*ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಬಂಗಾರ ಕಳವು ಪ್ರಕರಣ;* *6 ಗಂಟೆಯೊಳಗೇ ಕಳ್ಳನನ್ನು ಬಂಧಿಸಿದ ತಿರುಮಲೇಶ್ ತಂಡ*

*ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಬಂಗಾರ ಕಳವು ಪ್ರಕರಣ;*

*6 ಗಂಟೆಯೊಳಗೇ ಕಳ್ಳನನ್ನು ಬಂಧಿಸಿದ ತಿರುಮಲೇಶ್ ತಂಡ*

ಪ್ರಕರಣ ದಾಖಲಾದ 6 ಗಂಟೆಯೊಳಗೆ ಮದುವೆ ಮನೆಯ ಬಂಗಾರದ ಕಳ್ಳರನ್ನು ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದು, ಇವರಲ್ಲಿ ಅಪ್ರಾಪ್ತರೂ ಇರುವುದು ಆತಂಕಕ್ಕೀಡು ಮಾಡಿದೆ.

ಏ.30 ರಂದು ನವುಲೆಯ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ಸಂದರ್ಭದಲ್ಲಿ ರೂಮ್ ನಲ್ಲಿ ಬ್ಯಾಗೊಂದರಲ್ಲಿದ್ದ 2.40 ಲಕ್ಷ ರೂ., ಮೌಲ್ಯದ 28 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಯಾರೋ ಕದ್ದೊಯ್ದಿದ್ದರು.

ಈ ಸಂಬಂಧ ತೇವರಚಟ್ನಳ್ಳಿಯ ಸದಾಶಿವಪ್ಪ ವಿನೋಬನಗರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ ಪಿ ನಿಖಿಲ್ ನಿರ್ದೇಶನದಲ್ಲಿ, ಅಡಿಷನಲ್ ಎಸ್ ಪಿ ಕಾರಿಯಪ್ಪ, ಡಿವೈಎಸ್ ಪಿ ಸಂಜೀವ್ ಕುಮಾರ್ ಮಾರ್ಗದರ್ಶನದಲ್ಲಿ , ಪಿಐ ಪ್ರಭಾರ ಸುರೇಶ್ ರವರ ಉಸ್ತುವಾರಿಯಲ್ಲಿ ಪಿಎಸ್ ಐ ತಿರುಮಲೇಶ್ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.

ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಮತ್ತು ಆರೋಪಿ ಶರಾವತಿ ನಗರದ ಅಮ್ಜದ್ ಖಾನ್ @ ಅಂಜು(29) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಂಜುನ ಮೂಲಕ 24 ಗ್ರಾಂ ತೂಕದ (3.75 ಲಕ್ಷ ರೂ.,) ಆಭರಣಗಳು, ಕೃತ್ಯಕ್ಕೆ ಬಳಸಿದ ಎರಡು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಕೆ.ಆರ್.ರಾಜು, ಬಿ.ಚಂದ್ರಾನಾಯ್ಕ, ಎಸ್ ಜಿ ಮಲ್ಲಪ್ಪ, ಎನ್ ಕೆ ಅರುಣ್ ಕುಮಾರ್, ಮನುಶಂಕರ ಇದ್ದರು. ಎಸ್ ಪಿ ನಿಖಿಲ್ ಎಲ್ಲರಿಗೂ ಅಭಿನಂದಿಸಿದ್ದಾರೆ.