ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಕುವೆಂಪು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಸಂಭ್ರಮ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಸಾರ್ಥಕ : ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್*

ಕುವೆಂಪು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಸಂಭ್ರಮ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಸಾರ್ಥಕ : ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್* ಶಿವಮೊಗ್ಗ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್ ತಿಳಿಸಿದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ‌ ಬುಧವಾರ ಏರ್ಪಡಿಸಲಾಗಿದ್ದ ೩೫ ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳೇಸೋಲುಗಳು ಜೀವನದ ಭಾಗ, ಆದರೆ ಅವುಗಳಿಂದ ಕಲಿತು ಮುಂದೆ ಸಾಗುವುದೇ ನಿಜವಾದ ಯಶಸ್ಸು…

Read More

*ಕುವೆಂಪು ವಿವಿ ಘಟಿಕೋತ್ಸವ: ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿನಿಯರು;* *ಅಭಿಷೇಕ್ ಹೆಚ್. ಎಂ.ಗೆ 10 ಚಿನ್ನದ ಪದಕ*

*ಕುವೆಂಪು ವಿವಿ ಘಟಿಕೋತ್ಸವ: ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿನಿಯರು;* *ಅಭಿಷೇಕ್ ಹೆಚ್. ಎಂ.ಗೆ 10 ಚಿನ್ನದ ಪದಕ* ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿಯ ಘಟಿಕೋತ್ಸವದಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರು ಅತಿ ಹೆಚ್ಚು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಅವರಲ್ಲಿ ಪ್ರಮುಖರು: ಅಭಿಷೇಕ್…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧ ಭಾಷೆ ಕೊಟ್ಟಿದ್ದನ್ನು ಹೀಗೂ ನಿಭಾಯಿಸಿಬಿಟ್ಟೆ ನಾನು… ಕಣ್ಣೀರಾಗಲು ಬಯಸಿದ್ದೆ; ಮುಗುಳ್ನಗುವುದು ಅನಿವಾರ್ಯವಾಗ್ಹೋಯ್ತು! ೨ ಪ್ರೇಮವೆಂಬುದು ಬಹುದೊಡ್ಡ ಶಿಕ್ಷೆ… ಜನ್ಮಗಳು ದಾಟಿದರೂ ಶಿಕ್ಷೆ ಹಾಗೇ ಉಳಿದಿದೆ! ೩ ಬಾ ಹೊರಟು ಬಿಡೋಣ; ನಿನ್ನ ದಾರಿ ನನ್ನತ್ತ ಮಾಡಿ ನನ್ನ ದಾರಿ ನಿನ್ನತ್ತ ಮಾಡಿ ೪ ಬದುಕು ಮೆಲ್ಲ ಮೆಲ್ಲಗೆ ಕಲಿಸುತ್ತಿದೆ; ಎಷ್ಟು ಪ್ರೀತಿಸುತ್ತೀಯೋ ಅಷ್ಟು ಸುಖವಾಗಿರುತ್ತೀ ಎಂದು! – *ಶಿ.ಜು.ಪಾಶ* 8050112067 (6/5/2026)

Read More

*ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರ ಮೇಲೆ ಕೇಸ್* *ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿ ಜೈಲಿಗೆ ಹೋದ ಮುಜಾಮಿಲ್- ಜಬೀವುಲ್ಲಾ*

*ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರ ಮೇಲೆ ಕೇಸ್* *ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿ ಜೈಲಿಗೆ ಹೋದ ಮುಜಾಮಿಲ್- ಜಬೀವುಲ್ಲಾ* ಹೆಲ್ಮೆಟ್ ಹಾಕದೇ ಪೊಲೀಸರಿಗೇ ಧಮಕಿ ಹಾಕಿದ ಇಬ್ಬರು ಯುವಕರ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಬಂಧಿಸಲ್ಪಟ್ಟ ಇಬ್ಬರಿಗೂ ನ್ಯಾಯಾಲಯ ಜೈಲಿಗೆ ಕಳಿಸಿದೆ. ಮೇ‌.4 ರ ಬೆಳಿಗ್ಗೆ ಎಎಸ್ ಐ ಮಂಜುನಾಥ್ ಮತ್ತು ಪೊಲೀಸ್ ಪೇದೆ ಸಂತೋಷ್ ಗಾಂಧಿ ಬಜಾರಿನಲ್ಲಿ ಸಂಚಾರಿ ಕರ್ತವ್ಯದಲ್ಲಿದ್ದಾಗ ದ್ವಿಚಕ್ರ ವಾಹನ ಸವಾರ ಸೈಯದ್ ಮುಜಾಮಿಲ್ ಹೆಲ್ಮೆಟ್ ಧರಿಸದೇ…

Read More

*ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಆದೇಶ ಕ್ರಮದ ಎಚ್ಚರಿಕೆ; ಸಂತ್ರಸ್ತ ವೃದ್ಧನಿಗೆ ವೃದ್ಧಪ್ಯ ವೇತನ ಮಂಜೂರು*

*ಅಧಿಕಾರಿಗಳಿಗೆ ಸಚಿವರ ಕಟ್ಟುನಿಟ್ಟಿನ ಆದೇಶ ಕ್ರಮದ ಎಚ್ಚರಿಕೆ; ಸಂತ್ರಸ್ತ ವೃದ್ಧನಿಗೆ ವೃದ್ಧಪ್ಯ ವೇತನ ಮಂಜೂರು* ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿಯ ವಡ್ಡರಹಟ್ಟಿ ನಿವಾಸಿ *ಹನುಮಂತಪ್ಪ* ಎಂಬುವವರು ಕಳೆದ ಎರಡು ವರ್ಷಗಳಿಂದ ಸರ್ಕಾರದ ಸೌಲಭ್ಯ ಸಿಗದೆ ಪರದಾಡುತ್ತಿದ್ದರು. ಇವರ ಹೆಸರಿನಲ್ಲೇ ಮತ್ತೊಬ್ಬರು ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ತಾಂತ್ರಿಕ ದೋಷದಿಂದಾಗಿ ಇವರ ವೃದ್ಧಾಪ್ಯ ವೇತನ ಸ್ಥಗಿತಗೊಂಡಿತ್ತು. ಈ ಬಗ್ಗೆ ಹನುಮಂತಪ್ಪನವರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಧು ಬಂಗಾರಪ್ಪ ಅವರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಮಳೆ…

Read More

*ಮೇ 06ರಂದು ನಡೆಯುವ 35ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ* *ಕೋಣಂದೂರು ಲಿಂಗಪ್ಪ, ಕೆ. ವಿ. ಅಕ್ಷರ ಹಾಗೂ ಪ್ರೊ. ಎಚ್. ಎ. ರಂಗನಾಥ್‌ಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್‌*

*ಮೇ 06ರಂದು ನಡೆಯುವ 35ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ* *ಕೋಣಂದೂರು ಲಿಂಗಪ್ಪ, ಕೆ. ವಿ. ಅಕ್ಷರ ಹಾಗೂ ಪ್ರೊ. ಎಚ್. ಎ. ರಂಗನಾಥ್‌ಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್‌* ಶಂಕರಘಟ್ಟ ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ ಕೆ. ವಿ. ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್)‌ ನ ಮಾಜಿ ನಿರ್ದೇಶಕ ಪ್ರೊ. ಎಚ್.‌ ಎ. ರಂಗನಾಥ್‌ ಅವರಿಗೆ ಕುವೆಂಪು ವಿ‍ಶ್ವವಿದ್ಯಾಲಯ…

Read More

*ಶಿವಮೊಗ್ಗ ಎಪಿಎಂಸಿ;* *ಮಾಫಿಯಾ ಮತ್ತು ಅಲ್ಲಿನ ಕಾರ್ಯದರ್ಶಿಯೂ…*

*ಶಿವಮೊಗ್ಗ ಎಪಿಎಂಸಿ;* *ಮಾಫಿಯಾ ಮತ್ತು ಅಲ್ಲಿನ ಕಾರ್ಯದರ್ಶಿಯೂ…* ಶಿವಮೊಗ್ಗದ ಎಪಿಎಂಸಿ ಅಕ್ರಮಗಳು ಅಲ್ಲಿನ ಕಾರ್ಯದರ್ಶಿಗಳ ಹಪಾಹಪಿತನದಿಂದ ಮುಗಿಲು ಮುಟ್ಟುತ್ತಿವೆ. ಈ ಕಾರ್ಯದರ್ಶಿ ಸರ್ಕಾರಕ್ಕೆ ಉದ್ಧಾರ ಮಾಡುವ ಬದಲು ಮಾಡುತ್ತಿರುವುದೇನು? ಸರ್ಕಾರಕ್ಕೆ ಈ ಮುಗ್ಧಮುಖಿ ಕಾರ್ಯದರ್ಶಿಯಿಂದ ಆಗುತ್ತಿರುವ ಅಪಾರ ಪ್ರಮಾಣದ ನಷ್ಟವೇನು? ಇಂಥ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಸದುದ್ದೇಶದಿಂದ ಆರಂಭವಾಗುತ್ತಿರುವ *ಎಪಿಎಂಸಿಯೂ… ಅಲ್ಲಿನ ಕಾರ್ಯದರ್ಶಿಯ ಕಥೆಯೂ…ಮಾಫಿಯಾವೂ…* ನಿಮ್ಮ ಪ್ರತಿ ಈ ವಾರವೇ ಕಾಯ್ದಿರಿಸಿ… – *ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ* (8050112067)

Read More

*ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಬಂಗಾರ ಕಳವು ಪ್ರಕರಣ;* *6 ಗಂಟೆಯೊಳಗೇ ಕಳ್ಳನನ್ನು ಬಂಧಿಸಿದ ತಿರುಮಲೇಶ್ ತಂಡ*

*ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಬಂಗಾರ ಕಳವು ಪ್ರಕರಣ;* *6 ಗಂಟೆಯೊಳಗೇ ಕಳ್ಳನನ್ನು ಬಂಧಿಸಿದ ತಿರುಮಲೇಶ್ ತಂಡ* ಪ್ರಕರಣ ದಾಖಲಾದ 6 ಗಂಟೆಯೊಳಗೆ ಮದುವೆ ಮನೆಯ ಬಂಗಾರದ ಕಳ್ಳರನ್ನು ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದು, ಇವರಲ್ಲಿ ಅಪ್ರಾಪ್ತರೂ ಇರುವುದು ಆತಂಕಕ್ಕೀಡು ಮಾಡಿದೆ. ಏ.30 ರಂದು ನವುಲೆಯ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ಸಂದರ್ಭದಲ್ಲಿ ರೂಮ್ ನಲ್ಲಿ ಬ್ಯಾಗೊಂದರಲ್ಲಿದ್ದ 2.40 ಲಕ್ಷ ರೂ., ಮೌಲ್ಯದ 28 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಯಾರೋ ಕದ್ದೊಯ್ದಿದ್ದರು. ಈ…

Read More

*ಮನೆಗಣತಿಯಲ್ಲಿ ಮಹಾಸಾಧನೆ ಮಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ!*

*ಮನೆಗಣತಿಯಲ್ಲಿ ಮಹಾಸಾಧನೆ ಮಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ!* ಶಿವಮೊಗ್ಗ ಮಹಾನಗರ ಪಾಲಿಕೆಯು ರಾಜ್ಯದಲ್ಲಿನ ಎಲ್ಲಾ 13 ಮಹಾನಗರ ಪಾಲಿಕೆಗಳಲ್ಲಿ ಮನೆಗಣತಿ ಪೂರ್ಣಗೊಳಿಸಿದ ಮೊದಲ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿದೆ. ಆಯುಕ್ತರಾದ ಮಾಯಣ್ಣ ಗೌಡರ ಹಗಲು ರಾತ್ರಿಯ ಶ್ರಮಕ್ಕೆ ಸಫಲತೆ ದೊರೆತಿದೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ಪ್ರೀತಿಯಲ್ಲಿದ್ದರೆ ಕಾಡಿ ಬಿಡುವಳು ಚಿನ್ನದ ಜಿಂಕೆ… ಇಲ್ಲವೇ ಇಲ್ಲವೋ ಪ್ರೀತಿ ಕಾಲಿಂದ ನೂಕೇ ಬಿಡುವಳು ಚಿನ್ನದ ಲಂಕೆ… ಮಹಿಳೆ ಎಂದರೆ ಮೀನಿನ ಹೆಜ್ಜೆ! – *ಶಿ.ಜು.ಪಾಶ* 8050112067 (3/5/2026)

Read More