*ಶಿವಮೊಗ್ಗ ಜೈಲಿನ ಬಳಿ ಅನುಮಾನಾಸ್ಪದ ಬಾಳೆಗೊನೆಗಳನ್ನು ತಂದಿಟ್ಟ ಆಟೋ* *ಬಾಳೆಗೊನೆಗಳಲ್ಲಿತ್ತು ಗಾಂಜಾ!* *ಏನಿದು ವಿಶೇಷ ಪ್ರಕರಣ?*
*ಶಿವಮೊಗ್ಗ ಜೈಲಿನ ಬಳಿ ಅನುಮಾನಾಸ್ಪದ ಬಾಳೆಗೊನೆಗಳನ್ನು ತಂದಿಟ್ಟ ಆಟೋ*
*ಬಾಳೆಗೊನೆಗಳಲ್ಲಿತ್ತು ಗಾಂಜಾ!*
*ಏನಿದು ವಿಶೇಷ ಪ್ರಕರಣ?*

ಶಿವಮೊಗ್ಗದ ಜೈಲಿನ ಬಳಿ ಆಟೋರಿಕ್ಷಾದಲ್ಲಿ ಬಾಳೆಗೊನೆಗಳಲ್ಲಿ ಗಾಂಜಾ ತುಂಬಿ ತಂದು ಗೇಟಿನ ಹತ್ತಿರವಿಟ್ಟು ಹೋದ ಘಟನೆ ಬುಧವಾರದಂದು ಮಧ್ಯಾಹ್ನ ನಡೆದಿದೆ.
ಬುಧವಾರ ಮದ್ಯಾಹ್ನ 02:15 ಗಂಟೆ ಸಮಯಕ್ಕೆ *ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಆಟೋದಲ್ಲಿ 05 ಬಾಳೆಗೊನೆಗಳನ್ನು ಆಟೋ ಚಾಲಕನು ಕಾರಾಗೃಹದ ಮುಂಭಾಗಕ್ಕೆ ತಂದು* ಕ್ಯಾಂಟೀನ್ ರವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿ ಗೇಟಿನ ಹತ್ತಿರ ಇಟ್ಟು ತೆರಳಿದ್ದಾನೆ.
ಕಾರಾಗೃಹದ ಮುಖ್ಯ ದ್ವಾರದ ಉಸ್ತುವಾರಿಯಲ್ಲಿದ್ದ ಕೆ.ಎಸ್.ಐ.ಎಸ್.ಎಫ್ ಇನ್ಸ್ ಪೆಕ್ಟರ್ ಆದ ಜಗದೀಶ್ ರವರ ನೇತೃತ್ವದಲ್ಲಿ ಅಧಿಕಾರಿಗಳಾದ ಪ್ರೊ. ಪಿ.ಎಸ್.ಐ ಪ್ರಭು ಎಸ್. ಹಾಗೂ ಸಿಬ್ಬಂದಿಯವರಾದ ಪ್ರವೀಣ ಮತ್ತು ನಿರೂಪಬಾಯಿ ರವರು ಸದರಿ ಬಾಳೆಗೊನೆಗಳನ್ನು ಚೆಕ್ ಮಾಡಿದಾಗ *ಬಾಳೆಗೊನೆಯ ದಿಂಡನ್ನು ಕೊರೆದು ಅದರೊಳಗೆ ಗಾಂಜಾ ಹಾಗೂ ಸಿಗರೇಟನ್ನು ಟೇಪ್ ನಲ್ಲಿ ಸುತ್ತಿ ಇಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ.
ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ.ರಂಗನಾಥ್ ರವರ ದೂರಿನ ಮೇರೆಗೆ* ಮೊಕದ್ದಮೆ ಸಂಖ್ಯೆ 694/2025 ಕಲಂ 42 ಅಮೆಂಡಮೆಂಟ್ ಆಫ್ ಕರ್ನಾಟಕ ಪ್ರಿಸನ್ ಆಕ್ಟ್ & 20(b) (II) (A) NDPS ಆಕ್ಟ್ ರೀತ್ಯ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ *123 ಗ್ರಾಂ ಗಾಂಜಾ ಮತ್ತು ಒಟ್ಟು 40 ಸಿಗರೇಟ್ ಗಳನ್ನು ವಶಕ್ಕೆ* ಪಡೆಯಲಾಗಿದೆ.
ಆರೋಪಿತರ ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


