ಆತ್ಮಹತ್ಯೆಗೆ ಹೊರಟಿದ್ದ ವ್ಯಕ್ತಿಯನ್ನು ಕಾಪಾಡಿದ ಪೊಲೀಸರು*
*ಆತ್ಮಹತ್ಯೆಗೆ ಹೊರಟಿದ್ದ ವ್ಯಕ್ತಿಯನ್ನು ಕಾಪಾಡಿದ ಪೊಲೀಸರು*
ಶಿವಮೊಗ್ಗದ ಆಲ್ಕೊಳದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬನು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಮ್ಮ ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ ತಿಳಿಸಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.
ERSS 112 ತುರ್ತು ಸಹಾಯವಾಣಿಗೆ ಈ ಸಂಬಂಧ ಕರೆ ಬಂದ ಮೇರೆಗೆ, ERSS 112 ವಾಹನದ ಪೊಲೀಸ್ ಅಧಿಕಾರಿಗಳಾದ ವಿನೋಬನಗರ ಪೊಲೀಸ್ ಠಾಣೆಯ CHC ಜಗದೀಶ್ ಹಾಗೂ ಚಾಲಕ ಮಂಜುನಾಥ್ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ಹೋಗಿ *ಮನೆಯ ಬಾಗಿಲನ್ನು ತೆರೆದು ವ್ಯಕ್ತಿಗೆ ಧೈರ್ಯ ತುಂಬಿ, ಮನವರಿಕೆ ಮಾಡುವ ಮೂಲಕ ಜೀವಕ್ಕೆ ಯಾವುದೇ ಅಪಾಯವಾಗದಂತೆ ತಡೆದು ಜೀವವನ್ನು ರಕ್ಷಿಸಿದ್ದಾರೆ.
ಈ ಸಂದರ್ಭದಲ್ಲಿ ತುಂಗಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿಪಿಸಿ ಪ್ರಭು ಮತ್ತು ಕಿರಣ ರವರೂ ಸಹ ಹಾಜರಿದ್ದರು.
ಈ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಉತ್ತಮವಾದ ಕಾರ್ಯವನ್ನು ಪೋಲಿಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ ಐಪಿಎಸ್ ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.