*ಖಾಸಗಿ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ* *ಶಿವಮೊಗ್ಗ ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್* *ಸಸ್ಪೆಂಡ್ ಅಥವಾ ಇಲಾಖಾ ಶಿಸ್ತುಕ್ರಮಕ್ಕೆ ಒಳಗಾಗಲಿದ್ದಾರಾ ನಾ.ಮಧುಗಿರಿ?*

*ಖಾಸಗಿ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ*

*ಶಿವಮೊಗ್ಗ ದೊಡ್ಡಪೇಟೆ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್*

*ಸಸ್ಪೆಂಡ್ ಅಥವಾ ಇಲಾಖಾ ಶಿಸ್ತುಕ್ರಮಕ್ಕೆ ಒಳಗಾಗಲಿದ್ದಾರಾ ನಾ.ಮಧುಗಿರಿ?*

ಶಿವಮೊಗ್ಗದ ಬಸ್ ನಿಲ್ದಾಣ ಎದುರಿನ ಖಾಸಗಿ ಹೋಟೆಲ್ ಕಾರ್ಮಿಕನ ಮೇಲೆ ತಡರಾತ್ರಿ ಹಲ್ಲೆ ಮಾಡಿದ್ದ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿ ಪ್ರಕರಣ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಸ್ವತಃ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರೇ ಹಲ್ಲೆಗೊಳಗಾದ ಕಾರ್ಮಿಕನ ಪರ ನಿಂತಿದ್ದಾರೆ.

ಹಲ್ಲೆಗೊಳಗಾದ ಕಾರ್ಮಿಕನಿಗೆ ನ್ಯಾಯ ಒದಗಿಸಿ, ಹಲ್ಲೆ ಮಾಡಿದ ಎಸ್ ಐ ನಾರಾಯಣ ಮಧುಗಿರಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಎಸ್ ಪಿ ಮಿಥುನ್ ಕುಮಾರ್ ರವರಿಗೆ ದೂರವಾಣಿ ಮೂಲಕ ಮಾತಾಡಿದ್ದಾರೆಂದು ತಿಳಿದು ಬಂದಿದೆ.

ಸಬ್ ಇನ್ಸ್ ಪೆಕ್ಟರ್ ನಾರಾಯಣ ಮಧುಗಿರಿಯವರ ವಿರುದ್ಧ ಅಧಿಕಾರಿಗಳು ಇಲಾಖಾ ಶಿಸ್ತು ಕ್ರಮ ಅಥವಾ ಅಮಾನತ್ತಿನಂತಹ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿವೆ.

ಇಂದು ಜಿಲ್ಲಾಧಿಕಾರಿಗಳಿಗೆ ಯುವ ಕಾಂಗ್ರೆಸ್ ಈ ವಿಚಾರದಲ್ಲಿ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದನ್ನು ನೆನಪಿಸಿಕೊಳ್ಳಬಹುದು.