ಜಿಲ್ಲಾ ಕೈಗಾರಿಕಾ ಉತ್ಪಾದನಾ ಸರಬರಾಜು, ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಸಕಿ ಶ್ರೀಮತಿ ಬಲ್ಕೀಷ್ ಬಾನು ಅವಿರೋಧ ಆಯ್ಕೆ*
*ಜಿಲ್ಲಾ ಕೈಗಾರಿಕಾ ಉತ್ಪಾದನಾ ಸರಬರಾಜು, ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಸಕಿ ಶ್ರೀಮತಿ ಬಲ್ಕೀಷ್ ಬಾನು ಅವಿರೋಧ ಆಯ್ಕೆ*
ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಉತ್ಪಾದನಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಷ್ ಬಾನು ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ತಿರುಪಯ್ಯ ಆಯ್ಕೆಯಾಗಿದ್ದಾರೆ. 2020 ರಿಂದ 2025 ರ ವರೆಗೆ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಷ್ ಬಾನು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಈಗ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾದರು.


