ಶಿವಮೊಗ್ಗ ಸಬ್ ರಿಜಿಸ್ಟರ್ ಕಚೇರಿಗೆ ಶಾಶ್ವತ ಪರಿಹಾರ ಒದಗಿಸಿ; ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯ
ಶಿವಮೊಗ್ಗ ಸಬ್ ರಿಜಿಸ್ಟರ್ ಕಚೇರಿಗೆ
ಶಾಶ್ವತ ಪರಿಹಾರ ಒದಗಿಸಿ; ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯ

ಶಿವಮೊಗ್ಗ ನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಇಂದು ಬೆಳಗ್ಗೆ 11:30ಕ್ಕೆ ಕಛೇರಿ ಅನ್ನುವುದು ಒಂದು ಜಾತ್ರಾಸ್ಥಳವಾಗಿತ್ತು. ಜನರು ಓಡಾಡುವುದು ಕಷ್ಟಕರವಾಗಿತ್ತು ಒಂದು ಭಾಗ ಓಡಾಡಿದರೆ ಇನ್ನೊಂದು ಭಾಗ ಬಂದರೆ ಮತ್ಯಾರು ಓಡಾಡಲು ಆಗುವುದಿಲ್ಲ. ಕ್ರಯ ವಿಕ್ರಯದಾರರು ಅಲ್ಲೇ ನೊಂದಣಿಗೆ ಫೋಟೋ ನೀಡಬೇಕು. ಅದಕ್ಕೂ ವಿಶಾಲವಾದ ಸ್ಥಳವಿಲ್ಲ. ಮಹಿಳೆಯರು ಹಿರಿಯರು ಅನ್ನದೆ ತಲ್ಲಾಡಿಕೊಂಡು ಓಡಾಡುವಂತಗಿದೆ. ನೂಕುನುಗ್ಗಲಿನಲ್ಲಿ ಉಸಿರು ಕಟ್ಟಿ ಸಾಯುವ ಸ್ಥಿತಿ ಅಲ್ಲಿ ಇದೆ. ಶಿವಮೊಗ್ಗ ನಾಲ್ಕು ಜನ ಮುಖ್ಯಮಂತ್ರಿಗಳನ್ನು ಕಂಡಂತ ಜಿಲ್ಲೆ. ಏರ್ಪೋರ್ಟ್ ಇರುವಂತಹ ಜಿಲ್ಲೆ. ಇಂತಹ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಒಂದು ಸಬ್ ರಿಜಿಸ್ಟರ್ ಕಚೇರಿ ಸ್ವಂತ ಕಟ್ಟಡ ಇಲ್ಲದೆ ಇರುವುದು ವಿಪರ್ಯಾಸ. ಸಬ್ ರಿಜಿಸ್ಟರ್ ಗಳು ಕೂರುವ ಕೋಣೆಗಳು ವಿಶಾಲವಾಗಿದೆ. ಇವರಿಗೆ ಬರುವಂತಹ ಲಂಚದ ಹಣದಲ್ಲೇ ಒಂದು ಸ್ವಂತದ ಕಟ್ಟಡ ಕಟ್ಟಬಹುದಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರದಾಗಿದೆ. ಇವರುಗಳಿಗೆ ಕಚೇರಿಯ ಅವ್ಯವಸ್ಥೆ. ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ಕಂಡು ಕಾಣದಂತೆ ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ.ಸಬ್ ರಿಜಿಸ್ಟರ್ ಕಛೇರಿ ಇಲ್ಲಿಗೆ ಬದಲಾವಣೆ ಮಾಡಿರುವುದು ಯಾರಿಗೋ ಆದಾಯ ಯಾರಿಗೂ ಲಾಭಕ್ಕೆ ಅನ್ನುವ ಮಾತುಗಳು ಹರಿದಾಡುತ್ತಿದೆ. ಮಾನ್ಯ ಕಂದಾಯ ಸಚಿವರು ಮಾಹಿತಿ ನೀಡದೆ ಅನಿರೀಕ್ಷಿತ ಭೇಟಿ ಮಾಡಿದ್ದಲ್ಲಿ ಇಲ್ಲಿನ ಜನರ ಸಂಕಟ. ತೊಂದರೆ.ಕಚೇರಿ ಎಷ್ಟು ಕಿಷ್ಕಿಂದೆಯಲ್ಲಿ ಇದೆ ಎಂಬುದು ತಮಗೆ ಅರಿವಾಗುತ್ತದೆ. ತಕ್ಷಣ ಇದಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರ ಪರ ತಮ್ಮಲ್ಲಿ ಕೋರುತ್ತೇನೆ
ಎನ್. ಕೆ. ಶ್ಯಾಮಸುಂದರ್
ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಶಿವಮೊಗ್ಗ


