*ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ?* *ತಜ್ಞರ ಎಚ್ಚರಿಕೆ ಏನು?* *سردیوں میں خواتین میں پیشاب کی نالی کے انفیکشن (UTIs) کیوں بڑھ جاتے ہیں؟* *Why do urinary tract infections (UTIs) increase in women in winter?* *What are the experts’ warnings?*

*ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ?*

*ತಜ್ಞರ ಎಚ್ಚರಿಕೆ ಏನು?*

*سردیوں میں خواتین میں پیشاب کی نالی کے انفیکشن (UTIs) کیوں بڑھ جاتے ہیں؟*

*Why do urinary tract infections (UTIs) increase in women in winter?*

*What are the experts’ warnings?*

ಚಳಿಗಾಲವು ಕೇವಲ ಉಸಿರಾಟದ ಸಮಸ್ಯೆಗಳನ್ನು ಮಾತ್ರವಲ್ಲದೆ, ಮೂತ್ರನಾಳದ ಸೋಂಕುಗಳ (Urinary Tract Infections – UTI) ಹೆಚ್ಚಳಕ್ಕೂ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಅವಧಿಯಲ್ಲಿ ಯುಟಿಐ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವುದು ವೈದ್ಯರ ಗಮನಕ್ಕೆ ಬಂದಿದೆ. ಚಳಿಯಿಂದಾಗಿ ನೀರು ಕುಡಿಯುವುದು ಕಡಿಮೆ ಮಾಡುವುದು, ಜೀವನಶೈಲಿ ಬದಲಾವಣೆಗಳು ಮತ್ತು ರೋಗನಿರೋಧಕ ಶಕ್ತಿ ಕುಗ್ಗುವುದು ಈ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಡಾ. ಸವಿತಾ ರಾಥೋಡ್ ನಾಯಕ್ ವಿವರಿಸಿದ್ದಾರೆ.

ಮೂತ್ರನಾಳ, ಮೂತ್ರಕೋಶ, ಮೂತ್ರನಾಳಗಳು ಅಥವಾ ಮೂತ್ರಪಿಂಡಗಳಲ್ಲಿ E.coli ಸೇರಿದಂತೆ ಬ್ಯಾಕ್ಟೀರಿಯಾ ಹೆಚ್ಚಾಗಿ ವೃದ್ಧಿಯಾಗುವಾಗ ಮೂತ್ರನಾಳದ ಸೋಂಕು ಉಂಟಾಗುತ್ತದೆ. ಮಹಿಳೆಯರಲ್ಲಿ ಮೂತ್ರನಾಳ ಚಿಕ್ಕದಿರುವುದರಿಂದ ಬ್ಯಾಕ್ಟೀರಿಯಾ ಪ್ರವೇಶಿಸಲು ಸುಲಭವಾಗುತ್ತದೆ. ಹೆಚ್ಚಿನ ಸೋಂಕುಗಳು ಸಾಮಾನ್ಯವಾಗಿದ್ದರೂ, ಚಿಕಿತ್ಸೆ ಕೊಡಿಸದಿದ್ದರೆ ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.

ತಜ್ಞರ ಪ್ರಕಾರ, ಚಳಿಗಾಲದಲ್ಲಿ ಯುಟಿಐ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣಗಳು ಇಂತಿವೆ:

ದಾಹ ಕಡಿಮೆಯಾಗುವುದರಿಂದ ನೀರಿನ ಸೇವನೆ ಕಡಿಮೆ ಮಾಡಿ ನಿರ್ಜಲೀಕರಣಕ್ಕೆ ಒಳಗಾಗುವುದು,

2. ಪ್ರಯಾಣದಂತಹ ಸಂದರ್ಭಗಳಲ್ಲಿ ಮೂತ್ರವನ್ನು ದೀರ್ಘಕಾಲ ಹಿಡಿದುಕೊಳ್ಳುವುದು,

3. ಚಳಿಗೆ ತಕ್ಕಂತೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದು.
4. ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ಸಹಜವಾಗಿ ಕಡಿಮೆಯಾಗುವುದು.

ಯಾರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ?

ಇನ್ನು, ನೈಸರ್ಗಿಕವಾಗಿ ಮುಟ್ಟು ನಿಂತ ನಂತರದ ಮಹಿಳೆಯರು, ಗರ್ಭಿಣಿಯರು, ಮಧುಮೇಹ (Diabetes) ಇರುವವರು, ಹಾಗೂ ಕಡಿಮೆ ನೀರು ಕುಡಿದು ಮೂತ್ರ ಹಿಡಿದಿಟ್ಟುಕೊಳ್ಳುವ ವಿದ್ಯಾರ್ಥಿನಿಯರು ಮತ್ತು ಕಾರ್ಯನಿಮಗ್ನ ಮಹಿಳೆಯರು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ.

ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಬೇಡ:

ಯುಟಿಐ ಸೋಂಕಿನ ಆರಂಭಿಕ ಹಂತವನ್ನು ಗುರುತಿಸುವುದು ಅತ್ಯಗತ್ಯ. ಮೂತ್ರವಿಸರ್ಜನೆ ವೇಳೆ ಉರಿ, ನಿರಂತರವಾಗಿ ಮೂತ್ರವಿಸರ್ಜನೆಗೆ ಹೋಗಬೇಕೆಂಬ ಅನುಭವ, ಕೆಳಹೊಟ್ಟೆ ಅಥವಾ ದ್ವಾರ ಪ್ರದೇಶದಲ್ಲಿ ನೋವು, ಮತ್ತು ದುರ್ವಾಸನೆಯ ಮೂತ್ರವು ಎಚ್ಚರಿಕೆಯ ಸಂಕೇತಗಳಾಗಿವೆ. ಒಂದು ವೇಳೆ, ಬೆನ್ನು ಅಥವಾ ಹೊಟ್ಟೆಯ ಬದಿಯಲ್ಲಿ ನೋವು ಮತ್ತು ಜ್ವರ ಕಾಣಿಸಿಕೊಂಡರೆ, ಸೋಂಕು ಮೂತ್ರಪಿಂಡಕ್ಕೆ ಹರಡಿರುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವಿಳಂಬವಾದ ಚಿಕಿತ್ಸೆಯು ಕಿಡ್ನಿ ಸೋಂಕು, ಸೆಪ್ಸಿಸ್ ಮತ್ತು ಮರುಕಳಿಸುವ ಸೋಂಕುಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ತಡೆಗಟ್ಟುವಿಕೆ ಮತ್ತು ತಜ್ಞರ ಸಲಹೆ

ಚಳಿಗಾಲದಲ್ಲಿ ಯುಟಿಐ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಕೆಲವು ಸರಳ ಜೀವನಶೈಲಿ ಬದಲಾವಣೆಗಳನ್ನು ಸೂಚಿಸುತ್ತಾರೆ:

1. ಪ್ರತಿದಿನ 6-8 ಗ್ಲಾಸ್ ನೀರನ್ನು ತಪ್ಪದೇ ಕುಡಿಯುವುದು.

2. ಮೂತ್ರವನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳದಿರುವುದು.

3. ಕಾಫೀನ್ ಮತ್ತು ಸಕ್ಕರೆ ಪಾನೀಯಗಳನ್ನು ಮಿತಿಗೊಳಿಸುವುದು.

4. ಹತ್ತಿ ಮತ್ತು ಗಾಳಿ ಜಾರುವ ಒಳ ಉಡುಪು ಧರಿಸುವುದು.

5. ಶೌಚಾಲಯದ ಬಳಕೆಯ ನಂತರ ಸರಿಯಾದ ಸ್ವಚ್ಛತೆಯನ್ನು ಪಾಲಿಸುವುದು.

ಪದೇಪದೆ ಸೋಂಕು ಕಾಣಿಸಿಕೊಂಡರೆ ಏನು ಮಾಡಬೇಕು?

ವೈದ್ಯರು ಸೂಕ್ತ ಪ್ರತಿಜೀವಕಗಳು, ಪ್ರೋಬಯೋಟಿಕ್ಸ್‌ಗಳು, ಅಥವಾ ಇತರ ತಡೆಗಟ್ಟುವ ಚಿಕಿತ್ಸೆಯನ್ನು ನೀಡುತ್ತಾರೆ. ವೈದ್ಯರ ಅಭಿಪ್ರಾಯದಂತೆ, ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ ಚಳಿಗಾಲದಲ್ಲಿ ಯುಟಿಐ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಮತ್ತು ದೀರ್ಘಕಾಲದ ಮೂತ್ರನಾಳದ ಆರೋಗ್ಯ ಕಾಪಾಡಿಕೊಳ್ಳಬಹುದು.

*سردیوں میں خواتین میں پیشاب کی نالی کے انفیکشن (UTIs) کیوں بڑھ جاتے ہیں؟*

*ماہرین کی وارننگ کیا ہیں؟*

ڈاکٹروں نے خبردار کیا ہے کہ سردیوں میں نہ صرف سانس کے مسائل پیدا ہوتے ہیں بلکہ پیشاب کی نالی کے انفیکشن (یو ٹی آئی) کے واقعات میں بھی اضافہ ہوتا ہے۔ ڈاکٹروں نے اس مدت کے دوران خاص طور پر خواتین میں UTI کیسز میں نمایاں اضافہ دیکھا ہے۔ نارائنا ملٹی اسپیشلٹی ہاسپٹل کے شعبہ امراض نسواں اور امراض نسواں کی ڈاکٹر سویتا راٹھوڈ نائک نے وضاحت کی کہ اس اضافے کی بنیادی وجوہات سردی، طرز زندگی میں تبدیلی اور قوت مدافعت کی کمزوری کی وجہ سے پانی کی مقدار میں کمی ہے۔

پیشاب کی نالی کا انفیکشن اس وقت ہوتا ہے جب بیکٹیریا بشمول E.coli، پیشاب کی نالی، مثانے، ureters یا گردوں میں بڑھ جاتے ہیں۔ خواتین میں پیشاب کی نالی چھوٹی ہوتی ہے جس سے بیکٹیریا کے داخل ہونے میں آسانی ہوتی ہے۔ اگرچہ زیادہ تر انفیکشن عام ہیں، اگر ان کا علاج نہ کیا جائے تو وہ گردے کے مسائل کا باعث بھی بن سکتے ہیں۔

ماہرین کے مطابق سردیوں میں یو ٹی آئی کے کیسز میں اضافے کی اہم وجوہات یہ ہیں:

پیاس میں کمی اور پانی کی کمی کی وجہ سے پانی کی مقدار میں کمی،

2. سفر کے دوران پیشاب کو زیادہ دیر تک روکے رکھنا،

3. سردی کے مطابق تنگ کپڑے پہننا۔

4. اس موسم میں قوت مدافعت قدرتی طور پر کم ہو جاتی ہے۔

سب سے زیادہ خطرہ کس کو ہے؟

مزید برآں، وہ خواتین جنہوں نے قدرتی طور پر حیض آنا بند کر دیا ہے، حاملہ خواتین، ذیابیطس کے مریض، اور طالب علم اور کام کرنے والی خواتین جو کم پانی پیتی ہیں اور پیشاب روکتی ہیں، سب سے زیادہ خطرے میں ہیں۔

اگر آپ ان علامات کو محسوس کرتے ہیں تو ان کو نظر انداز نہ کریں:

UTI انفیکشن کے ابتدائی مراحل کو پہچاننا ضروری ہے۔ پیشاب کے دوران جلنا، پیشاب کرنے کی ضرورت کا مسلسل احساس، پیٹ کے نچلے حصے یا نالی کے حصے میں درد، اور بدبودار پیشاب انتباہی علامات ہیں۔ اگر پیٹ کے پچھلے حصے میں درد ہو اور بخار ہو تو یہ انفیکشن گردے تک پھیل سکتا ہے۔ ایسی حالت میں آپ کو فوری طور پر ڈاکٹر سے رجوع کرنا چاہیے۔ ماہرین نے خبردار کیا ہے کہ علاج میں تاخیر گردے میں انفیکشن، سیپسس اور بار بار ہونے والے انفیکشن کا باعث بن سکتی ہے۔

روک تھام اور ماہرین کا مشورہ

سردیوں کے دوران UTIs کے خطرے کو کم کرنے کے لیے، ڈاکٹر کچھ سادہ طرز زندگی میں تبدیلیاں تجویز کرتے ہیں:

1. روزانہ 6-8 گلاس پانی پیئے۔

2. پیشاب کو زیادہ دیر تک روکنے سے گریز کریں۔

3. کیفین اور میٹھے مشروبات کو محدود کریں۔

4. سوتی اور سانس لینے کے قابل انڈرویئر پہنیں۔

5. ٹوائلٹ استعمال کرنے کے بعد مناسب حفظان صحت کی مشق کریں۔

اگر آپ کو بار بار انفیکشن ہو تو کیا کریں؟

ڈاکٹر مناسب اینٹی بایوٹک، پروبائیوٹکس، یا دیگر احتیاطی علاج تجویز کر سکتا ہے۔ ڈاکٹروں کے مطابق، سادہ احتیاطی تدابیر پر عمل کرنے سے سردیوں کے دوران UTIs کے خطرے کو نمایاں طور پر کم کیا جا سکتا ہے اور طویل مدتی پیشاب کی نالی کی صحت کو برقرار رکھا جا سکتا ہے۔

*Why do urinary tract infections (UTIs) increase in women in winter?*

*What are the experts’ warnings?*

Doctors have warned that winter not only causes respiratory problems, but also increases the incidence of urinary tract infections (UTIs). Doctors have noticed a significant increase in UTI cases, especially in women, during this period. Dr. Savita Rathod Nayak, Department of Gynecology and Obstetrics, Narayana Multi-Specialty Hospital, explained that the main reasons for this increase are reduced water intake due to cold, lifestyle changes and weakened immunity.

A urinary tract infection occurs when bacteria, including E.coli, multiply in the urethra, bladder, ureters or kidneys. The urethra is shorter in women, making it easier for bacteria to enter. Although most infections are common, if left untreated, they can also lead to kidney problems.

According to experts, the main reasons for the increase in UTI cases in winter are:

Reduced water intake due to decreased thirst and dehydration,

2. Holding urine for a long time during situations such as traveling,

3. Wearing tight clothes according to the cold.

4. Immunity naturally decreases during this season.

Who is most at risk?

Furthermore, women who have naturally stopped menstruating, pregnant women, those with diabetes, and students and working women who drink less water and hold urine are most at risk.

Do not ignore these symptoms if you notice them:

It is important to recognize the early stages of a UTI infection. Burning during urination, a constant feeling of needing to urinate, pain in the lower abdomen or groin area, and foul-smelling urine are warning signs. If pain in the back or side of the abdomen and fever occur, the infection may have spread to the kidneys. In such a situation, you should consult a doctor immediately. Experts warn that delayed treatment can lead to kidney infection, sepsis, and recurrent infections.

Prevention and Expert Advice

To reduce the risk of UTIs during the winter, doctors suggest some simple lifestyle changes:

1. Drink 6-8 glasses of water daily.

2. Avoid holding urine for long periods.

3. Limit caffeine and sugary drinks.

4. Wear cotton and breathable underwear.

5. Practice proper hygiene after using the toilet.

What to do if you have recurring infections?

The doctor may prescribe appropriate antibiotics, probiotics, or other preventive treatments. According to doctors, following simple precautions can significantly reduce the risk of UTIs during the winter and maintain long-term urinary tract health.