ಡಿ. 6 ನಾಳೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ “ಸಂಗೀತ ಸ್ವರ ಧಾರೆ” ಕಾರ್ಯಕ್ರಮ
ಡಿ. 6 ನಾಳೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ “ಸಂಗೀತ ಸ್ವರ ಧಾರೆ” ಕಾರ್ಯಕ್ರಮ 
ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಡಿಸೆಂಬರ್ 6ರ ನಾಳೆ ಶನಿವಾರ, ಸಂಜೆ 5-30 ಗಂಟೆಗೆ “ಸಂಗೀತ್ ಸಮರ್ಪಣ್ ಟ್ರಸ್ಟ್” ವತಿಯಿಂದ “ಸಂಗೀತ ಸ್ವರ ಧಾರೆ” (ಆವೃತ್ತಿ -3) ಎಂಬ ವಿಶಿಷ್ಟವಾದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ನಾಡಿನ ಪ್ರಖ್ಯಾತ ಸುಗಮ ಸಂಗೀತ ಗಾಯಕಿ ಹಾಗೂ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಸುರೇಖಾ ಹೆಗಡೆ ಮತ್ತು ಅವರ ತಂಡದಿಂದ ನಡೆಯುವ ಈ ಸಂಗೀತ ಕಾರ್ಯಕ್ರಮದಲ್ಲಿ ಹಳೆಯ ಸುಮಧುರ ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಆಯ್ದ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಆಗಮಿಸಲಿದ್ದಾರೆ.
ನಂತರ, ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಸುರೇಖಾ ಹೆಗಡೆ, ರಮೇಶ್ ಚಂದ್ರ, ನಿತಿನ್ ರಾಜಾರಾಮ ಶಾಸ್ತ್ರಿ ಯವರುಗಳು ಹಳೆಯ ಸುಮಧುರ ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಆಯ್ದ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮೆಲ್ವಿನ್ ಮತ್ತು ಬಸವರಾಜ್ (ಕೀಬೋರ್ಡ್), ರಾಮರಾವ್ ರಂಗಧೋಳ್ (ರಿದಂ ಪ್ಯಾಡ್), ವಿಠಲ್ ರಂಗಧೋಳ್ (ತಬಲಾ) ರವರು ಗಾಯಕರಿಗೆ ಸಹ ಕಲಾವಿದರಾಗಿ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಶಿವಮೊಗ್ಗ ವಿನಯ್ ಮಾಡಲಿದ್ದಾರೆ.
ಸಾರ್ವಜನಿಕರಿಗೆ ಹಾಗೂ ಸಂಗೀತ ಪ್ರೇಮಿಗಳಿಗೆ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸುರೇಖಾ ಹೆಗಡೆ ಕೋರಿದ್ದಾರೆ.


