*ಪ್ರೇಮಿಗಳಿಗೆ ಬೆಂಬಲಿಸಿದರೆಂದು ಇಬ್ಬರ ಕೊಲೆ ಮಾಡಿದ ಐವರು!* *ಭದ್ರಾವತಿ ನಡುಗಿಸಿದ್ದ ಜೋಡಿ ಕೊಲೆ;* *ಐದು ಜನರನ್ನು ಬಂಧಿಸಿದ ಪೊಲೀಸರು*
*ಪ್ರೇಮಿಗಳಿಗೆ ಬೆಂಬಲಿಸಿದರೆಂದು ಇಬ್ಬರ ಕೊಲೆ ಮಾಡಿದ ಐವರು!* *ಭದ್ರಾವತಿ ನಡುಗಿಸಿದ್ದ ಜೋಡಿ ಕೊಲೆ;* *ಐದು ಜನರನ್ನು ಬಂಧಿಸಿದ ಪೊಲೀಸರು* ಭದ್ರಾವತಿಯ ಅವಳಿ ಕೊಲೆಗಳಿಗೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಿರುವ ಪೊಲೀಸರು, ಪ್ರೇಮಿಸಿ ವಿವಾಹವಾದ ಇಬ್ಬರಿಗೂ ರಕ್ಷಣೆ ನೀಡಿದ್ದಾರೆ. ಭದ್ರಾವತಿಯ ಜೈಭೀಮ್ ಬಡಾವಣೆಯಲ್ಲಿ ಶುಕ್ರವಾರ ಸಂಜೆ ಪ್ರೇಮಿಗಳಿಬ್ಬರನ್ನು ಬೆಂಬಲಿಸುತ್ತಿದ್ದಾರೆಂಬ ಕಾರಣಕ್ಕೆ ಐವರು ಕಿರಣ್(25) ಮತ್ತು ಮಂಜುನಾಥ್(65) ಚಾಕು ಇರಿದು ಕೊಂದಿದ್ದರು. ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ದಿನಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದ ನಂದೀಶ್…


