ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು? ರೇಣುಕಾಚಾರ್ಯ ವಿರುದ್ಧ ಕಿಡಿ
ಚಕ್ರವ್ಯೂಹದಿಂದ ಪಾರಾದರಾ ಸಿಎಂ ಸಿದ್ದು? ರೇಣುಕಾಚಾರ್ಯ ವಿರುದ್ಧ ಕಿಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳೆದ ವಾರ ಕರ್ನಾಟಕಕ್ಕೆ ಬಂದರು.ಹೀಗೆ ಬಂದವರು ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಏಕತೆಯ ಮಂತ್ರ ಭೋಧಿಸಿ ಹೋದರು. ಅಂದ ಹಾಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಖರ್ಗೆಯವರು ಇದೇ ಮೊದಲ ಬಾರಿ ಏಕತೆಯ ಮಂತ್ರ ಭೋಧಿಸಿಲ್ಲ.ಬದಲಿಗೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತಳಮಳವೆದ್ದಾಗಲೆಲ್ಲ ಅದೇ ಕೆಲಸ ಮಾಡಿದ್ದಾರೆ. ಹಾಗಂತ ರಾಜಕೀಯ ಬೆಳವಣಿಗೆಗಳ ಮಧ್ಯೆ ಖರ್ಗೆಯವರಿಗೆ ಸಿಎಂ…