ಶಾಸಕ ಚೆನ್ನಿ ಈಗಲಾದರೂ ಮಾತಿನ ಶೈಲಿ ಬದಲಾಯಿಸಿಕೊಳ್ಳಲಿ; ವೈ.ಹೆಚ್.ನಾಗರಾಜ್ 

ಶಾಸಕ ಚೆನ್ನಿ ಈಗಲಾದರೂ ಮಾತಿನ ಶೈಲಿ ಬದಲಾಯಿಸಿಕೊಳ್ಳಲಿ; ವೈ.ಹೆಚ್.ನಾಗರಾಜ್

ಶಿವಮೊಗ್ಗ: ಶಾಸಕರಾದ ಮೇಲೆ ಆದ್ರು ಚೆನ್ನಬಸಪ್ಪನವರು ಮಾತಿನ ಮೇಲೆ ಹಿಡಿತ ಸಾಧಿಸಬಹುದಿತ್ತು, ಆದರೆ ಆದರೆ ನಿಂದಿಸುವುದೇ ಅವರ ಹುಟ್ಟುಗುಣ ಎಂದು ಕೆಪಿಸಿಸಿ ಸದಸ್ಯ ವೈ ಎಚ್ ನಾಗರಾಜ್ ಹೇಳಿದ್ದಾರೆ .
ಹೊಡಿ ಬಡಿ ಕಡಿಗಳಿಗೆ ಹೆಸರಾದ ಎಸ್ ಎನ್ ಚನ್ನಬಸಪ್ಪ ಅವರು ಒಬ್ಬ ಜಂಟಲ್ ಮ್ಯಾನ್, ಆದರೆ ಸರ್ಕಾರವನ್ನು ನಿಂದಿಸುವಾಗ ಅದರಲ್ಲೂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಎಚ್ಚರ ತಪ್ಪುತ್ತಾರೆ, ತಾವು ಸರ್ಕಾರದ ಒಂದು ಭಾಗ ಎಂಬುದನ್ನು ಮರೆತು ಸರ್ಕಾರವನ್ನು ಷಂಡ, ಭಂಡ ಎಂದು ನಿಂದಿಸುತ್ತಾರೆ ಇದು ವಿಪರ್ಯಾಸ ವಲ್ಲದೆ ಮತ್ತೇನು ಅಲ್ಲ .
ಆಯಾ ಸರ್ಕಾರಗಳು ಇದ್ದಾಗ ಹಲವು ಪ್ರಕರಣಗಳ ಕೇಸುಗಳನ್ನು ವಾಪಾಸ್ ತೆಗೆದುಕೊಂಡ ಉದಾಹರಣೆಗಳು ನಮ್ಮ ಮುಂದಿವೆ.ಅಷ್ಟಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ಪ್ರಕರಣಕ್ಕೆ ಸಂಬಂಧಿಸಿ ದಂತೆ ನ್ಯಾಯಾಲಯ ಒಪ್ಪಿಗೆ ಕೊಟ್ಟರೆ ಎಂಬ ಮಾತನ್ನು ಸೇರಿಸಿದ್ದಾರೆ, ಕೇವಲ ಹುಬ್ಬಳ್ಳಿ ಪ್ರಕರಣವಲ್ಲದೆ 43 ಪ್ರಕರಣಗಳನ್ನು ವಾಪಾಸ್ ತೆಗೆದುಕೊಳ್ಳಲಾಗಿದೆ, ರೈತರು, ವಿದ್ಯಾರ್ಥಿಗಳು ಕೈಗೊಂಡಿದ್ದ ಪ್ರತಿಭಟನೆಗಳು ವಾಪಸ್ ಆಗಿವೆ ಇದರಲ್ಲಿ ಬಿಜೆಪಿ ಕಾರ್ಯಕರ್ತರೂ ಇದ್ದಾರೆ, ಬಿಜೆಪಿ ಸರ್ಕಾರ ಇದ್ದಾಗಲೂ ಸಹ ಈ ರೀತಿಯ ಅನೇಕ ಕೇಸ್ಗಳನ್ನು ವಾಪಸ್ ತೆಗೆದು ಕೊಳ್ಳಲಾಗಿದೆ .
ಶಾಸಕರು ಮಾತ್ರ ತಮ್ಮ ಬಾಯಿಂದ ಇಂತಹ ಅಸಂಬದ್ಧ ಮಾತುಗಳನ್ನು ಆಡುತ್ತಲೇ ಇರುತ್ತಾರೆ, ಈ ಹಿಂದೆ ಇವರು ಸಿದ್ದರಾಮಯ್ಯ ಅವರ ರುಂಡವನ್ನೇ ಕಡಿಯಬೇಕು ಎಂದು ಹೇಳಿ ಪ್ರಸಿದ್ಧರಾಗಿದ್ದರು. ಈಗ ಮತ್ತೆ ಷಂಡ ,ಭಂಡ ಎಂಬ ಪದ ಪ್ರಯೋಗ ಮಾಡಿದ್ದಾರೆ. ನಾಲಿಗೆ ಸಂಸ್ಕೃತಿ ಹೇಳುತ್ತದೆ ಅಷ್ಟೇ .
ನಗರದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಉತ್ಸವ, ಆಚರಣೆ, ಧರ್ಮ, ಅಷ್ಟಕ್ಕೇ ಮಾತ್ರ ತಮ್ಮ ಶಾಸಕ ಹುದ್ದೆಯನ್ನು ಅವರು ಮೀಸಲಾಗಿಟ್ಟಿದ್ದಾರೆ .ಅವರು ಪಾಲಿಕೆ ಅಧ್ಯಕ್ಷರಲ್ಲ, ಶಾಸಕರು ಎಂಬದನ್ನು ಮರೆತುಬಿಟ್ಟಿದ್ದಾರೆ. ತಮ್ಮ ಮಾತಿನ ಶೈಲಿಯನ್ನು ಅವರು ಬದಲಾಯಿಸಿಕೊಳ್ಳುವುದು ಒಳಿತು. ಅದೃಷ್ಟವಶಾತ್ ಅವರು ಶಾಸಕರಾಗಿದ್ದಾರೆ, ಆ ಸ್ಥಾನಕ್ಕೆ ಗೌರವ ಕೊಡಲಿ ಎಂಬುದು ನಮ್ಮ ಗೌರವ ಪೂರಕ ಸಲಹೆ ಎಂದು ವೈ ಹೆಚ್ ನಾಗರಾಜ್ ತಿಳಿಸಿದ್ದಾರೆ.