ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್)*… *11ನೇ ತರಗತಿ ವಿದ್ಯಾರ್ಥಿಗಳಿಂದ 9 ನೇ ತರಗತಿ ವಿದ್ಯಾರ್ಥಿಗಳ ಮೇಲೆ ದೈಹಿಕ ದೌರ್ಜನ್ಯ… ನಿರಂತರ ಮಾನಸಿಕ ಹಿಂಸೆ…*
*ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್)*…
*11ನೇ ತರಗತಿ ವಿದ್ಯಾರ್ಥಿಗಳಿಂದ 9 ನೇ ತರಗತಿ ವಿದ್ಯಾರ್ಥಿಗಳ ಮೇಲೆ ದೈಹಿಕ ದೌರ್ಜನ್ಯ… ನಿರಂತರ ಮಾನಸಿಕ ಹಿಂಸೆ…*
ಶಿವಮೊಗ್ಗದ ಗಾಜನೂರು ಮುಳ್ಳಕೆರೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 11ನೇ ಕ್ಲಾಸಿನ ವಿದ್ಯಾರ್ಥಿಗಳು 9ನೇ ಕ್ಲಾಸಿನ ವಿದ್ಯಾರ್ಥಿಗಳ ಮೇಲೆ ಬಾಸುಂಡೆಗಳೇಳುವಂತೆ ಹಲ್ಲೆ ಮಾಡಿ RAGING(ರ್ಯಾಗಿಂಗ್) ಮಾಡಿರುವ ಸುದ್ದಿ ಹೊರಬಿದ್ದಿದೆ!
ಶಿವಮೊಗ್ಗದಿಂದ ಸುಮಾರು 10 ಕಿ.ಮೀ.ದೂರ ಇರುವ ಜವಾಹರ್ ನವೋದಯ ವಸತಿ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳು ತಮ್ಮ ಕೆಳ ವಯಸ್ಸಿನ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು Raging ಮಾಡುತ್ತಿದ್ದು, ಕಳೆದ ಫೆಬ್ರವರಿ 15 ರ ಶನಿವಾರ ಕೆಲ ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ್ದಾರೆ.
ಈ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿಗಳೇ ನೇರವಾಗಿ ಮುಖ್ಯಸ್ಥರಾಗಿದ್ದು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರ ರೇಖಾದೇಖಿಯಲ್ಲಿರುವ ಕೇಂದ್ರದ ಈ ವಸತಿ ವಿದ್ಯಾಲಯದಲ್ಲಿ ರ್ಯಾಗಿಂಗ್(Raging) ನಡೆದಿರುವುದು ಮತ್ತು ನಡೆಯುತ್ತಿರುವುದು ದುರಂತ.
ಗಾಜನೂರು ಮುಳ್ಳಕೆರೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ 6-8 ಶಾಲೆಯ ಮಕ್ಕಳ ತಂಡವನ್ನು ಒಂದು ಹೌಸ್ ನಲ್ಲಿ, 9-11 ಶಾಲಾ ಮಕ್ಕಳನ್ನು ಇನ್ನೊಂದು ಹೌಸ್ ನಲ್ಲಿ, 10-12 ಶಾಲೆಯ ಮಕ್ಕಳನ್ನು ಮತ್ತೊಂದು ಹೌಸ್ ನಲ್ಲಿ ವಾಸಿಸಲು ಬಿಡಲಾಗಿದೆ. 9-11ರ ಹೌಸ್ ನಲ್ಲಿ ವಾಸವಿರುವ 11ನೇ ತರಗತಿ ವಿದ್ಯಾರ್ಥಿಗಳು 9 ನೇ ತರಗತಿಯ ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿಯೂ ಹಲ್ಲೆ ಮಾಡಿದ್ದಾರೆ. ಮೈತುಂಬಾ ಬಾಸುಂಡೆಗಳೇಳುವಂತೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಪೋಷಕರು ಪತ್ರಿಕೆಗೆ ತಿಳಿಸಿದ್ದಾರೆ.
ತಮ್ಮ ಮೇಲೆ ದೌರ್ಜನ್ಯ ಮಾಡಿದ, ಮಾಡುತ್ತಿರುವ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದರೆ ಆ ಹಿರಿಯ ವಿದ್ಯಾರ್ಥಿಗಳು ಇನ್ನಷ್ಟು ದೌರ್ಜನ್ಯ ಮಾಡುತ್ತಾರೆ. ಆ ಹೆದರಿಕೆಯಿಂದ ಬಹಳಷ್ಟು ವಿದ್ಯಾರ್ಥಿಗಳು ದೂರು ನೀಡಲು ಹೆದರುತ್ತಿದ್ದಾರೆಂಬ ಮಾತುಗಳಿವೆ.
ಪ್ರತಿ ತಿಂಗಳ ಎರಡನೇ ಶನಿವಾರದಂದು ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಪೋಷಕರಿಗೆ ಅನುವು ಮಾಡಿಕೊಡಲಾಗುತ್ತದೆ. ತಮ್ಮ ಪ್ರೀತಿ ಪಾತ್ರ ಮಕ್ಕಳಿಗೆ ಪೋಷಕರು, ಅವರಿಗೆ ಬೇಕಾದ ಆಹಾರ, ಬಟ್ಟೆ, ಇತ್ಯಾದಿ ವಸ್ತುಗಳನ್ನು ಒಯ್ದು ಕೊಡುತ್ತಾರೆ. ಪೋಷಕರು ಕೊಟ್ಟು ಇತ್ತ ಬರುತ್ತಿದ್ದಂತೆಯೇ Raging ಹುಡುಗರು ಅದನ್ನೆಲ್ಲ ತಮ್ಮದಾಗಿಸಿಕೊಂಡು ಹಿಂಸೆ ಕೊಡುವುದೂ ನಡೆದಿದೆ ಎಂದು ಹೆಸರು ಹೇಳಲಿಚ್ಛಿಸದ ಪೋಷಕರು ಹೇಳಿಕೆ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆಯೂ ಇಂಥದ್ದೇ ಆರೋಪಗಳು ಗಾಜನೂರಿನ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಕೇಳಿ ಬಂದಿದ್ದವು. ಅಲ್ಲಿ ಸಿಗರೇಟು, ಮದ್ಯದ ಆಟವೂ ವಿದ್ಯಾರ್ಥಿಗಳನ್ನು ಕೆಡಿಸುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕುವಂತಿಲ್ಲ.
ಈ ರ್ಯಾಗಿಂಗ್(Raging) ವಿಚಾರ ಮೆಸೇಜೊಂದರ ಮೂಲಕ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ರವರಿಗೂ ಗೊತ್ತಾಗಿದ್ದರಿಂದ, ನವೋದಯ ಶಾಲೆಗೆ ಮಕ್ಕಳ ರಕ್ಷಣಾ ಸಮಿತಿ ಹಾಗೂ ಚೈಲ್ಡ್ ಲೈನ್ ಸಿಬ್ಬಂದಿಗಳನ್ನು ಪರಿಶೀಲನೆಗೆ ಕಳಿಸಿದ್ದೇನೆ ಎನ್ನುತ್ತಾರೆ ತಾಜುದ್ದೀನ್ ಖಾನ್.
ಮೂರು ಜನ ವಿದ್ಯಾರ್ಥಿಗಳು ತೀವ್ರ ಹಲ್ಲೆಗೊಳಗಾಗಿದ್ದರಿಂದ ಪೋಷಕರು ಶಾಲೆಯನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ RAGING(ರ್ಯಾಗಿಂಗ್) ನಡೆಯುತ್ತಿದೆ ಎಂದರೆ…
– *ಶಿ.ಜು.ಪಾಶ*