ಗ್ಯಾರಂಟಿಗಳು ಜಾತಿಗಲ್ಲ ನೀತಿಗೆ; ಡಿ.ಕೆ.ಶಿವಕುಮಾರ್*

*ಗ್ಯಾರಂಟಿಗಳು ಜಾತಿಗಲ್ಲ ನೀತಿಗೆ; ಡಿ.ಕೆ.ಶಿವಕುಮಾರ್*

*ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಶಿವಮೊಗ್ಗ ಜಿಲ್ಲಾ ಸಮಾವೇಶ*

*ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್;*
ಹೋರಾಟಗಾರರ, ಸಮಾಜವಾದಿ ಚಿಂತಕರ ನಾಡಿದು. ಈ ಬೀಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾಗೋಡು, ಬಂಗಾರಪ್ಪರ, ಶಾಂತವೇರಿಗಳ ಹೋರಾಟ ಕೇಳಿದ್ದೆ.
ಚಿಕ್ಕ ಜಿಲ್ಲೆಯಾದ್ರೂ ಹೆಚ್ಚು ಮುಖ್ಯಮಂತ್ರಿಗಳನ್ನು ಕೊಟ್ಟ ನಾಡಿದು. ನಾನು ಬಂಗಾರಪ್ಪರ ಶಿಷ್ಯ. ನಾನಿಟ್ಟುಕೊಂಡ ಕ್ವಾಟ್ರಸ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವಿದೆ. ಬಂಗಾರಪ್ಪರ ಭೇಟಿಗೆ ಹೋಗ್ತಿದ್ದೆ. ಮಾವಿನ ಮರದ ಕೆಳಗೆ ನಾಲ್ಕುವರ್ಷ ಕಾಯ್ತಾ ಕುತ್ಕೋತಿದ್ದೆ. ಬಂಗಾರಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ರು. ರೆವಿನ್ಯೂ ಮಿನಿಸ್ಟ್ರು ಆಗಿದ್ರು.

ಈ ಸಮಾವೇಶಕ್ಕೆ ತಾಯಂದಿರು, ರೈತರು, ಯುವಕರು ಬಂದಿದ್ದಾರೆ. ರಾಜ್ಯದಲ್ಲಿ ದೊಡ್ಡ ಬದಲಾವಣೆ ತಂದಿದ್ದೀರಿ. ಐದು ಗ್ಯಾರಂಟಿಗಳ ಫಲಾನುಭವಿಗಳು ಚಿಂತೆ ಮಾಡೋದು ಬೇಡ. ಕಾಂಗ್ರೆಸ್ ಬಲಿಷ್ಠ ಸರ್ಕಾರವಿದೆ. ಈ ಯೋಜನೆಗಳು ಬರೀ ನಾಲಕ್ಕಲ್ಲ ಒಂಭತ್ತು ವರ್ಷ ಅಲುಗಾಡೋಲ್ಲ. ಐದು ಗ್ಯಾರಂಟಿಗಳು ಸೇರಿ ಕೈ ಗಟ್ಟಿಯಾಯ್ತು. ಬಿಜೆಪಿ ಕಮಲ ಮುದುಡಿ ಹೋಯ್ತು. ದಳ ತೆನೆ ಎಸೆದೋಯ್ತು.
ಬದುಕಿನ ಮೇಲೆ ರಾಜಕಾರಣ ಮಾಡೋಲ್ಲ. ಭಕ್ತಿ ಮೇಲೆ ರಾಜಕಾರಣ ಮಾಡ್ತಾರೆ. ರಾಮಂದಿರದ ಮೇಲೆ ರಾಜಕಾರಣ ಮಾಡಿದ್ರು. ಅಯೋಧ್ಯೆಯಲ್ಲಿ ಪೂಜೆಗೆ ಅವಕಾಶ ಮಾಡಿದ್ದು ರಾಜೀವ್ ಗಾಂಧಿ.
ಗ್ಯಾರಂಟಿಗಳನ್ನು ಜಾತಿ ಮೇಲೆ ಕೊಟ್ಟಿಲ್ಲ. ರಾಜ್ಯದಲ್ಲಿರುವ ಕೊಳೆ, ದರಿದ್ರ ಬಡತನ ತೊಳೆಯಲು ಬೆಳಗಾಂನಲ್ಲಿ ಪಣತೊಟ್ಟಿದ್ವಿ. ಈಗ ಸಾಕ್ಷಿ ನಿಮ್ಮ ಮುಂದಿದೆ ಗೃಹಜ್ಯೋತಿ.
ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿಕೊಡಲಿಲ್ಲ. ಆಗ ಅಕ್ಕಿಯ ಜೊತೆ ಉಳಿದಿದ್ದು ಹಣ ನೀಡಿದ್ವಿ. ಯಾರೂ ಹಸಿವಿನಿಂದ ಇರಬಾರದು.
ತಾಯಂದಿರು ಪ್ರವಾಸ ಸೇರಿದಂತೆ ಎಲ್ಲದಕ್ಕೂ ಬಸ್ ಅವಲಂಭಿಸಿದ್ದಾರೆ. ಬಸ್ ವೆಚ್ಚ ಬಹಳ ಇದೆ. ಕನಿಷ್ಠ ಮೂರು ಸಾವಿರ ರೂ ಶಕ್ತಿ ಯೋಜನೆಯಲ್ಲಿ ಉಳಿಯುತ್ತೆ.
ಎಲ್ಲದರ ಬೆಲೆ ಹೆಚ್ಚಾಗೋಗಿದೆ.ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ತಾಯಂದಿರ ಮೇಲೆ ವಿಶ್ವಾಸವಿಟ್ಟು ದರಿದ್ರ, ಸಂಕಟ ಲಕ್ಷ್ಮೀ ಹೋಗಿ ಭಾಗ್ಯದ ಲಕ್ಷ್ಮೀ ಆಗಬೇಕೆಂದು 1.10 ಕೋಟಿ ಫಲಾನುಭವಿಗಳಿಗೆ ಅನ್ನಭಾಗ್ಯ ನೀಡಿದ್ದೇವೆ.ರಾಷ್ಟ್ರದಲ್ಲಿಯೇ ಮಹತ್ವದ ಯೋಜನೆ ಇದು

ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಒಂದೊಂದು ಶಾಲೆಗೂ ಐದೈದು ಕೋಟಿ ಹಣ ಹಾಕಿ ಅತ್ಯುತ್ತಮ ಶಿಕ್ಷಣ ನೀಡಲಿದ್ದೇವೆ. ದತ್ತು ಆಧಾರಿತ ಯೋಜನೆ ಇದು. ಎರಡ್ಮೂರು ಪಂಚಾಯತ್ ಸೇರಿಸಿ ಒಂದೊಂದು ಶಾಲೆಯ ಸ್ಥಾಪನೆ. ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ದೊಡ್ಡ ಕನಸು. ಇಂಥ ಕಷ್ಟಗಳನ್ನು ನೋಡಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ.
ಯುವನಿಧಿ ಯೋಜನೆ, ಉದ್ಯೋಗ ಸೃಷ್ಠಿಯ ಕೆಲಸ ಜಾರಿಯಲ್ಲಿದೆ. ಈ ಐದು ಬೆರಳುಗಳು ಗಟ್ಟಿಯಾಗದೇ ಯಾವ ಶಕ್ತಿಯನ್ನೂ ತುಂಬಲು ಸಾಧ್ಯವಿಲ್ಲ.
ಭಾರತ್ ಜೋಡೋ ಯಾತ್ರೆ ವೇಳೆ ಒಬ್ಬ ತಾಯಿ ರಾಹುಲ್ ಗಾಂಧಿಯವರಿಗೆ ಸೌತೆಕಾಯಿ ಕೊಟ್ಟಳು. ಕಿವಿಯಲ್ಲಿ ಹೇಳಿದ್ಲು- ನಿನ್ನಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿ ಇದು ಎಂದು ಸಂಭ್ರಮ ಕೊಟ್ಟಿದ್ದ ತಾಯಿ ಈಗಿಲ್ಲ.

ಅರಣ್ಯ ಜಮೀನು ಹಕ್ಕು ನೀಡುವ ನಿರ್ಣಯ ತೆಗೆದುಕೊಳ್ತಿದ್ದೇವೆ. ಗ್ರಾಮೀಣ ಪ್ರದೇಶದ ಅರಣ್ಯ ಜಮೀನಿನಲ್ಲಿರುವ ಬಡವರನ್ನು ಒಕ್ಕಲೆಬ್ಬಿಸಲು ಅವಕಾಶ ಕೊಡಲ್ಲ. ಶರಾವತಿ ಜಮೀನಿನ ರಕ್ಷಣೆಗೆ ಬದ್ಧತೆ ಇದೆ. ನಮ್ಮದು ಬಡತನದ ಮೇಲೆ ಯುದ್ಧ, ಬಡವರ ಮೇಲೆ ಅಲ್ಲ.
ಮೂರ್ನಾಲ್ಕು ವರ್ಷ ಅಧಿಕಾರವಿದ್ದಾಗ ಯಡಿಯೂರಪ್ಪ ಏನು ಕೊಟ್ಟಿದ್ದಾರೆ. ಆರಗ ಜ್ಞಾನೇಂದ್ರಗೆ ಅರ್ಧ ಜ್ಞಾನಾನೂ ಇಲ್ಲ. ಫೋರ್ಟ್ವೆಂಟಿ ಗ್ಯಾರಂಟಿ ಅಂತೀಯಲ್ಲ. ಕೊಟ್ಟ ಕುದುರೆ ಏರದ ಬಿಜೆಪಿ ಸರ್ಕಾರ. ಯಡಿಯೂರಪ್ಪ ಸರ್ಕಾರ ಸೀರೆ ಸೈಕಲ್ ಕೊಟ್ಟಿದ್ರು. ಸಾಲಮನ್ನಾ ಯಾವುದೂ ಮಾಡಿಲ್ಲ. ಮೋದಿ ಗ್ಯಾರಂಟಿ ಹೆಸರಲ್ಲಿ ಹರ್ಕೋತೀವಿ ಅಂತೀರಲ್ಲ…

ಬದುಕಿನ ಹಕ್ಕಿಗೆ ಈ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ.

ಗ್ಯಾರಂಟಿ, ವಾರಂಟಿ, ಕ್ವಾಲಿಟಿ ಎಲ್ಲ ನಿರಂತರವಾಗಿರುತ್ತೆ
ದೊಡ್ಡ ದೇವಸ್ಥಾನಗಳ ಸಂಗ್ರಹಿತ ಹಣದಲ್ಲಿ ಶೇ.10 ರಷ್ಟು ಹಣ ಅರ್ಚಕರಿಗೆ ನೀಡುವ ಬಿಲ್ ಕಿತ್ತೆಸೆದಿದ್ದಾರೆ ಜೆಡಿಎಸ್/ ಬಿಜೆಪಿ. ಆದರೆ, ಮೇಲ್ಮನೆಯಲ್ಲಿ ಮೂರು ತಿಂಗಳಲ್ಲಿ ಪಾಸ್ ಮಾಡಿಸಿ ಅರ್ಚಕರಿಗೆ ಶಕ್ತಿ ತುಂಬಲಿದ್ದೇವೆ.

ಯಡಿಯೂರಪ್ಪರವರೇ, ವಿಜಯೇಂದ್ರರವರೇ, ನೀವೊಂದು ಕರೆಕೊಡಿ, ಗ್ಯಾರಂಟಿ ತಗೋಬೇಡಿ ಅಂತ. ನಿಮಗೇ ಗೊತ್ತಾಗುತ್ತೆ. ಗ್ಯಾರಂಟಿ ವಿಚಾರ, ಉಳುವವನಿಗೆ ಭೂಮಿ ವಿಚಾರ, ಗ್ಯಾರಂಟಿ ಯೋಜನೆಗಳಿಗೆ ಕಮಿಟಿಗಳು ಮಾಡಲಾಗಿದೆ. ರಾಷ್ಟ್ರವೇ ಗಮನಿಸುತ್ತಿದೆ.
ನಾವು ಬೆವರಿನ ಶ್ರಮ ಅರ್ಥಮಾಡಿಕೊಂಡವರು. ಎಲ್ಲರ ರಕ್ತ ಕೆಂಪು. ಮಾನವ ಧರ್ಮದಿಂದ ಬದುಕಬೇಕಿದೆ. ಕಾಂಗ್ರೆಸ್ ಇತಿಹಾಸ ಎಲ್ಲರಿಗೂ ಗೊತ್ತಿದೆ. ಬೇರೆಯವರು ಯಾವ ಯೋಜನೆಗಳನ್ನೂ ತರಲಿಲ್ಲ.

ಬೆಳಗಾವಿಯ ಘಟನೆ. ಮಗನ ಮೃತದೇಹದ ಮುಂದೆ ತಾಯಿ ಗೃಹಲಕ್ಷ್ಮೀ ಯೋಜನೆಯ ಶಕ್ತಿಬಗ್ಗೆ ಮಾತಾಡಿದ್ದು ಸಾರ್ಥಕವಾಗಿದೆ.
ನಿನ್ನಲೇ ದೇಗುಲವಿದೆ ಎಂದು ಹೇಳಿದ್ದು ಅಲ್ಲಮ.ಅಲ್ಲಮನ ಭೂಮಿಯಲ್ಲಿ ಶುಭವಾಗಲಿ. ಮುಂದಿನ ಚುನಾವಣೆಯಲ್ಲಿ ಕೈ ಗಟ್ಟಿ ಮಾಡಿ.

*ಗೋಪಾಲಕೃಷ್ಣ ಬೇಳೂರು ಹೇಳಿದ್ದು;*
* ಅತ್ಯಂತ ದೊಡ್ಡ ಪಂಚ ಯೋಜನೆಗಳಿವು. ಎಲ್ಲ ಜಾತಿ ವರ್ಗ, ಕೂಲಿ ಕಾರ್ಮಿಕರು ಹಾಗೂ ಎಲ್ಲರ ಪರವಾಗಿ ಈ ಗ್ಯಾರಂಟಿಗಳಿವೆ.
ಸರ್ಕಾರ ಕೊಟ್ಟ 2000₹ ಬಹಳ ಜನ ಕಷ್ಟದವರಲ್ಲಿದ್ದವರಿಗೆ ಅನುಕೂಲವಾಗುತ್ತಿದೆ. ಕುಟುಂಬಗಳು ಸಾಕಲ್ಪಡುತ್ತಿವೆ. ಗ್ಯಾರಂಟಿಗಳು ಬೇಡ ಅಂತ ಯಾರಾದರೂ ಹೇಳಲು ಸಾಧ್ಯವೇ?
ಸಿದ್ದರಾಮಯ್ಯರ ಬಜೆಟ್ ಅತ್ಯುತ್ತಮ ಬಜೆಟ್. ಇಂಥ ಬಜೆಟ್ ಯಾರೂ ಕೊಟ್ಟಿಲ್ಲ. ಸರ್ಕಾರ ಈ ಜನರಿಂದ ಬಂದಿದೆ. ಈಗ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತಿದೆ.

ಟೀಕೆ ಟಿಪ್ಪಣಿಗಳು ಸಹಜ. ಫೋರ್ ಟ್ವೆಂಟಿ ಯೋಜನೆ ಅಂದ ಆರಗ ಹೇಳುತ್ತಾರೆ. ಅಲ್ಪಸಂಖ್ಯಾತರಿಗೇಕೆ ಎಂದು ಕೇಳ್ತಾರೆ. ಅವರು ಟ್ಯಾಕ್ಸ್ ಕಟ್ಟೋಲ್ವಾ? ನಿಮ್ಮ ಕಾಲದಲ್ಲಿ ಕೊಟ್ಟಿಲ್ವೇ? ಎಲ್ಲರೂ ಸಮಾನರು.

ಡಿಕೆ ಸಾಹೇಬರೇ, ನೀವು ಬಂಗಾರಪ್ಪರ ಶಿಷ್ಯ. ಅವರ ಪ್ರೀತಿಯ ಪುತ್ರ ಮಧು. ನಾನೂ ಅವರ ಶಿಷ್ಯ. ನಿಮ್ಮ ಎಲ್ಲ ಸಹಕಾರ ಶಿವಮೊಗ್ಗ ಜಿಲ್ಲೆಯ ಮೇಲಿರಲಿ.

ಮೊನ್ನೆ ಗಡ್ಕರಿ ಹೇಳಿದ್ದು ಕೇಳಿದೆ. ಯಾವ ಹೈವೇಗಳೂ ಆಗಿಲ್ಲ. ಸುಮ್ಮನೆ ಮಾತಾಡುತ್ತೀರಿ. ಯಾವ ಕಾಲಮಿತಿಯೂ ಇಲ್ಲದೇ ಸುಮ್ಮನೆ ಮಾತಾಡ್ತೀರಿ. ರಾಜ್ಯ ಸರ್ಕಾರ ಈಗ ಮತ್ತೆ ಕೆಎಸ್ ಆರ್ ಟಿಸಿಯ 5200 ಹೊಸ ಬಸ್ ಗಳ ಗ್ಯಾರಂಟಿ ಕೊಟ್ಟಿದೆ…

*ಫಲಾನುಭವಿಗಳ ಪರವಾಗಿ ಫಾತಿಮಾ ರೋಡ್ರಿಗಸ್ ಮಾತನಾಡಿದ್ದು;*
ಗೃಹಲಕ್ಷ್ಮೀ ಯೋಜನೆ ಬಂದ ನಂತರ ನನ್ನಂಥ ಸಿಂಗಲ್ ಪೇರೆಂಟ್ ಗಳಿಗೆ ಬಹಳ ಅನುಕೂಲವಿದೆ. ನನಗೆ ಉಸಿರಾಟದ ತೊಂದರೆ ಇರೋದ್ರಿಂದ ಪೂರ್ತಿ ಕೆಲಸ ಮಾಡೋಕ್ಕಾಗಲ್ಲ. ಈ ಹಣ ಮೆಡಿಸಿನ್ ಗೆ, ನನ್ನ ಮಗನ ಶಾಲಾ ಫೀಸಿಗೆ ಸಹಾಯವಾಗಿದೆ. ಅಂಗನವಾಡಿಯವರ ಸಹಕಾರದಿಂದ, ಸರ್ಕಾರದ 12000₹ ಈವರೆಗೆ ಬಂದಿದೆ.

*ಫಲಾನುಭವಿ ರಾಜೇಶ್ ಶಿವಮೊಗ್ಗ;*
ನಾನು ರೈತ. ವಿದ್ಯುತ್ ಬಿಲ್ ಕಟ್ಟೋದು ಕಷ್ಟವಿತ್ತು. ದೊಡ್ಡ ಸಂಸಾರದ ಖರ್ಚುಗಳ ಜೊತೆ ಬಿಲ್ ಕಟ್ಟೋದು ಕಷ್ಟವಿತ್ತು. ಗೃಹಜ್ಯೋತಿ ಕಾರಣದಿಂದ ಹಣ ಉಳಿಯುತ್ತಿದೆ

*ಅನ್ನಭಾಗ್ಯದ ಫಲಾನುಭವಿ ಮಧು ಅಬ್ಬಲಗೆರೆ;*
ಹಣ ಮತ್ತು ಅಕ್ಕಿ ಸಿಗ್ತಿರೋದ್ರಿಂದ ಬಹಳ ಸಹಾಯ ಆಗ್ತಿದೆ. ನಾನು ಸರ್ಕಾರಕ್ಕೆ ಆಭಾರಿ

*ಶಾಲಿನಿ ಭದ್ರಾವತಿ*
ಹೌಸ್ ಕೀಪಿಂಗ್ ಕೆಲಸ ನನ್ನದು. ದಿನ ಭದ್ರಾವತಿಯಿಂದ ಶಿವಮೊಗ್ಗ ಬರುತ್ತಿದ್ದೆ. 1500₹ ಖರ್ಚು ಆಗ್ತಿತ್ತು. ಶಕ್ತಿ ಯೋಜನೆಯಿಂದ ಈ ಹಣ ಉಳಿಯುತ್ತಿದೆ.

*ಕಟ್ಟಡ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ಲ್ಯಾಪ್ ಟಾಪ್ ಬಿತರಣೆ ಮಾಡಲಾಯಿತು.*

*ಶಿವಮೊಗ್ಗ ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕರು;*
ಸರ್ಕಾರದ ಯೋಜನೆಗಳು ಭರವಸೆ ನೀಡಿದಂತೆ ಸಫಲತೆ ಕಂಡಿವೆ. ಐದೂ ಗ್ಯಾರಂಟಿಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು
ರೈತರ ಸಮಸ್ಯೆಗಳು ಬಹಳ ಇವೆ. ಆ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು

ರಾಜ್ಯ ಸರ್ಕಾರದ ಗ್ಯಾರಂಟಿಗಳ ಈ ಸಮಾವೇಶ ಸಫಲವಾಗದಾಗಲೇ ಆತ್ಮತೃಪ್ತಿ

*ಮಧು ಬಂಗಾರಪ್ಪ;*

ಐತಿಹಾಸಿಕ ಕಾರ್ಯಕ್ರಮ. ಸ್ತ್ರೀಶಕ್ತಿಯ ಭವ್ಯ ಪ್ರದರ್ಶನ ಇಲ್ಲಿ ಕಾಣುತ್ತಿದ್ದೇವೆ.
ಹೆಣ್ಣುಮಕ್ಕಳ ಪರವಾಗಿ ಡಿಕೆಶಿಯವರಿಗೆ ಧನ್ಯವಾದಗಳು.
ವೇದಿಕೆಯ ಹೆಸರೇ ಅಕ್ಕಮಹಾದೇವಿ. ಇದು ನಮ್ಮ ಹೆಣ್ಣುಮಕ್ಕಳಿಗೆ ಅರ್ಪಣೆ ಮಾಡಲು ಇಟ್ಟ ಹೆಸರು.
ನನಗೆ ಚುನಾವಣೆಯ ಕಮಿಟಿ ಉಪಾಧ್ಯಕ್ಷ ಮಾಡಿದ್ರು ಹಿರಿಯರು. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ವಿ. ಅದೇ ಕಾರ್ಯಕ್ರಮಗಳೀಗ. ನಿಮ್ಮ ಮನೆಯ ಸಮಸ್ಯೆಗಳು ಅರ್ಥ ಮಾಡಿಕೊಂಡ ನಾಯಕರು ಈ ಗ್ಯಾರಂಟಿಗಳನ್ನು ಸದೃಢಗೊಳಿಸಿದರು. ಕರೆಂಟ್ ಮೀಟರ್ ಕಟ್ಟು ಮಾಡುವ ಸಂದರ್ಭ ಈಗಿಲ್ಲ. ಶಕ್ತಿ ಬಂದಿದೆ ಎಲ್ಲರಲ್ಲೂ. ಕಾಂಗ್ರೆಸ್ ಯಾವತ್ತೂ ಬಡವರನ್ನು ಮರೆತಿಲ್ಲ. ಬಂಗಾರಪ್ಪರವರು ಮುಖ್ಯಮಂತ್ರಿಗಳಾಗಿದ್ದಾಗ ಹೆಸರು ಮಾಡಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಂದ. ಕಾಗೋಡು ತಿಮ್ಮಪ್ಪರವರ ಹೆಸರು ಕೂಡ ಅನ್ನ ತಿನ್ನುವ ನಾವೆಲ್ಲ ನೆನಪು ಮಾಡಿಕೊಳ್ಳಬೇಕು.

ತಾಯಂದಿರು ಹೆತ್ತ ಸರ್ಕಾರವಿದು. ವಿರೋಧಿಗಳು ಗ್ಯಾರಂಟಿಗಳು, ಕಾಂಗ್ರೆಸ್ ಸರ್ಕಾರ ಬಾಳಿಕೆ ಬರೋಲ್ಲ ಅಂದಿದ್ರು. ಈಗ ನನ್ನ ಶಿಕ್ಷಣ ಇಲಾಖೆಯ ಖಜಾನೆ ಭರ್ತಿಯಾಗಿದೆ. ಸಿದ್ದರಾಮಯ್ಯರ ಸರ್ಕಾರದ ಖಜಾನೆ ಖಾಲಿಯಾಗಲು ಸಾಧ್ಯವಿಲ್ಲ. ದುಡ್ಡು ಬಡವರಿಗೆ ಕೊಟ್ಟರೆ ಯೋಜನೆ ಸಫಲವಾಗುತ್ತೆ. ಅದಕ್ಕೆ ಈ ಯೋಜನೆಗಳೇ ಅತ್ಯುತ್ತಮ ಉದಾಹರಣೆ. ಇಂಥ ಯೋಜನೆಗಳನ್ನು ಕೊಟ್ಟ ಸಿಂ ಡಿಸಿಎಂ ರವರಿಗೆ ಶಿರಸ್ಟಾಂಗ ನಮಸ್ಕಾರಗಳು.

ನಿಮ್ಮ ಕುಟುಂಬದಲ್ಲಿ ಸರ್ಕಾರದ ಸಾಥ್ ನೀಡುತ್ತಿದೆ. ಎಲ್ಲ ಜನ ಸಂಭ್ರಮದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಇನ್ನಷ್ಟು ಶಕ್ತಿ ತುಂಬಲಿದೆ.