ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಬಿ.ಎ.ರಮೇಶ್ ಹೆಗ್ಡೆ ಪತ್ರಿಕಾಗೋಷ್ಠಿ* *ಶಿವಮೊಗ್ಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎನ್.ರಮೇಶ್ ರವರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿ ಮಾಡಿದ ರಮೇಶ್ ಹೆಗಡೆ* *ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ* *ಸಂಸದ ಬಿ.ವೈ.ರಾಘವೇಂದ್ರರೇ ಕಾರಣ*

*ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಬಿ.ಎ.ರಮೇಶ್ ಹೆಗ್ಡೆ ಪತ್ರಿಕಾಗೋಷ್ಠಿ*

*ಶಿವಮೊಗ್ಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎನ್.ರಮೇಶ್ ರವರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿ ಮಾಡಿದ ರಮೇಶ್ ಹೆಗಡೆ*

*ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ*
*ಸಂಸದ ಬಿ.ವೈ.ರಾಘವೇಂದ್ರರೇ ಕಾರಣ*

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಡಬಲ್ ಇಂಜಿನ್ ಸರ್ಕಾರವೇ ಕಾರಣ.

ಈ ಹಿಂದೆ ಸಿದ್ದರಾಮಯ್ಯರ ನೇತೃತ್ವದಲ್ಲಿ 2015,2016,2017 ರಲ್ಲಿ 9,129 ಎಕರೆ ಅರಣ್ಯ ಭೂಮಿಯನ್ನು ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಹಾಗೂ ಪುನರ್ ವ್ಯವಸ್ಥೆ ಸಲುವಾಗಿ 56 ಡಿ ನೋಟಿಫಿಕೇಶನ್ ಆದೇಶ ಹೊರಡಿಸಿ ಹಕ್ಕುಪತ್ರ ಮಂಜೂರು ಮಾಡಿತ್ತು.

ಆದರೆ, ರಾಘವೇಂದ್ರ ಇದನ್ನು ಕಾಂಗ್ರೆಸ್ ಸರ್ಕಾರದ ಪಾಪದ ಕೂಸು ಎನ್ನುತ್ತಾರೆ. ಆದರೆ, 2021 ರ ಮಾರ್ಚ್ 4 ರಂದು ಗಿರೀಶ್ ಆಚಾರ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಸೂಡೂರು ಗ್ರಾಮದ ಕೂಡಿ ಅರಣ್ಯ ಪ್ರದೇಶದ 260 ಎಕರೆ ಅರಣ್ಯ ಭೂಮಿ ಡಿ ನೋಟಿಫಿಕೇಶನ್ ಆದೇಶ ರದ್ದಾಗಿತ್ತು.
ಶರಾವತಿ ಹಕ್ಕುಪತ್ರ ಕೊಟ್ಟಿರೋ ಸಂದರ್ಭದಲ್ಲಿ
ಆಗೆಲ್ಲ ಹಾಡಿ ಹೊಗಳಿದ್ದ ರಾಘವೇಂದ್ರ ಈಗ ಟೀಕೆ ಮಾಡ್ತಿದ್ದಾರೆ. ಬಿಜೆಪಿಗೆ ಇದು ಚುನಾವಣಾ ವಿಷಯವಷ್ಟೇ. ಪ್ರಾಮಾಣಿಕ ಪ್ರಯತ್ನ ಮಾಡುವಲ್ಲಿ ರಾಘವೇಂದ್ರ ಸೋತಿದ್ದಾರೆ.

ಈ ರಾಜಕೀಯ ನಾಟಕ ಬಿಡಬೇಕು ರಾಘವೇಂದ್ರ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ, ಒಂದು ಬಾರಿ ಸಂಸದರಾಗಿ, ಬಿ ವೈ ರಾಘವೇಂದ್ರ ಮೂರು ಬಾರಿ ಸಂಸದರಾಗಿ ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ದೊರಕಿಸುವಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ.

ಎರಡು ವರ್ಷಗಳ ಸುದೀರ್ಘ ಅವಧಿಯಲ್ಲಿ ಎಲ್ಲೂ ಬಿಜೆಪಿ ಶರಾವತಿ ಸಂತ್ರಸ್ತರಿಗೆ ಸ್ಪಂದಿಸಿಲ್ಲ. ರಾಘವೇಂದ್ರ ಈ ರಾಜಕೀಯ ನಾಟಕ ಬಿಡಬೇಕು. ಕಾಂಗ್ರೆಸ್ ಸರ್ಕಾರ ಈಗ ಸುಪ್ರೀಂ ಕೋರ್ಟಿಗೆ ಶರಾವತಿ ಸಂತ್ರಸ್ತರ ಪರವಾಗಿ ಮಧ್ಯಂತರ ಅರ್ಜಿ ಸಲ್ಲಿಸಿದೆ…

ಸುದ್ದಿಗೋಷ್ಠಿಯಲ್ಲಿ;
ಎಸ್.ಟಿ.ಹಾಲಪ್ಪ, ರಮೇಶ್ ಇಕ್ಕೇರಿ, ಹೆಚ್.ಎಂ.ಮಧು, ಶ್ರೀನಿವಾಸ್ ಮತ್ತಿತರರು ಇದ್ದರು.