ಹೀಗೆ ನಾ ಭಾಷಣ ಮಾಡೋದು ಮಹಾ ವಿನಾಶದ ಸೂಚನೆಯೋ ಅಥವಾ ಜಗದೋದ್ಧಾರಕ ಮುನ್ಸೂಚನೆಯೋ…*
*ಹೀಗೆ ನಾ ಭಾಷಣ ಮಾಡೋದು ಮಹಾ ವಿನಾಶದ ಸೂಚನೆಯೋ ಅಥವಾ ಜಗದೋದ್ಧಾರಕ ಮುನ್ಸೂಚನೆಯೋ…* ಏ.14- ಒಂದು ಕಡೆ ಭಾರತದ ಬೆಳಕು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ…ಇನ್ನೊಂದು ಕಡೆ ಪ್ರೆಸ್ ಟ್ರಸ್ಟ್ ಶಿವಮೊಗ್ಗದ ಪ್ರಶಸ್ತಿ ಪ್ರದಾನ ಸಮಾರಂಭದ ಸಂಭ್ರಮ…ಆ ಸಂಭ್ರಮದೊಳಗೆ ಮತ್ತೊಂದು ಸಂಭ್ರಮ ವಿತ್ತು- ನನ್ನ ಪ್ರೀತಿಯ ಲೇಖಕ ನಾಡೋಜ ಕುಂ.ವೀರಭದ್ರಪ್ಪ ಮತ್ತು ಬಹಳ ಹತ್ತಿರವಿದ್ದೂ ದೂರ ಇರುವ ರಾಜಕಾರಣಿ ಬಿ.ಎಲ್.ಶಂಕರ್ ರವರ ಜೊತೆಗಿದ್ದು ಅರ್ಥಪೂರ್ಣ ಕ್ಷಣಗಳನ್ನು ಕಳೆಯುವುದು… ಕುಂವೀ ಬಗ್ಗೆ ಪರಿಚಯಿಸುವ ಜವಾಬ್ದಾರಿ ನನಗೆ ಸಿಕ್ಕಿತ್ತು! ಬಹು ತಯಾರಿ ಮಾಡಿಕೊಂಡೇ…