ಶಿವಮೊಗ್ಗ ನೆಹರೂ ರಸ್ತೆ ವರ್ತಕರೊಂದಿಗೆ ಪೊಲೀಸ್- ಪಾಲಿಕೆ ಸಭೆ* *11 ಸಲಹೆ- ಸೂಚನೆ ಪಾಲಿಸದಿದ್ದರೆ ಬೀಳಲಿದೆ ಕೇಸು* *ಸಂಚಾರ ಯೋಗ್ಯವಾಗಲಿದೆ ನೆಹರೂ ರಸ್ತೆ* *ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?*

*ಶಿವಮೊಗ್ಗ ನೆಹರೂ ರಸ್ತೆ ವರ್ತಕರೊಂದಿಗೆ ಪೊಲೀಸ್- ಪಾಲಿಕೆ ಸಭೆ*

*11 ಸಲಹೆ- ಸೂಚನೆ ಪಾಲಿಸದಿದ್ದರೆ ಬೀಳಲಿದೆ ಕೇಸು*

*ಸಂಚಾರ ಯೋಗ್ಯವಾಗಲಿದೆ ನೆಹರೂ ರಸ್ತೆ*

*ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು?*

ಶಿವಮೊಗ್ಗ ನಗರದ ಶುಭಂ ಹೋಟೆಲ್ ಹಾಲ್ ನಲ್ಲಿ ಎಸ್ ಪಿ ಮಿಥುನ್ ಕುಮಾರ್ ಜಿ.ಕೆ.ರವರ ನೇತೃತ್ವದಲ್ಲಿ, *ನೆಹರೂ ರಸ್ತೆ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ನೆಹರು ರಸ್ತೆಯ ವರ್ತಕರ* ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಹಾಜರಿದ್ದವರ ಕುರಿತು ಎಸ್ ಪಿ ಮಿಥುನ್ ಕುಮಾರ್ ಮಾತನಾಡಿ ಸೂಚನೆಗಳನ್ನು ನೀಡಿದರು.

1) *ಹಳೆಯ ಶಿವಮೊಗ್ಗ ಭಾಗಕ್ಕೆ ಗಾಂಧಿಬಜಾರ್* ಯಾವ ರೀತಿ ಪ್ರಮುಖವಾದ ರಸ್ತೆಯಾಗಿರುತ್ತದೆಯೋ ಅದೇ ರೀತಿ *ಹೊಸ ಶಿವಮೊಗ್ಗ ಭಾಗಕ್ಕೆ ನೆಹರೂ ರಸ್ತೆಯು ಪ್ರಮುಖವಾದ* ರಸ್ತೆಯಾಗಿರುತ್ತದೆ. ಇದರ ಜೊತೆಗೆ ನೆಹರೂ ರಸ್ತೆಯು ಹಲವು ರಸ್ತೆಗಳಿಗೆ *ಪ್ರವೇಶ ಬಿಂದು / ಸಂಧಿಸುವ ರಸ್ತೆಯಾಗಿರುತ್ತದೆ.* ಹೆಚ್ಚಿನ ಅಂಗಡಿ ಮುಂಗಟ್ಟುಗಳು ಇರುವ ಕಾರಣದಿಂದ ಸದರಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಸರ್ವೇ ಸಾಮಾನ್ಯವಾಗಿರುತ್ತದೆ.

2) ಈ ಹಿಂದಿನಿಂದಲೂ *ಗಾಂಧಿ ಬಜಾರ್ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯ ಸಮಸ್ಯೆಯು* ಹೆಚ್ಚಿದ್ದು, *ಸಾರ್ವಜನಿಕರ* ಹಿತ ದೃಷ್ಟಿಯಿಂದ ಹಾಗೂ *ಸಂಚಾರ* ಹಿತ ದೃಷ್ಟಿಯಿಂದ ಕೈಗೊಂಡ *ಸುಧಾರಣಾ ಕ್ರಮಗಳಿಂದ* ಈ ದಿನ ಸಮಸ್ಯೆಗೆ ಪರಿಹಾರ ದೊರಕಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ಇರಿಸಿದಂತಹ ನಂಬಿಕೆಯನ್ನು ಉಳಿಸಿಕೊಂಡಿರುತ್ತೇವೆ. ಪೊಲೀಸ್ ಇಲಾಖೆಗೆ ಸಹಕರಿಸಿದ ಎಲ್ಲಾ ನಾಗರೀಕರಿಗೆ ಧನ್ಯವಾದಗಳು.

3) ಯಾವುದೇ ಸಮಸ್ಯೆಗಳು ಕಂಡುಬಂದಾಗ ನಾಗರೀಕರು ಕೂಡಲೇ ಸಂಬಂಧಪಟ್ಟಂತಹ ಇಲಾಖೆಯ ಗಮನಕ್ಕೆ ಸದರಿ ವಿಚಾರಗಳನ್ನು ತಂದಾಗ *ಸಮಸ್ಯೆಗೆ ಸೂಕ್ತ ಕಾಲದಲ್ಲಿ, ಸೂಕ್ತ ರೀತಿಯಲ್ಲಿ ಪರಿಹಾರ* ದೊರಕಿದಂತಾಗುತ್ತದೆ.

4) *ನೆಹರೂ ರಸ್ತೆಗೆ ಹೊಂದಿಕೊಂಡಂತೆ ಹಾಗೂ ನೆಹರೂ ರಸ್ತೆಗೆ ಹತ್ತಿರವಾಗಿ ಸುಮಾರು 21 ಕನ್ಸರ್ ವೆನ್ಸಿ ರಸ್ತೆಗಳಿರುತ್ತವೆ.* ಮಹಾ ನಗರ ಪಾಲಿಕೆಯ ವತಿಯಿಂದ ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದು, ಸದರಿ ರಸ್ತೆಗಳಲ್ಲಿ *ಉಚಿತವಾಗಿ ಪಾರ್ಕಿಂಗ್ ಮಾಡಬಹುದು ಎಂದು ಆದೇಶವನ್ನು* ಸಹಾ ಮಾಡಿಕೊಟ್ಟಿರುತ್ತಾರೆ.

5) ಸದರಿ *ಕನ್ಸರ್ ವೆನ್ಸಿ ರಸ್ತೆಗಳನ್ನು* ಸಮರ್ಪಕವಾಗಿ ಬಳಕೆ ಮಾಡಿದಾಗ ಮಾತ್ರವೇ *ಸಂಚಾರ ದಟ್ಟಣೆಗೆ ಪರಿಹಾರ* ಕಂಡುಕೊಳ್ಳಲು ಸಾಧ್ಯವಿರುತ್ತದೆ. ಈಗಾಗಲೇ *09 ಕನ್ಸರ್ ವೆನ್ಸಿ ರಸ್ತೆಗಳನ್ನು ಈ ಹತ್ತಿರದ ಆಸ್ಪತ್ರೆಗಳಿಗೆ ಬರುವ ವಾಹನಗಳಿಗೆ ಬಳಕೆ ಮಾಡಲು* ಸೂಚನೆ ನೀಡಿದ್ದು, *ಈ ಕ್ರಮದಿಂದ 40 ರಿಂದ 50 ಪ್ರತಿಶತ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು* ಸಾದ್ಯವಿರುತ್ತದೆ ಹಾಗೂ ಕನ್ಸರ್ ವೆನ್ಸಿ ಗಳ ಸಮರ್ಪಕ ಬಳಕೆಯಿಂದ ಮಾತ್ರವೇ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಗುತ್ತದೆ.

6) *ರಸ್ತೆಗಳಲ್ಲಿ ತಮ್ಮ ಅಂಗಡಿ ಮುಂಗಟ್ಟುಗಳ ಪ್ರವೇಶದಲ್ಲಿ, ಕಬ್ಬಿಣದ ಜಾಲರಿ ಫುಟ್ ಬೋರ್ಡ್ ಗಳನ್ನು* ಹಾಕಲಾಗಿದ್ದು, ರಸ್ತೆಯು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿದ್ದು, ರಸ್ತೆಗೆ ಅಡ್ಡಲಾಗಿ ಈ ರೀತಿ ಫುಟ್ ಬೋರ್ಡ್ ಗಳನ್ನು ಹಾಕಿ ಯಾರೂ ಸಂಚಾರಕ್ಕೆ ಅಡಚಣೆ ಮಾಡಬಾರದು.

7) *ನೆಹರೂ ರಸ್ತೆಯಲ್ಲಿ ಅಂದಾಜು 140 ಅಂಗಡಿಗಳಿದ್ದು,* ಎಲ್ಲಾ ಅಂಗಡಿಯವರು ತಮ್ಮ ವಾಹನಗಳನ್ನು ತಂದು ಪಾರ್ಕಿಂಗ್ ಮಾಡಿದರೂ ಸಹಾ ನೂರಾರು ವಾಹನಗಳಾಗುತ್ತವೆ. ಆದ್ದರಿಂದ *ನೀವುಗಳು ಸೋಮವಾರದಿಂದ ನಿಮ್ಮ ವಾಹನಗಳನ್ನು ಹತ್ತಿರದ ಕನ್ಸರ್ವೆನ್ಸಿಯಲ್ಲಿ ಪಾರ್ಕಿಂಗ್ ಮಾಡಿರಿ.* ಇದರಿಂದ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯ.

8) ನಗರ ಪಾಲಿಕೆಯ ವತಿಯಿಂದ *ಅಗತ್ಯ ಲೈಟಿಂಗಸ್ಸ್ ಮತ್ತು ಸಿಸಿ ಟಿವಿ ಅಳವಡಿಕೆ* ಮಾಡಿಕೊಡುತ್ತಾರೆ. ಹಾಗೆಯೇ ನೀವು ಸಹಾ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಂಡರೂ ಸಹಾ ಇನ್ನು ಉತ್ತಮವಾಗಿ ಅಂಗಡಿಗಳ ಮುಂದೆ ಮಾರ್ಕಿಂಗ್ ಮಾಡಲಾಗುತ್ತದೆ. ಪೊಲೀಸ್ ಇಲಾಖೆ / ನಗರ ಪಾಲಿಕೆಯ ಸಹಯೋಗದೊಂದಿಗೆ ಈ ಮಾರ್ಕಿಂಗ್ ಕೆಲಸ ಮಾಡಿಕೊಡಲಾಗುತ್ತದೆ.

9) *ಸುರಕ್ಷತೆಯ ದೃಷ್ಟಿಯಿಂದ* ಎಲ್ಲರೂ ತಮ್ಮ ತಮ್ಮ ಅಂಗಡಿಗಳ ಮುಂದೆ *ಸಿಸಿ ಟಿವಿ ಕ್ಯಾಮೆರಾಗಳನ್ನು* ಅಳವಡಿಸಿಕೊಳ್ಳಿರಿ. ಇದರಿಂದ *ಅಪರಾಧಗಳು ಜರುಗಿದಾಗ ಶೀಘ್ರವಾಗಿ ಪತ್ತೆ ಮಾಡಲು* ಮತ್ತು *ಅಪರಾಧ ಕೃತ್ಯಗಳು ನಡೆಯದಂತೆ ತಡೆಯಲು* ಇದರಿಂದ ಸಾಧ್ಯವಿರುತ್ತದೆ.

10) *8277983204 ಇದು ಶಿವಮೊಗ್ಗ ನಗರದ ಟ್ರಾಫಿಕ್ ಹೆಲ್ಪ್ ಲೈನ್* ನಂಬರ್ ಆಗಿದ್ದು, ಯಾವುದೇ ರೀತಿಯ *ಸಂಚಾರ ಸಮಸ್ಯೆಗಳಿಗೆ ನೀವು* ಸಂಪರ್ಕಿಸಬಹುದು ಹಾಗೆಯೇ ಯಾರಾದರೂ *ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿ ಪಾರ್ಕಿಂಗ್ ಮಾಡಿದ್ದರೂ ಸಹಾ ನೀವು *ಈ ನಂಬರ್ ಗೆ ಫೋಟೋ ವನ್ನು ಕಳುಹಿಸಿದರೆ ಕ್ರಮ* ಕೈಗೊಳ್ಳಲಾಗುತ್ತದೆ.

11) *ನೆಹರೂ ರಸ್ತೆಯಲ್ಲಿ*ಅಸಂಬದ್ಧ ಪಾರ್ಕಿಂಗ್, ಡಬ್ಬಲ್ ಪಾರ್ಕಿಂಗ್, ರಸ್ತೆಗೆ ಅಡಚಣೆಯಾಗಿ ನಿಲ್ಲಿಸಿದ್ದರೆ, ಅಂತಹವರ ವಿರುದ್ಧ *ನೋ ಪಾರ್ಕಿಂಗ್ ವಿಧಿಸುವುದರ ಜೊತೆಗೆ, ವ್ಹೀಲ್ ಲಾಕ್ ಕೂಡ* ಮಾಡಲಾಗುತ್ತದೆ. ಶಿವಮೊಗ್ಗ ನಗರದಲ್ಲಿ *ಮಲ್ಟಿ ಲೆವೆಲ್ ಪಾರ್ಕಿಂಗ್* ಸಹಾ ಇದ್ದು, ಬಳಕೆ ಮಾಡಿಕೊಳ್ಳಿ.

*ಸಭೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ,ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಗೂ ನೆಹರೂ ರಸ್ತೆಯ ವರ್ತಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು*