*ಸರ್ಕಾರಿ ನೌಕರರೇ ಇನ್ನು ಮೇಲೆ ಹುಷಾರ್!*
*ಸರ್ಕಾರಿ ನೌಕರರೇ ಇನ್ನು ಮೇಲೆ ಹುಷಾರ್!* ರಾಜ್ಯ ಸರ್ಕಾರಿ ನೌಕರರು ಸಭ್ಯ ಬಟ್ಟೆಗಳನ್ನು (Decent Clothes) ಧರಿಸಿಕೊಂಡು ಕಚೇರಿಗೆ ಬರಬೇಕು. ಸರ್ಕಾರದ ಖ್ಯಾತಿಗೆ ಧಕ್ಕೆ ತರುವ ಬಟ್ಟೆಗಳನ್ನು ಧರಿಸಿ ಕಚೇರಿಗೆ ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಕಟ್ಟುನಿಟ್ಟಿನ ಸೂತ್ತೋಲೆ ಹೊರಡಿಸಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಇತರರಿಗೆ…


