ಚಿನ್ನ ಎಗರಿಸಿದರಾ ಪೊಲೀಸರು?* *ಸುಮಾರು 2 KG ಚಿನ್ನದಲ್ಲಿ 200 ಗ್ರಾಂ ನೀಡಿದ್ದ ಪೊಲೀಸರು!* *ಏನಿದು ಪ್ರಕರಣ?*

*ಚಿನ್ನ ಎಗರಿಸಿದರಾ ಪೊಲೀಸರು?*

*ಸುಮಾರು 2 KG ಚಿನ್ನದಲ್ಲಿ 200 ಗ್ರಾಂ ನೀಡಿದ್ದ ಪೊಲೀಸರು!*

*ಏನಿದು ಪ್ರಕರಣ?*

ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿ ಅವರಿಂದ ಚಿನ್ನ (Gold) ರಿಕವರಿ ಮಾಡಿದ್ದರೂ ಅವನ್ನು ವಾರಸುದಾರರಿಗೆ ಹಿಂದಿರುಗಿಸದ ಆರೋಪದ ಹಿನ್ನಲೆ ಬೆಂಗಳೂರು ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲೆಯೇ ದೂರು ದಾಖಲಾಗಿದೆ.

ಕೇಂದ್ರ ವಲಯ ಐಜಿ ಲಾಬೂರಾಮ್​ ಅವರಿಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ಈ ಬಗ್ಗೆ ದೂರು ನೀಡಿದ್ದು, ಕಂಪ್ಲೇಂಟ್​ ಆಧರಿಸಿ ಇನ್ಸ್​ಪೆಕ್ಟರ್​ ಸಂಜೀವ್ ಕುಮಾರ್ ಮಹಾಜನ್ ವಿರುದ್ಧ ಹೆಚ್ಚುವರಿ ಎಸ್ಪಿ ನೇತೃತ್ವದ ತನಿಖೆಗೆ ಸೂಚಿಸಲಾಗಿದೆ.

10ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಕುಖ್ಯಾತ ಸುಧಾಕರನ್ ಮತ್ತು ಗ್ಯಾಂಗ್​ ನ ಸಂಜೀವ್ ಕುಮಾರ್ ಮಹಾಜನ್ ಬಂಧಿಸಿದ್ದರು.

ಕಳ್ಳರ ಜೊತೆ ಚಿನ್ನ ಖರೀದಿಸಿದ್ದ ಆರೋಪಿಗಳೂ ಸಿಕ್ಕಿದ್ದರು. ಆದರೆ ಆರೋಪಿಗಳು ಕದ್ದಿದ್ದ ಸುಮಾರು 2 ಕೆ.ಜಿ. ಚಿನ್ನದ ಪೈಕಿ 200 ಗ್ರಾಂಗಳಷ್ಟನ್ನು ಮಾತ್ರ ಸರ್ಕಾರಕ್ಕೆ ಮತ್ತು ಚಿನ್ನ ಕಳೆದುಕೊಂಡವರಿಗೆ ತೋರಿಸಲಾಗಿದೆ. ಉಳಿದಿದ್ದನ್ನುಇನ್ಸ್​ಪೆಕ್ಟರ್​ ಮತ್ತು ಸಿಬ್ಬಂದಿಯೇ ಹಂಚಿಕೊಂಡಿರೋದಾಗಿ ದೂರಲ್ಲಿ ಆರೋಪಿಸಲಾಗಿದೆ.