ನಾಗೇಶ್ ಹೆಗಡೆ; ಸೇತುವೆ ಹತ್ತಿರ ಸೋತೆವೆ? ಸಂವಿಧಾನವನ್ನು ಮರೆತೆವೆ?
ಸೇತುವೆ ಹತ್ತಿರ ಸೋತೆವೆ? ಸಂವಿಧಾನವನ್ನು ಮರೆತೆವೆ? [ಪ್ರಕೃತಿಯೇ ನಿರ್ಮಿಸಿದ ಸೇತುವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವ ಬದಲು ದೈವೀಶಕ್ತಿಯನ್ನು ಕೊಂಡಾಡುವುದೆ? ಇಂದಿನ ʼಪ್ರಜಾವಾಣಿʼಯ ನನ್ನ ಅಂಕಣದಲ್ಲಿ ಹೀಗೊಂದು ಚರ್ಚೆ:] ಮೊನ್ನೆ ರಾಮನವಮಿಯಂದು ಧರ್ಮ ಮತ್ತು ವಿಜ್ಞಾನದ ಒಂದು ವಿಶಿಷ್ಟ ಮಿಲನ ಸಂಭವಿಸಿತು. ಅಯೋಧ್ಯೆಯ ಬಾಲರಾಮನ ವಿಗ್ರಹದ ಹಣೆಗೆ ತಿಲಕದಂತೆ ಸೂರ್ಯನ ಬೆಳಕು ಬಿತ್ತು. ಅದೇ ವೇಳೆಗೆ ಪ್ರಧಾನಿ ಮೋದಿಯವರು ಶ್ರೀಲಂಕಾದಿಂದ ಬರುವಾಗ ರಾಮಸೇತುವೆಯ ದರ್ಶನ ಪಡೆದರು. ಇವೆರಡೂ ಒಟ್ಟಿಗೆ ಘಟಿಸಿದ್ದು ʼದಿವ್ಯ ಸಂಯೋಗʼ ಎಂದು ಅವರು ಎಕ್ಸ್‌ನಲ್ಲಿ ವಿಡಿಯೊ…