*ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಅಡ್ಡು ಮನೆ ಮೇಲೆ ದಾಳಿ* *ಹೆಣ್ಣುಮಕ್ಕಳೇ ಮನೆಯಲ್ಲಿದ್ದಾಗ ನಡೆದ ದಾಳಿ*
*ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಅಡ್ಡು ಮನೆ ಮೇಲೆ ದಾಳಿ*
*ಹೆಣ್ಣುಮಕ್ಕಳೇ ಮನೆಯಲ್ಲಿದ್ದಾಗ ನಡೆದ ದಾಳಿ*
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ವಾಹಿದ್ (ಅಡ್ಡು) ರವರ ಆರ್ ಎಂ ಎಲ್ ನಗರದ ಮನೆಯ ಮೇಲೆ ಯುವಕನೋರ್ವ ಭಾನುವಾರ ರಾತ್ರಿ ದಾಳಿ ಮಾಡಿ ಮನೆಗೆ ಹಲವು ರೀತಿಯಲ್ಲಿ ಹಾನಿ ತಲುಪಿಸಿದ ಘಟನೆ ನಡೆದಿದೆ.
ಅಡ್ಡು ರವರು ಸೌದಿ ಅರೇಬಿಯಾ ಪ್ರವಾಸದಲ್ಲಿದ್ದು, ಅವರ ಹೆಂಡತಿ, ಮೂವರು ಹೆಣ್ಣು ಮಕ್ಕಳು ಮನೆಯಲ್ಲಿದ್ದಾಗಲೇ ಕಲ್ಲು ತೂರಿದ ಯುವಕ ಕಿಟಕಿಗಳ ಗಾಜುಗಳನ್ನು ಪುಡಿ ಮಾಡಿ ರಂಪಾಟ ಮಾಡಿದ್ದಾನೆ.
ಹೆಣ್ಣು ಮಕ್ಕಳಿಗೆ ಕೊಲೆ ಬೆದರಿಕೆ ಕೂಡ ಹಾಕಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.


