ಜೋಗಿ ಬರೆದಿದ್ದು; ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ…
ಜೋಗಿ ಬರೆದಿದ್ದು; ಭಯೋತ್ಪಾದಕತೆ ಒಂದು ದೇಶವನ್ನೇ ಸ್ಮಶಾನ ಮಾಡುವುದು ಹೀಗೆ… ನಾನು ಎರಡು ಸಲ ಕಾಶ್ಮೀರಕ್ಕೆ ಹೋಗಿದ್ದೇನೆ. ಒಮ್ಮೆ ನಾನು, ಉದಯ ಮರಕಿಣಿ, ಲಿಂಗದೇವರು, ಪಿ ಶೇಷಾದ್ರಿ ಸೇರಿದಂತೆ ಹನ್ನೆರಡು ಮಂದಿ. ಇನ್ನೊಮ್ಮೆ ನಾವು ಮೂವರು. 2024ರ ಡಿಸೆಂಬರ್ ಪ್ರವಾಸದಲ್ಲಿ ನಾವು ಖರ್ಚು ಮಾಡಿದ್ದು ತಲಾ 60000 ರೂಪಾಯಿ. ಕಾಶ್ಮೀರಕ್ಕೆ ವರ್ಷಕ್ಕೆ ಎರಡು ಕೋಟಿ ಪ್ರವಾಸಿಗರು ಹೋಗುತ್ತಾರೆ. 2023ರ ಲೆಕ್ಕಾಚಾರ 2.08 ಕೋಟಿ. ಒಬ್ಬರ ವೆಚ್ಚ 40000 ಅಂತ ಇಟ್ಟುಕೊಂಡರೂ 80 ಸಾವಿರ ಕೋಟಿ ಪ್ರವಾಸದಿಂದ ಆದಾಯ….