ಡಿ.ದೇವರಾಜ ಅರಸು-ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಹೆಸರು : ಚಂದ್ರಭೂಪಾಲ*
*ಡಿ.ದೇವರಾಜ ಅರಸು-ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದ ಹೆಸರು : ಚಂದ್ರಭೂಪಾಲ* ಮಹಾ ಮಾನವತಾವಾದಿ ಹಾಗೂ ಹಿಂದುಳಿದವರ, ನೊಂದವರ ಏಳ್ಗೆಗಾಗಿ ಶ್ರಮಿಸಿದ ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ ಹೆಸರು ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ…