ಖಜಾನೆ-2ರ ಕಾರ್ಯನಿರ್ವಹಣೆ, ಜಿಎಸ್‌ಟಿ ಮತ್ತು ಐಟಿ ಕುರಿತು ಕಾರ್ಯಾಗಾರ*
*ಖಜಾನೆ-2ರ ಕಾರ್ಯನಿರ್ವಹಣೆ, ಜಿಎಸ್‌ಟಿ ಮತ್ತು ಐಟಿ ಕುರಿತು ಕಾರ್ಯಾಗಾರ*
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿವಮೊಗ್ಗ ಶಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಖಜಾನೆ ಇವರುಗಳ ಸಹಯೋಗದಲ್ಲಿ ಅ.16 ರಂದು ಬೆಳಗ್ಗೆ 10.00ಕ್ಕೆ ಸರ್ಕಾರಿ ನೌಕರರ ಸಭಾಂಗಣ, ಡಿಸಿ.ಕಚೇರಿ ಆವರಣ, ಶಿವಮೊಗ್ಗದಲ್ಲಿ ಖಜಾನೆ-2ರ ಕಾರ್ಯನಿರ್ವಹಣೆ ಹಾಗೂ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಿಂದ ಒಬ್ಬರಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.