*ಶಿವಮೊಗ್ಗದ ಜೈಲ್ ಸಿಬ್ಬಂದಿ ಸಾತ್ವಿಕನ ಅಂಡರ್ ವೇರಲ್ಲಿತ್ತು ಗಾಂಜಾ* *ಗಾಂಜಾದೊಂದಿಗೆ ಸಿಕ್ಕಿಬಿದ್ದ ಈ ಜೈಲು ಸಿಬ್ಬಂದಿ ಅರೆಸ್ಟ್*
*ಶಿವಮೊಗ್ಗದ ಜೈಲ್ ಸಿಬ್ಬಂದಿ ಸಾತ್ವಿಕನ ಅಂಡರ್ ವೇರಲ್ಲಿತ್ತು ಗಾಂಜಾ*
*ಗಾಂಜಾದೊಂದಿಗೆ ಸಿಕ್ಕಿಬಿದ್ದ ಈ ಜೈಲು ಸಿಬ್ಬಂದಿ ಅರೆಸ್ಟ್*
ಇಂದು ಬೆಳಿಗ್ಗೆ ಜೈಲು ಸಿಬ್ಬಂದಿ ಅಂಡರ್ ವೇರಲ್ಲಿ ಗಾಂಜಾ ಸಿಕ್ಕಿದ್ದು, ಆತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬೆಳಗ್ಗೆ 10:20 ಗಂಟೆಯ ಸಮಯದಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೆ.ಎಸ್.ಐ.ಎಸ್.ಎಫ್ ಇನ್ಸ್ ಪೆಕ್ಟರ್ ಆದ ಜಗದೀಶ್ ರವರ ನೇತೃತ್ವದಲ್ಲಿ ಅಧಿಕಾರಿಯಾದ ಪ್ರೊ. ಪಿ.ಎಸ್.ಐ ಪ್ರಭು ಎಸ್. ಹಾಗೂ ಸಿಬ್ಬಂದಿಯವರಾದ ಕಪ್ಪೇರ ಬಸವರಾಜ್ ರವರು ಕೇಂದ್ರ ಕಾರಾಗೃಹದಲ್ಲಿ ಎಸ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾತ್ವಿಕ್, ( 25 ವರ್ಷ) ಕರ್ತವ್ಯಕ್ಕೆ ಹಾಜರಾಗಲು ಬಂದಾಗ ಆತನನ್ನು ತಪಾಸಣೆ ಮಾಡಿದ್ದಾರೆ.
ತನ್ನ ಒಳ ಉಡುಪಿನಲ್ಲಿ ಗಮ್ ಟೇಪಿನಲ್ಲಿ ಸುತ್ತಿರುವ ಗಾಂಜಾ ಇಟ್ಟುಕೊಂಡು ಬಂದಿರುವುದು ಈ ಸಂದರ್ಭದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ *ಡಾ. ರಂಗನಾಥ್ (ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ) ರವರ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 694/2025 ಕಲಂ 42 ಅಮೆಂಡಮೆಂಟ್ ಆಫ್ ಕರ್ನಾಟಕ ಪ್ರಿಸನ್ ಆಕ್ಟ್-2022 ಹಾಗೂ ಕಲಂ 20(b)(II)(A) NDPS Act-1985* ರಿತ್ಯಾ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ 170 ಗ್ರಾಂ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಂಡು ಆರೋಪಿ ಸಾತ್ವಿಕ್ ನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.


