ಫೆ.24ಕ್ಕೆ ಜಿಲ್ಲಾಮಟ್ಟದ ಬೃಹತ್ ಗ್ಯಾರಂಟಿ ಸಮಾವೇ- ಸ್ಥಳ ಪರಿಶೀಲಿಸಿದ ಮಧು ಬಂಗಾರಪ್ಪ- ಅಕ್ಕ ಮಹಾದೇವಿ ಹೆಸರು ಅಂತಿಮ*

*ಫೆ.24ಕ್ಕೆ ಜಿಲ್ಲಾಮಟ್ಟದ ಬೃಹತ್ ಗ್ಯಾರಂಟಿ ಸಮಾವೇ- ಸ್ಥಳ ಪರಿಶೀಲಿಸಿದ ಮಧು ಬಂಗಾರಪ್ಪ- ಅಕ್ಕ ಮಹಾದೇವಿ ಹೆಸರು ಅಂತಿಮ*

ಶಿವಮೊಗ್ಗ ಜಿಲ್ಲಾ ಮಟ್ಟದ ಬೃಹತ್ ಗ್ಯಾರಂಟಿ ಸಮಾವೇಶ ಫೆ.24 ರಂದು ನಡೆಯಲಿದ್ದು, ಈ ಸಮಾವೇಶ ನಡೆಯಲಿರುವ ಅಲ್ಲಮ ಪ್ರಭು ಮೈದಾನಕ್ಕೆ ಇಂದು ಬೆಳಿಗ್ಗೆ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಚರ್ಚಿಸಿದರು.

ಪರಿಶೀಲನೆಯ ನಂತರ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯ ಫಲಾನುಭವಿಗಳು ಸುಮಾರು 60 ಸಾವಿರ ಸಂಖ್ಯೆಯಲ್ಲಿ ಆಗಮಿಸಿ ಹಬ್ಬದ ವಾತಾವರಣ ನಿರ್ಮಿಸಲಿದ್ದಾರೆ. ಆ ಹೆಣ್ಣುಮಕ್ಕಳೇ ಹೆತ್ತ ರಾಜ್ಯ ಸರ್ಕಾರದ ಈ ಸಮಾವೇಶ ಅತ್ಯಂತ ಯಶಸ್ವಿಯಾಗಲಿದೆ. ತಾಲ್ಲೂಕುಗಳಲ್ಲಿ ನಡೆಸಿದ ಸಮಾವೇಶಗಳ ಫೀಡ್ ಬ್ಯಾಕ್ ಕೂಡ ಅದ್ಭುತವಾಗಿದೆ ಎಂದರು.

ಈ ಸಮಾವೇಶವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸರ್ಕಾರದ ಅನೇಕ ಮಂತ್ರಿಗಳು ಉಪಸ್ಥಿತರಿರುತ್ತಾರೆ. ಜೊತೆಗೆ, ಈ ಮೈದಾನಕ್ಕೆ ಅಲ್ಲಮ ಪ್ರಭು ಹೆಸರನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿರುವುದರಿಂದ ಆ ನಾಮಫಲಕವನ್ನು, ಅಲ್ಲಮನ ವಚನಗಳ ಕಾಂಪೌಂಡ್ ಗ್ಯಾಲರಿಯನ್ನು ಡಿಕೆಶಿಯವರೇ ಅನಾವರಣ ಮಾಡಲಿದ್ದಾರೆಂದು ಮಧು ಬಂಗಾರಪ್ಪ ಹೇಳಿದರು.

ಜೊತೆ ಜೊತೆಗೆ, ಶಕ್ತಿ ಯೋಜನೆಗೆ ಸಹಕಾರಿಯಾಗಲೆಂದು ಶಿವಮೊಗ್ಗ ಜಿಲ್ಲೆಗೆ 100 ಹೊಸ ಬಸ್ ಗಳನ್ನು ಕೇಳಿದ್ದು, ಮೊದಲ ಹಂತದಲ್ಲಿ 10 ನೂತನ ಬಸ್ ಗಳ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಡುತ್ತಿದೆ. ಇದಕ್ಕೇ ಸಮಾವೇಶದಂದೇ ಡಿಕೆಶಿ ಚಾಲನೆ ನೀಡಲಿದ್ದಾರೆ.ಇದು ನಿರಂತರ ಪ್ರಕ್ರಿಯೆ ಆಗಿರುತ್ತೆ ಎಂದರು.

ವಿದ್ಯಾರ್ಥಿ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು, ಮೊಟ್ಟೆ ಕೊಡಲಾಗುತ್ತಿದೆ. ಅವರಲ್ಲಿ ಪೌಷ್ಠಿಕತೆ ಹೆಚ್ಚಿಸಲು ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೊದಲ ಹಂತದಲ್ಲಿ 59 ಲಕ್ಷ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ಉದ್ದೇಶಿಸಿದೆ. ಸರ್ಕಾರ ಇಂಥ ಗ್ಯಾರಂಟಿ ಯೋಜನೆಗಳ ಮೂಲಕ ಜನರ ದಿನನಿತ್ಯದ ದಿನಚರಿಯಲ್ಲಿ ವಿಶೇಷ ಪಾತ್ರವಹಿಸುತ್ತಿರುವುದು ಸಂತೋಷದ ವಿಷಯ ಎಂದರು ಮಧು ಬಂಗಾರಪ್ಪ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ ಪಿ ಮಿಥುನ್ ಕುಮಾರ್, ಸಿಇಓ ಲೋಖಂಡೆ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ್, ನಗರಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಮಾಜಿ ಶಾಸಕ ಆರ್.ಪ್ರಸನ್ನ ಕುಮಾರ್, ಎನ್ ರಮೇಶ್, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್,ಮುಹೀಬ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷ, ಸೇರಿದಂತೆ ಹಲವರಿದ್ದರು.

ಅಂತಿಮವಾಗಿ, ಅಲ್ಲಮ ಪ್ರಭು ಮೈದಾನದ ಸಮಾವೇಶದ ವೇದಿಕೆಗೆ ಅಕ್ಕ ಮಹಾದೇವಿ ಹೆಸರನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಂತಿಮಗೊಳಿಸಿದರು.