*ಶಿವಮೊಗ್ಗದ ಪಾರ್ಕ್ ಬಡಾವಣೆ- ನೆಹರೂ ರಸ್ತೆಗೆ ಭೇಟಿ ನೀಡಿ ಸಂಚಾರ ಸಮಸ್ಯೆ ಗಮನಿಸಿದ ಎಸ್ ಪಿ ಮಿಥುನ್ ಕುಮಾರ್* *ಏನು ಸಮಸ್ಯೆ? ಏನು ಪರಿಹಾರ?*

*ಶಿವಮೊಗ್ಗದ ಪಾರ್ಕ್ ಬಡಾವಣೆ- ನೆಹರೂ ರಸ್ತೆಗೆ ಭೇಟಿ ನೀಡಿ ಸಂಚಾರ ಸಮಸ್ಯೆ ಗಮನಿಸಿದ ಎಸ್ ಪಿ ಮಿಥುನ್ ಕುಮಾರ್*

*ಏನು ಸಮಸ್ಯೆ? ಏನು ಪರಿಹಾರ?*

ಇಂದು ಎಸ್ ಪಿ ಮಿಥುನ್ ಕುಮಾರ್ ಜಿ.ಕೆ. ಶಿವಮೊಗ್ಗ ಸ್ಮಾರ್ಟ್ ಸಿಟಿಯಿಂದ ವಾಹನ ನಿಲುಗಡೆಗಾಗಿ ಅಭಿವೃದ್ಧಿ ಪಡಿಸಿರುವ ಕನ್ಸರ್ವೆನ್ಸಿ ಸ್ಥಳಗಳಾದ ಪಾರ್ಕ್ ಬಡಾವಣೆ ಮುಖ್ಯ ರಸ್ತೆ, ನೆಹರು ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರು, ವರ್ತಕರು, ಆಸ್ಪತ್ರೆಯ ಮುಖ್ಯಸ್ಥರನ್ನು ಉದ್ದೇಶಿಸಿ ಕನ್ಸರ್ವೆನ್ಸಿ ರಸ್ತೆಗಳನ್ನು ವಾಹನಗಳ ಪಾರ್ಕಿಂಗ್ ಗೆ ಬಳಸಿಕೊಳ್ಳುವ ಸಲುವಾಗಿ ಕೆಲವು ಸೂಚನೆಗಳನ್ನು ನೀಡಿದರು.

1) ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗಧಿಪಡಿಸುವ ಕನ್ಸರ್ವೆನ್ಸಿಯ ನಿಲುಗಡೆ ಸ್ಥಳದಲ್ಲಿಯೇ ನಿಲುಗಡೆ ಮಾಡುವುದು.
2) ಆಸ್ಪತ್ರೆಗಳಿಗೆ ಬೇರೆ ಬೇರೆ ಕಡೆಗಳಿಂದ ಬರುವ ವಾಹನ ಸವಾರರು ನಿಗಧಿಪಡಿಸಿದ ಕನ್ಸರ್ವೆನ್ಸಿ ವಾಹನ ನಿಲುಗಡೆ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು.
3) ಕನ್ಸರ್ವೆನ್ಸಿ ಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸರ್ಜಿ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ನಂಜಪ್ಪ ಆಸ್ಪತ್ರೆ, ವಾತ್ಸಲ್ಯ ಆಸ್ಪತ್ರೆ, ಮಲ್ನಾಡ್ ಆಸ್ಪತ್ರೆ ಹಾಗು ಮೆಟ್ರೋ ಆಸ್ಪತ್ರೆ ಗಳಿಗೆ ಬರುವ ವಾಹನ ಸವಾರರಿಗೆ ಹಾಗೂ ಸ್ಥಳೀಯ ನಾಗರೀಕರಿಗೆ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ.
4) ಸಾರ್ವಜನಿಕರು ಇದನ್ನು ಬಳಸಿಕೊಂಡು ನಗರದ ಪ್ರಮುಖ ರಸ್ತೆಗಳಾದ ಪಾರ್ಕ್ ಬಡಾವಣೆ, ದುರ್ಗಿಗುಡಿ, ರಾಘವೇಂದ್ರ ಸ್ವಾಮಿ ಮಠ ರಸ್ತೆಯ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಿದರು.

ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ದೇವರಾಜ್ ರವರ ಮುಂದಾಳತ್ವದಲ್ಲಿ ಶಿವಮೊಗ್ಗ ನಗರದ ಸಂಚಾರ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಯವರು ಸೇರಿ ಜಂಟಿ ಕಾರ್ಯಾಚರಣೆ ನಡೆಸಿ, ಫುಟ್ ಫಾತ್ ಒತ್ತುವರಿ ತೆರವು ಕಾರ್ಯಾಚರಣೆ, ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡುವಂತೆ ಮತ್ತು ಕನ್ಸರ್ವೆನ್ಸಿ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಮುಂದಿನ ದಿನಗಳಲ್ಲಿ ಸದರಿ ಪಾರ್ಕ್ ಬಡಾವಣೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಎ. ಜಿ. ಕಾರಿಯಪ್ಪ,(ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1), ದೇವರಾಜ್ ಟಿ.ವಿ. ಸಿಪಿಐ* ಸಂಚಾರ ವೃತ್ತ, ಶ್ರೀಮತಿ ಸ್ವಪ್ನ ಪಿ.ಎಸ್.ಐ.-1 & ಶ್ರೀಮತಿ ಭಾರತಿ ಬಿ.ಹೆಚ್. ಪಿ.ಎಸ್.ಐ.-2* ಪಶ್ಚಿಮ ಸಂಚಾರ ಠಾಣೆ, ಅಕ್ಬರ್ ಮುಲ್ಲಾ ಪಿ.ಎಸ್.ಐ. -1 & ಶಿವಣ್ಣನವರ್ ಪಿ.ಎಸ್.ಐ-2* ಪೂರ್ವ ಸಂಚಾರ ಠಾಣೆ ಮತ್ತು ಶಿವಮೊಗ್ಗ ನಗರ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.