ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಎಲ್ಲರೂ
ಭ್ರಮೆಯಲ್ಲಿರುವರು;
ಅದು ನನ್ನದು- ಇದು ನಿನ್ನದು…

ಯಾವುದು
ಯಾರದ್ದಾಗಿದೆ
ಈವರೆಗೆ?!

2.
ಒಂದು
ಮಣ್ಣಿನ ದೀಪವೂ
ರಾತ್ರಿ ಇಡೀ
ಹೊರಾಡುತ್ತೆ ಕತ್ತಲ ವಿರುದ್ಧ…

ನೀನೋ…

3.
ದುಃಖದ
ಕಾರಣ
ಸಾವಲ್ಲ…

ಸಂಬಂಧ ಎಂಬುದು
ಅರ್ಥವಾಯಿತು
ಹೃದಯವೇ…

– *ಶಿ.ಜು.ಪಾಶ*
8050112067
(22/6/2025)