ಬಿಜೆಪಿ- ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ
*ಬಿಜೆಪಿ- ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ *
ಶಾಸಕರಾದ S n ಚನ್ನಬಸಪ್ಪ,;
ಬಿಜೆಪಿ ಗೆಲುವು ನಿಶ್ಚಿತ ಎಂದು ಸಾಮಾನ್ಯ ಜನ ಮಾತಾಡಿಕೊಳ್ತಿದ್ದಾರೆ. ದೇಶದ ಪ್ರಧಾನಿಯಾಗಿ ಮೋದಿ ಮತ್ತೊಮ್ಮೆ ಆಗಬೇಕೆನ್ನುವ ಹಿನ್ನೆಲೆಯಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಗೆಲ್ತಾರೆ. ಒಟ್ಟು ಪ್ರಯತ್ನ ನಮ್ಮದು.
ಮೊದಲ ಬಾರಿಯ ಹೊಂದಾಣಿಕೆ ಇದಲ್ಲ…ಒಟ್ಟಾಗಿ ಈ ಹಿಂದೆ ಚುನಾವಣೆ ಮಾಡಿದ್ದೇವೆ. 1983ರಲ್ಲಿ ಶಿವಮೊಗ್ಗದಲ್ಲಿ ಆನಂದರಾವ್ ರವರು ಸ್ಪರ್ಧೆ ಮಾಡಿದ್ದಾಗಲೂ ಒಟ್ಟಾಗಿದ್ದೆವು.
ಕೋ ಆರ್ಡಿನೇಷನ್ ಕೆಲಸ ಆಗುತ್ತಿದೆ. ಕಾರ್ಯಕರ್ತರೆಲ್ಲ ಒಗ್ಗಾಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಲ್ಲಿ ಮೋದಿ ಪ್ರಧಾನಿಯಾಗಲು, ರಾಘವೇಂದ್ರರವರು ಇಲ್ಲಿ ಗೆಲ್ಲಲು ಸಮಸ್ಯೆಗಳೇ ಇಲ್ಲ. ಗೆಲುವೊಂದೇ ಮಂತ್ರ ನಮ್ಮದು.
ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಜೈಲಲ್ಲಿದ್ದ ನಾಯಕರೆಲ್ಲ ದೇಶದ ಹಿತದೃಷ್ಟಿಯಿಂದ ಒಂದಾದ ಸಂದರ್ಭವದು. ಅಲ್ಲಿಂದ ಆರಂಭವಾದ ಹೋರಾಟವಿದು.
ನೇಗಿಲು ಹೊತ್ತ ರೈತನ ಇತಿಹಾಸ ದೊಡ್ಡದಿದೆ. ಬಿಜೆಪಿ- ಜೆಡಿಎಸ್ ಅಭೂತಪೂರ್ವ ಗೆಲುವಿಗೆ ವೇದಿಕೆ ಸಿದ್ಧವಾಗಿದೆ.
ಭದ್ರಾವತಿ ಕಾರ್ಯಕರ್ತರ ಸಮಾವೇಶ ದೊಡ್ಡಮಟ್ಟದಲ್ಲಿ ನಡೆದಿದೆ. ಶಿವಮೊಗ್ಗದಲ್ಲೂ 1.50 ಲಕ್ಷ ಮತಗಳಿಂದ ಹೆಚ್ಚಿನ ಗೆಲುವು ದೊರೆಯಲಿದೆ. ಭದ್ರಾವತಿ ಕೂಡ ಲೀಡ್ ಸಿಗಲಿದೆ. ಈಗ ಯಾವುದೇ ಗೊಂದಲವಿಲ್ಲ. ಜೆಡಿಎಸ್ ನಾಯಕರು, ಕಾರ್ಯಕರ್ತರು ದೇಶಕ್ಕೆ ಒಳ್ಳೇದಾಗಲು ಒಟ್ಟಾಗಿದ್ದೇವೆ.
ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷ. ಮೋದಿಯವರನ್ನು ಪ್ರಧಾನಿ ಮಾಡಲು ಇಷ್ಟಪಟ್ಟು ರಾಘವೇಂದ್ರರನ್ನು ಗೆಲ್ಲಿಸಲಿದ್ದಾರೆ. ವಿಶ್ವಾಸವಿದೆ. ಒಳ್ಳೆ ಕೆಲಸಗಳಿಗೆ ಮತದಾರ ಓಲೈಸಲಿದ್ದಾನೆ.
ಈಶ್ವರಪ್ಪರಿಗೆ ನಾನು ಆತ್ಮೀಯನೇ. ಅವರ ಹುಡುಗಾನೇ ನಾನು. ನನ್ನನ್ನು ಬೆಳೆಸಿದ್ದಾರೆ. ನಾನು ಎಲ್ಲರ ಹುಡುಗ. ಬಹಳ ಸಂತೋಷದಿಂದ ಅವರು ಕೆಲಸ ಮಾಡ್ತಾರೆ ಅಂತ ಅನಿಸುತ್ತಿಲ್ಲ. ನಾನು ಬಿಜೆಪಿ ಕಾರ್ಯಕರ್ತ.ಪರಿಸ್ಥಿತಿ ಅವಲೋಕಿಸಿದಾಗ, ನಾನು ಬಿಜೆಪಿ ಜೊತೆಗಿದ್ದೇನೆ. ಇಲ್ಲಿರುವ ಹುಡುಗರೆಲ್ಲ ಈಶ್ವರಪ್ಪರ ಹುಡುಗರೇ.
*ಮಾಜಿ ಶಾಸಕ*
*ಕೆ.ಬಿ.ಪ್ರಸನ್ನ ಕುಮಾರ್;*
ನಾಗರೀಕರ ಹಿತ ಕಾಪಾಡುವ ದೃಷ್ಟಿಯಿಂದ ಈ ದೇಶದಲ್ಲಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕೆಂಬ ದೃಷ್ಟಿಯಿಂದ ಹಿರಿಯರ ತೀರ್ಮಾನದಂತೆ ಜೆಡಿಎಸ್ ನ ಎಲ್ಲರೂ ಬೇಷರತ್ ಆಗಿ ರಾಘವೇಂದ್ರ ಗೆಲುವಿಗೆ ಕಾರಣೀಕರ್ತರಾಗ್ತೇವೆ.
ಯಾವುದೇ ಕಾರಣಕ್ಕೂ ಈ ಬಾರಿ ಶಿವಮೊಗ್ಗ ನಗರದಿಂದ ಅತ್ಯಂತ ಹೆಚ್ಚು ಅಂತರದ ಮತಗಳನ್ನು ರಾಘವೇಂದ್ರ ಪಡೆಯಲಿದ್ದಾರೆ.ಸಾಕಷ್ಟು ಸಭೆಗಳು ಆಗಿವೆ. ನಗರದಲ್ಲಿ ಜಂಟಿ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಹೆಚ್ಚಿನ ಅಂತರದಿಂದ ಗೆಲುವು ನಮ್ಮದೇ. ಯಾವುದೇ ಅನುಮಾನಗಳು ಬೇಡ. ಗೊಂದಲಗಳು ಆರಂಭದಲ್ಲಿ ಇರುತ್ತೆ. ಅದೆಲ್ಲ ಅಂತಿಮವಲ್ಲ.
ಮುಂದಿನ ಸ್ಥಳೀಯ ಚುನಾವಣೆಗಳಲ್ಲೂ ಕೂಡ ಈ ಮೈತ್ರಿ ಮುಂದುವರೆಯಲಿದೆ.
ಈಶ್ವರಪ್ಪರಿಗೆ ಜೆಡಿಎಸ್ ಪಕ್ಷ ನಮ್ಮ ನಾಯಕರ ಮಾತಿನಂತೆ ಮತಹಾಕದೇ ರಾಘವೇಂದ್ರರಿಗೆ ಗೆಲ್ಲಿಸೋದು ಖಚಿತ.
ಕೆಬಿಪಿ ಆಗಲಿ ದೀಪಕ್ ಆಗಲಿ ಕಾಂಗ್ರೆಸ್ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಬೂತ್ ಮಟ್ಟದಿಂದಲೂ ಕೆಲಸ ಮಾಡಿ ರಾಘವೇಂದ್ರರನ್ನು ಗೆಲ್ಲಿಸೋದು ಖಚಿತ.
ಈಶ್ವರಪ್ಪ ಭ್ರಮೆಯಲ್ಲಿದ್ದಾರೆ. ಅವರು ಯಾರದ್ದೋ ಚದುರಂಗದಾಟಕ್ಕೆ ಕಾಯಿನ್ ಆಗ್ತಿದ್ದಾರೆ. ಇದು ನನ್ನ ಸ್ವಂತದ ಅಭಿಪ್ರಾಯ.
ಈಶ್ವರಪ್ಪರಿಗೆ ಮತಗಳೇ ಬೀಳಲ್ವ? ಎಂಬ ಪ್ರಶ್ನೆಗೆ ಉತ್ತರಿಸಿದ ಕೆಬಿಪಿ, ಮತದಾರ ಬುದ್ದಿವಂತನಿದ್ದಾನೆ. ಅವರು ಪಗಡೆ ಕಾಯಿನ್ ಅಷ್ಟೇ. ಅದನ್ನು ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸ್ತೇನೆ.
ಜೆಡಿಎಸ್ ಸಂಪೂರ್ಣ ಬೆಂಬಲ ನೀಡುವುದಾಗಿ ಈಶ್ವರಪ್ಪ ಹೇಳುತ್ತಿದ್ದಾರೆ. ಅದೆಲ್ಲ ಸುಳ್ಳು.
*ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್;*
ಇದು ಕೇಂದ್ರದಲ್ಲಾಗಿರೋ ಮೈತ್ರಿ. ಈ ಬಗ್ಗೆ ಯಾವುದೇ ಅನುಮಾನಗಳೂ ಬೇಡ. ಹಲವು ಜಂಟಿ ಕಾರ್ಯಕ್ರಮಗಳಾಗಿವೆ. ಪ್ರತಿದಿನ, ಪ್ರತಿ ವಾರ್ಡಲ್ಲಿ ಏನೇನು ಕಾರ್ಯಕ್ರಮ ಮಾಡಬೇಕೆಂಬುದನ್ನು ನಗರಾಧ್ಯಕ್ಷ ದೀಪಕ್ ಸಿಂಗ್ ಯೋಜಿಸಿಕೊಂಡಿದ್ದಾರೆ.
ಎನ್ ಡಿಎ ಗಷ್ಟೇ ನಮ್ಮ ಸಹಕಾರ. ಈಶ್ವರಪ್ಪರಿಗೆ ಜೆಡಿಎಸ್ ಬೆಂಬಲ ನೀಡಲು ಸಾಧ್ಯವೇ ಇಲ್ಲ.