ಸಂಗೀತ ರವಿರಾಜ್ ರ ಮನಮಿಡಿಯುವ ಅಂಕಣ; ಸಂಪಾಜೆಯ ಸಂಜೆಗಳು
ಸಂಪಾಜೆಯ ಸಂಜೆಗಳು ಬಾಲ್ಯವೇ ಹೀಗೆ, ಅನುಭವಗಳ ಸಕ್ಕರೆ ಮತ್ತು ಉಪ್ಪಿನ ಮೂಟೆ. ಹಾಗೆ ನೋಡಿದರೆ ಬದುಕು ಪೂರ್ತಿ ಅನುಭವಗಳೇ ಆಗಿವೆ. ಆ ಕ್ಷಣಕ್ಕೆ ಅದು ಜೀವನದ ಸತ್ಯವಾದರೂ ನಂತರಕ್ಕೆ ಅನುಭವದ ಮೂಟೆಯೊಳಗೆ ನುಸುಳಿಬಿಡುತ್ತದೆ. ಆದರೆ ಈ ಬಾಲ್ಯದಲ್ಲಿ ತಾಪತ್ರಯಗಳು ಇಲ್ಲದೆ ನಮ್ಮಷ್ಟಕ್ಕೆ ನಾವನುಭವಿಸುವ ದಿನಗಳು ಇವೆಯಲ್ಲ, ಈಗ ಆಲೋಚಿಸಿದರೆ ಅದೊಂದು ಸಿಹಿಯಾದ ಅಚ್ಚರಿ. ಹಾಗೆ ನೋಡಿದರೆ ಪ್ರತಿಯೊಬ್ಬರ ಬಾಲ್ಯ ಅತಿಯಾದ ಸಿಹಿಯಿಂದ ಕೂಡಿರುವುದಿಲ್ಲ ಎಂಬುದಂತು ನಿಜ .ಹೆತ್ತವರು ಜಗಳವಾಡಿಕೊಂಡಿದ್ದರೆ , ಮಕ್ಕಳಿಗೆ ಅದಕ್ಕಿಂತ ಮಾನಸಿಕ ನೋವು…