90 ಕೋಟಿ ರೂ.,ಗಳ ಸೈಬರ್ ವಂಚನೆ;* *ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ* *Cyber fraud worth Rs 90 crore;* *Four engineering students arrested* *90 کروڑ روپے کا سائبر فراڈ؛* *انجینئرنگ کے چار طلباء گرفتار*
*90 ಕೋಟಿ ರೂ.,ಗಳ ಸೈಬರ್ ವಂಚನೆ;*
*ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ*
*Cyber fraud worth Rs 90 crore;*
*Four engineering students arrested*
*90 کروڑ روپے کا سائبر فراڈ؛*
*انجینئرنگ کے چار طلباء گرفتار*

90 ಕೋಟಿ ರೂಪಾಯಿ ಮೌಲ್ಯದ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸೈಬರ್ ವಂಚಕರ ಜಾಲವೂ ಎಂಜಿನಿಯರಿಂಗ್ ಕಾಲೇಜಿನೊಳಗಿನಿಂದಲೇ ಕಾರ್ಯಾಚರಿಸುತ್ತಿತ್ತು. ಪುದುಚೇರಿ ಸೈಬರ್ ಕ್ರೈಂ ಪೊಲೀಸರು ಈ ಬೃಹತ್ ಜಾಲವನ್ನು ಬೇಧಿಸಿದ್ದು, ಆರೋಪಿ ವಿದ್ಯಾರ್ಥಿಗಳು ಸೈಬರ್ ಅಪರಾಧಿಗಳಿಗೆ ತಮ್ಮ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳ ಬ್ಯಾಂಕ್ ಡಿಟೇಲ್‌ಳನ್ನು ಮಾರಾಟ ಮಾಡುತ್ತಿದ್ದರು. ನಂತರ ಸೈಬರ್ ವಂಚಕರು ಅವರ ಖಾತೆಯಲ್ಲಿದ್ದ ಹಣವನ್ನು ಭಾರತದ ಮೂಲಕ ಅಕ್ರಮವಾಗಿ ವರ್ಗಾಯಿಸಿ ದುಬೈ ಮತ್ತು ಚೀನಾದ ನೆಟ್‌ವರ್ಕ್‌ಗಳ ಮೂಲಕ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸುತ್ತಿದ್ದರು. ಪ್ರಕರಣ ಬೇಧಿಸಿದ ಪೊಲೀಸರು ಈ ಎಂಜಿನಿಯರಿಂಗ್ ಕಾಲೇಜನ್ನು ಸೈಬರ್ ಕ್ರೈಂಗಳ ಹಾಟ್‌ಸ್ಪಾಟ್ ಎಂದು ಕರೆದಿದ್ದಾರೆ.
*ಸ್ನೇಹಿತರ ಖಾತೆ ವಿವರಗಳನ್ನು ಸೈಬರ್ ವಂಚಕರಿಗೆ ಮಾರುತ್ತಿದ್ದ ಆರೋಪಿಗಳು:*
ದಿನೇಶ್ ಮತ್ತು ಜಯಪ್ರತಾಪ್ ಎಂಬ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡಾಗ ಅವರು ಪೊಲೀಸರನ್ನು ಸಂಪರ್ಕಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ದಿನೇಶ್ ಮತ್ತು ಜಯಪ್ರತಾಪ್ ಅವರು ತಮ್ಮ ಖಾತೆಯ ವಿವರಗಳನ್ನು ತಮ್ಮ ಸ್ನೇಹಿತನಾದ ಈಗ ಸೈಬರ್ ಅಪರಾಧಿಯಾಗಿರುವ ಹರೀಶ್‌ಗೆ ಹಸ್ತಾಂತರಿಸಿದ್ದರು.
ಈ ವಂಚಕ ಹರೀಶ್ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ 20 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ವಂಚನೆಯಿಂದ ಬಂದ ಆದಾಯವನ್ನು ಸಂಗ್ರಹಿಸಲು ಸೈಬರ್ ವಂಚಕರು ಇವುಗಳನ್ನು ಬಳಸುತ್ತಿದ್ದರು. ಈ ಖಾತೆಗಳ ಮೂಲಕ ಕನಿಷ್ಠ 7 ಕೋಟಿ ರೂ.ಗಳನ್ನು ಆರೋಪಿಗಳು ವಿತ್ ಡ್ರಾ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
*Cyber fraud worth Rs 90 crore;*
*Four engineering students arrested*
The police have arrested three engineering students in connection with a cyber fraud worth Rs 90 crore. This network of cyber fraudsters was also operating from within the engineering college. The Puducherry Cyber Crime Police has busted this huge network, in which the accused students were selling the bank details of their friends and classmates to cyber criminals. The cyber fraudsters were then illegally transferring the money in their accounts through India and converting it into cryptocurrency through networks in Dubai and China. The police who busted the case have called this engineering college a hotspot for cyber crimes.
*Accused who were selling friends’ account details to cyber fraudsters:*
The case came to light when the bank accounts of two engineering students, Dinesh and Jayapratap, were suddenly frozen and they approached the police. Engineering students Dinesh and Jayapratap had handed over their account details to their friend, now a cyber criminal, Harish.
Investigation has revealed that the fraudster Harish had collected details of more than 20 bank accounts of students and the public. The cyber fraudsters were using these to collect the proceeds of this fraud. The accused withdrew at least Rs 7 crore through these accounts, said the investigators.
*90 کروڑ روپے کا سائبر فراڈ؛*
*انجینئرنگ کے چار طلباء گرفتار*
پولیس نے 90 کروڑ روپے کے سائبر فراڈ کے سلسلے میں انجینئرنگ کے تین طالب علموں کو گرفتار کیا ہے۔ سائبر فراڈ کرنے والوں کا یہ نیٹ ورک انجینئرنگ کالج کے اندر سے بھی کام کر رہا تھا۔ پڈوچیری سائبر کرائم پولیس نے اس بڑے نیٹ ورک کا پردہ فاش کیا ہے، جس میں ملزم طالب علم اپنے دوستوں اور ہم جماعت کے بینک کی تفصیلات سائبر مجرموں کو فروخت کر رہے تھے۔ سائبر جعلساز پھر غیر قانونی طور پر ہندوستان کے ذریعے اپنے کھاتوں میں رقم منتقل کر رہے تھے اور دبئی اور چین میں نیٹ ورکس کے ذریعے اسے کریپٹو کرنسی میں تبدیل کر رہے تھے۔ اس کیس کا پردہ فاش کرنے والی پولیس نے اس انجینئرنگ کالج کو سائبر کرائمز کا ہاٹ سپاٹ قرار دیا ہے۔
*ملزم جو سائبر فراڈ کرنے والوں کو دوستوں کے اکاؤنٹ کی تفصیلات فروخت کر رہے تھے:*
یہ معاملہ اس وقت سامنے آیا جب انجینئرنگ کے دو طالب علم دنیش اور جے پرتاپ کے بینک اکاؤنٹس اچانک منجمد ہو گئے اور انہوں نے پولیس سے رجوع کیا۔ انجینئرنگ کے طالب علم دنیش اور جے پرتاپ نے اپنے اکاؤنٹ کی تفصیلات اپنے دوست، اب سائبر مجرم ہریش کو سونپ دی تھیں۔
تحقیقات سے یہ بات سامنے آئی ہے کہ دھوکہ باز ہریش نے طلباء اور عوام کے 20 سے زیادہ بینک کھاتوں کی تفصیلات جمع کی تھیں۔ سائبر فراڈ کرنے والے ان کا استعمال اس فراڈ کی رقم اکٹھا کرنے کے لیے کر رہے تھے۔ تفتیش کاروں نے بتایا کہ ملزمان نے ان اکاؤنٹس کے ذریعے کم از کم 7 کروڑ روپے نکالے۔


