ಸಮಾಜ ಸೇವೆಯಿಂದ ಸಂತೃಪ್ತಿ;  ಕೆ. ಈ. ಕಾಂತೇಶ್

ಸಮಾಜ ಸೇವೆಯಿಂದ ಸಂತೃಪ್ತಿ;  ಕೆ. ಈ. ಕಾಂತೇಶ್

ರೋಟರಿ ಜ್ಯೂಬಿಲಿ ಸಂಸ್ಥೆಯು ಪಾರದರ್ಶಕವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಒತ್ತು ನೀಡಿ ಗ್ರಾಮಾಂತರ ಶಾಲೆಗಳಿಗೆ ಅನೇಕ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ ಎಂದು ರೋಟರಿ ಶಿವಮೊಗ್ಗ ಜ್ಯುಬಿಲಿ ಕ್ಲಬ್ ವಾರದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಪೋಲಿಯೊ ಲಸಿಕೆ ಅಭಿಯಾನದಿಂದ ಈ ಮಾರಕ ಕಾಯಿಲೆಯನ್ನು ಪ್ರಪಂಚದದಂತ್ಯ ನಿರ್ಮೂಲ ಮಾಡಿದ ಹೆಗ್ಗಳಿಕೆ ರೋಟರಿ ಸಂಸ್ಥೆಗೆ ಸಲ್ಲಬೇಕು. ಸ್ವಾಹಿತ ಮೀರಿದ ಸೇವೆಯಿಂದ ಇಂದು ವಿಶ್ವದಲ್ಲಿ ಶಾಂತಿ ನೆಲೆಸಲು ಶ್ರಮಿಸುತ್ತಿದೆ. ರೋಟರಿ ಮಿತ್ರರು ಒಂದು ಶಕ್ತಿ ಎಂದು ಅಬಿಪ್ರಾಯಪಟ್ಟರು.

ರೋಟರಿ ಜ್ಯುಬಿಲಿ ಕ್ಲಬ್ ಅಧ್ಯಕ್ಷ ರೊ ಬಿ.ಎಸ್.ಅಶ್ವಥ್ ಮಾತನಾಡಿ, ಶ್ರೀಗಂಧ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೆ.ಇ.ಕಾಂತೇಶ್ ರವರು ಸಮಾಜ ಸೇವೆಗೆ ಮನ್ನಣೆಗೆ ಪಾತ್ರರಾಗಿದ್ದು ನಗರದ ಮನೆ ಮಾತಾಗಿದ್ದಾರೆ. ಗೋಸಂರಕ್ಷಣೆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಗೋವರ್ಧನ ಟ್ರಸ್ಟ್ ಮೂಲಕ ಸಹಾಯ ಗೋಶಾಲೆಗಳಿಗೆ ಸಹಾಯ ನೀಡುವುದಲ್ಲದೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಶಂಸಿದರು.

ಸಮಾಜದ ಮಠಾಧಿಪತಿಗಳ ಮೂಲಕ ಅನೇಕ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದು ಅವರ ಸಮಾಜ ಸೇವೆ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸುತ್ತಾ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಉಮಾದೇವಿ ಸ್ವಾಗತಿಸಿದರು, ಕಾರ್ಯದರ್ಶಿ ರೊ. ರೇವಣಸಿದ್ದಪ್ಪರವರು ವಂದಿಸಿದರು. ಸಭೆಯಲ್ಲಿ ನವೀನ್, ಉಮೇಶ್, ರಾಜಶೇಖರ್, ನವೀನ್ ಕುಮಾರ್, ಪ್ರಶಾಂತ್ ಜವಳಿ, ಅವಿನಾಶ್ ಲಕ್ಷ್ಮೀನಾರಾಯಣ,ಶ್ರೀಪತಿ, ಹರ್ಷ ಪಟೇಲ್ ಹಾಜರಿದ್ದರು