ಡಿ.ಸಿ.ಮಾಯಾಣ್ಣ; ನಾ ಕಂಡ ನಿಜ ಕಾರ್ಮಿಕ ನಾಯಕ- ವಕೀಲ, ಹೋರಾಟಗಾರ ಕೆ.ಪಿ.ಶ್ರೀಪಾಲ
ಡಿ.ಸಿ.ಮಾಯಾಣ್ಣ; ನಾ ಕಂಡ ನಿಜ ಕಾರ್ಮಿಕ ನಾಯಕ- ವಕೀಲ, ಹೋರಾಟಗಾರ ಕೆ.ಪಿ.ಶ್ರೀಪಾಲ ಕಳೆದ 28 ವರ್ಷಗಳಿಂದ ಮಾಯಾಣ್ಣ ಪರಿಚಿತರಾಗಿದ್ದರು ಯಾವುದೇ ಹೋರಾಟ, ಯಾವುದೇ ಮೆರವಣಿಗೆ ಇದ್ದರು ಮಾಯಾಣ್ಣ ಅದೆ ಕೆಂಪು ಚೀಲ ಬಗಲಿಗೆ ಸಿಗಿಸಿಕೊಂಡು ಆ ಕನ್ಮಡಕದ ನಡುವೆ ಬಿರುವ ಅವರ ಮುಗುಳು ನಗುವಿನ ಆ ಕಣ್ಣುಗಳಲ್ಲಿ ಪ್ರೀತಿಯೇ ತುಂಬಿರುತ್ತಿತ್ತು, ಒಂದು ದಿನವು ಮಾಯಾಣ್ಣ ಸಿಟ್ಟಿನಿಂದ ಮಾತನಾಡಿದ್ದು ನಾನು ನೋಡಲಿಲ್ಲ. ಭದ್ರಾವತಿಯಲ್ಲಿ ನಾವು ಭಾಗವಹಿಸುವ ಯಾವುದೆ ಹೋರಾಟದ ಸಭೆಗಳಿದ್ದರು ಮಾಯಾಣ್ಣರವರದ್ದೆ ಅಧ್ಯಕ್ಷತೆ, ಮಾತನಾಡುತ್ತ ಮಾತನಾಡುತ್ತ ಕೆಲವೊಮ್ಮೆ ಸುದೀರ್ಘವಾಗಿಯೇ…


