ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಪ್ರೀತಿ ಮತ್ತು ಭೋಜನ
ಹೆಚ್ಚಾದರೆ…

ಜನ
ಅಲ್ಲೇ ಬಿಟ್ಟು
ಮುಂದಕ್ಕೆ
ಸಾಗಿಬಿಡುತ್ತಾರೆ!

2.
ಸಿಹಿ
ಸುಳ್ಳು
ಮತ್ತು
ಕಹಿ
ಸತ್ಯ
ಇಬ್ಬರಿಗೂ ಯುದ್ಧ;

ಸತ್ಯ ಸೋತೂ ಗೆಲ್ಲುತ್ತೆ
ಸುಳ್ಳು ಗೆದ್ದೂ ಸೋಲುತ್ತೆ!

3.
ಕಳೆದು ಕೊಳ್ಳದೇ
ಏನೂ ಸಿಗುವುದಿಲ್ಲ
ಇಲ್ಲಿ;
ನಿಮ್ಮ
ಸ್ವರ್ಗವೂ ಕೂಡ
ಮರಣ ಬಯಸುತ್ತೆ!

4.
ನನಗೆ
ನನ್ನ
ಭೇಟಿ ಮಾಡಬೇಕಿದೆ
ಹೃದಯವೇ,

ಸಿಕ್ಕರೆ ತಿಳಿಸು
ಎಲ್ಲಾದರೂ…

– *ಶಿ.ಜು.ಪಾಶ*
8050112067
(26/11/24)