*ಪ್ರೇಮಿಗಳಿಗೆ ಬೆಂಬಲಿಸಿದರೆಂದು ಇಬ್ಬರ ಕೊಲೆ ಮಾಡಿದ ಐವರು!* *ಭದ್ರಾವತಿ ನಡುಗಿಸಿದ್ದ ಜೋಡಿ ಕೊಲೆ;* *ಐದು ಜನರನ್ನು ಬಂಧಿಸಿದ ಪೊಲೀಸರು*

*ಪ್ರೇಮಿಗಳಿಗೆ ಬೆಂಬಲಿಸಿದರೆಂದು ಇಬ್ಬರ ಕೊಲೆ ಮಾಡಿದ ಐವರು!*

*ಭದ್ರಾವತಿ ನಡುಗಿಸಿದ್ದ ಜೋಡಿ ಕೊಲೆ;*

*ಐದು ಜನರನ್ನು ಬಂಧಿಸಿದ ಪೊಲೀಸರು*

ಭದ್ರಾವತಿಯ ಅವಳಿ ಕೊಲೆಗಳಿಗೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಿರುವ ಪೊಲೀಸರು, ಪ್ರೇಮಿಸಿ ವಿವಾಹವಾದ ಇಬ್ಬರಿಗೂ ರಕ್ಷಣೆ ನೀಡಿದ್ದಾರೆ.

ಭದ್ರಾವತಿಯ ಜೈಭೀಮ್ ಬಡಾವಣೆಯಲ್ಲಿ ಶುಕ್ರವಾರ ಸಂಜೆ ಪ್ರೇಮಿಗಳಿಬ್ಬರನ್ನು ಬೆಂಬಲಿಸುತ್ತಿದ್ದಾರೆಂಬ ಕಾರಣಕ್ಕೆ ಐವರು ಕಿರಣ್(25) ಮತ್ತು ಮಂಜುನಾಥ್(65) ಚಾಕು ಇರಿದು ಕೊಂದಿದ್ದರು. ಭದ್ರಾವತಿಯ ಹಳೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಎರಡು ದಿನಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದ ನಂದೀಶ್ ಮತ್ತು ಶೃತಿ ಕಣ್ಮರೆಯಾಗಿದ್ದರು. ನಿನ್ನೆ ಪೊಲೀಸ್ ಠಾಣೆಗೆ ರಕ್ಷಣೆ ಕೋರಿ ಬಂದಿದ್ದರು.

ಕೊಲೆ ಮಾಡಿದ ಐದು ಜನರನ್ನು ಬಂಧಿಸಿದ್ದು, ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್.ಪಿ.ಮಿಥುನ್ ಕುಮಾರ್ ತಿಳಿಸಿದ್ದಾರೆ.

*ಬಂಧಿತ ಐವರು ಆರೋಪಿಗಳ ವಿವರ ಹೀಗಿದೆ;*

*1) ಮಂಜುನಾಥ್ ಸೈಲೆಂಟ್ ಶಶಿ* ತಂದೆ ಕುಮಾರ 29 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 4 ನೇ ತಿರುವು ಭದ್ರಾವತಿ ಟೌನ್
*2) ಭರತ್ @ಸುಂಡು* ತಂದೆ ಕುಮಾರ 32 ವರ್ಷ ನಗರ ಸಭೆಯಲ್ಲಿ ಟಾಟಾ ಎ ಸಿ ಗಾಡಿ ಚಾಲಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್
*3) ಸಂಜಯ್ @ ಕುಳ್ಳಿ* ತಂದೆ ವಡಿವೇಲು 24 ವರ್ಷ ನಗರ ಸಭೆಯಲ್ಲಿ ಕೂಲಿ and ಡ್ರೈವರ್ ಕೆಲಸ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್
*4) ಸುರೇಶ್ @ ಸೂರಿ* ತಂದೆ ಕಲಾ 27 ವರ್ಷ ಕೂಲಿ ಕೆಲಸ ವಾಸ ಮನೆ number 1 B ಬ್ಲಾಕ್ ಜೈ ಭೀಮ್ ನಗರ 2 ನೇ ತಿರುವು ಭದ್ರಾವತಿ ಟೌನ್
*5) ವೆಂಕಟೇಶ್ @ಕೆಂಚ* ತಂದೆ ಕುಮಾರ್ 28 ವರ್ಷ ನಗರ ಸಭೆಯಲ್ಲಿ ಪೌರ ಕಾರ್ಮಿಕ ವಾಸ ಜೈ ಭೀಮ್ ನಗರ 1 ನೇ ತಿರುವು ಭದ್ರಾವತಿ ಟೌನ್