ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಸಾವು*
*ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಸಾವು*
ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಮೃತಪಟ್ಟಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ನಡೆದಿದೆ. ಸೇಡಂ ತಾಲೂಕಿನ ಬುರಗಪಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀ ನರಸಿಂಹಲು (45), ಶಹಬಾದ್ ಪಟ್ಟಣದ ನಿವಾಸಿ ಗಣೇಶ್ ರಾಠೋಡ್ (30) ಮೃತಪಟ್ಟವರು. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಡಿತದ ಚಟ ಬಿಡಿಸುತ್ತೇನೆ ಅಂತ ಸಾಯಪ್ಪ ಮುತ್ಯಾ ಮದ್ಯ (Alcohol) ವ್ಯಸನಿಗಳ ಮೂಗಿನಲ್ಲಿ ಔಷಧಿ ಹಾಕಿದ್ದನು. ಸಾಯಪ್ಪ ಮುತ್ಯಾ ನೀಡಿದ ಔಷಧಿಯಿಂದ ಲಕ್ಷ್ಮೀ ಮತ್ತು ಗಣೇಶ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.