ಆಶ್ರಮ ಮನೆಗಳನ್ನು ನಿಗದಿತ ಸಮಯದೊಳಗೆ ನೀಡಿ.
ಮುಂದಿನ ಸೋಮವಾರದ ನಂತರ ತೀವ್ರ ಹೋರಾಟ.

ವಕ್ಫ್ ಆಸ್ತಿ, ಅಂಬೇಡ್ಕರ್ ಅವಮಾನ, ಗುತ್ತಿಗೆಯಲ್ಲಿ ಮೀಸಲಾತಿ ಬಗ್ಗೆ ಮಾತಾಡಿದ್ದೆ. ನನ್ ಮೇಲೆ ನಾನ್ ಬೇಲಬಲ್ ಕೇಸು ಹಾಕಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೂಡ ಆರ್ ಎಸ್ ಎಸ್ ಕುರಿತು ಕೊಲ್ಲಿ ಎಂದಿದ್ದಾರೆ. ಅವರ ಮೇಲೂ ಕೇಸು ಹಾಕಿ, ಬಂಧಿಸಿ. ಕಾಂಗ್ರೆಸ್ ನವರು ನನ್ನನ್ನು ಬಂಧಿಸಲು ಹೋರಾಟ ಮಾಡಿದರೋ ಖರ್ಗೆಯವರನ್ನು ಬಂಧಿಸಲು ಹೋರಾಟ ಮಾಡಿದರೋ? ಖರ್ಗೆ ವಿರುದ್ಧ ನಾನ್ ಬೇಲಬಲ್ ವಾರಂಟ್ ಯಾಕೆ ಹೊರಡಿಸಿಲ್ಲ.

ವಕ್ಫ್ ಆಸ್ತಿ ಬಗ್ಗೆ ಕೇಂದ್ರದ ಸಮಿತಿ ನಿರ್ಮಾಣ. ಆದರೆ, ಕಾಂಗ್ರೆಸ್ ಸರ್ಕಾರ ಈ ಸಮಿತಿಯ ಬಿಲ್ ಸಿದ್ಧತೆಗೆ ಸಹಕರಿಸುತ್ತಿಲ್ಲವೇಕೆ? ದೇಶದಲ್ಲಿ ಇಂಥ ಸ್ಥಿತಿ ಬಂದಿರುವುದು ದುರಂತ.

ಸರ್ವ ಜನಾಂಗದ ಶಾಂತಿಯ ತೋಟ ಅಂತೀರಿ. ಆದರೆ, ಒಂದು ಕಣ್ಣಿಗೆ ಸುಣ್ಣ ಯಾಕೆ? ಪ್ರಧಾನಿಗಳೇ ವಕ್ಫ್ ಪದವೇ ಇಲ್ಲದಂತೆ ಮಾಡಿ ಅವರವರ ಆಸ್ತಿ ಉಳಿಯಲು ಬಿಲ್ ತನ್ನಿ…