ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು; ಸಚಿವ ಮಧು ಬಂಗಾರಪ್ಪ *ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ*
ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು
ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು; ಸಚಿವ ಮಧು ಬಂಗಾರಪ್ಪ
*ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ*
*ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ನ ಗ್ರಂಥಾಲಯಕ್ಕೆ 5 ಲಕ್ಷ ರೂ. ನೀಡಿದ್ದೆನೆ*
*ನಮ್ಮ ತಂದೆ ಎಸ್. ಬಂಗಾರಪ್ಪನವರ ಹೆಸರಿನಲ್ಲಿ ಈ ಅನುದಾನ ನೀಡಿದ್ದೇನೆ*
ನನಗೆ ಕನ್ನಡದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ
ಆದರೆ ಕನ್ನಡದ ಬಗ್ಗೆ ಉಳಿವಿಕೆಗೆ ನನ್ನ ಜವಬ್ದಾರಿ ಇದೆ
ನಮ್ಮ ತಂದೆಯವರು ಕಷ್ಟಪಟ್ಟು ಬೀದಿ ದೀಪದಲ್ಲಿ ಓದಿಕೊಂಡು ಬಂದವರು
ರನ್ನ, ಪಂಪರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು
ಕನ್ನಡ ಸಹಿತ ಯಾವುದೇ ವಿಷಯ ನೀಡಿದರೂ ನಮ್ಮ ತಂದೆ ಬಂಗಾರಪ್ಪಾಜೀಯವರು ಮಾತನಾಡುತ್ತಿದ್ದರು
ಆದರೆ ನಾವೆಲ್ಲಾ ಕಾನ್ವೆಂಟ್ ನಲ್ಲಿ ಓದಿದವರು
ಆದರೂ ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಇದ್ದರೂ, ಅದಕ್ಕಿಂತ ಮಿಗಿಲಾಗಿ ನನಗೆ ಕನ್ನಡದ ಬಗ್ಗೆ ಅಭಿಮಾನ ಇದೆ
ಕ.ಸಾ.ಪ. ಭವನ ಸದ್ಭಳಕೆಯಾಗಬೇಕಿದೆ
ಈ ನಿಟ್ಟಿನಲ್ಲಿ ಈ ಸಾಹಿತ್ಯ ಗ್ರಾಮದ ಭವನದ ಸದ್ಭಳಕೆಯಾಗಬೇಕಿದೆ.
ಅದೆಷ್ಟೋ ಸಾಹಿತಿಗಳು ತಮ್ಮ ಜೀವನ ಕನ್ನಡಕ್ಕಾಗಿ, ಸಾಹಿತ್ಯಕ್ಕಾಗಿ ಮುಡುಪಾಗಿಟ್ಟಿದ್ದಾರೆ
ಕನ್ನಡ ಮೀಡಿಯಂನಲ್ಲಿ ಕಲಿಕೆ ಎಂಬುದು ಪೋಷಕರ ವಿವೇಚನೆಗೆ ಬಿಟ್ಟಿದ್ದು
ನಮ್ಮ ಕಾರ್ಯ ಪ್ರಚಾರವಾಗಿ ಮತ್ತೊಬ್ಬರು ದೇಣಿಗೆ ನೀಡುವಂತಾಗಲಿ
ನಾನು ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು
ಆದರೆ ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು
ಕ.ಸಾ.ಪ. ಭವನದ ಮುಂದುವರೆದ ಕಾಮಗಾರಿ ಬೇಗ ಬೇಗನೇ ಮುಗಿಯಲಿ
ಸರ್ಕಾರದಿಂದಲೂ ಅನುದಾನ ಕೊಡಿಸೋಣ
ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಶಿವಮೊಗ್ಗದಲ್ಲಿ ನಡೆಸಲು ಏನು ಮಾಡಬೇಕೋ ಅದನ್ನು ಮಾಡೋಣ
ಡಿಜಿಟಲ್ ಲೈಬ್ರರಿ ಅಭಿವೃದ್ಧಿ ಮಾಡುವ ಕೆಲಸ ನಡೆಯುತ್ತಿದೆ
*ಸಾಹಿತಿಗಳನ್ನು ನಗರ ನಕ್ಸಲ್ ಎಂದು ಬಿಂಬಿಸುವ ವಿಚಾರ*
ಯಾರೋ ತಲೆ ಕೆಟ್ಟವರು ಈ ರೀತಿ ಮಾತನಾಡುತ್ತಾರೆ
ಅವರ ಬಗ್ಗೆ ನಾನು ಮಾತನಾಡೊಲ್ಲ
*ಕೇಂದ್ರ ಸರ್ಕಾರ ಅಕ್ಕಿ ನೀಡುತ್ತೆನೆ ಎಂದರೂ ರಾಜ್ಯ ಸರ್ಕಾರ ಖರೀದಿಸುತ್ತಿಲ್ಲ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆ*
*ಅಕ್ಕಿನೂ ಇಲ್ಲ, ಗೃಹಲಕ್ಷ್ಮಿ ಹಣವೂ ಬಂದಿಲ್ಲ ಎಂಬ ಆರೋಪಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ*
ಮೊದಲು ಭಾರತ್ ಅಕ್ಕಿ ಮನೆ, ಮನೆಗೆ ತಲುಪುತ್ತಿದಿಯಾ ಎಂದು ಜೋಷಿಯವರು ಹೇಳಲಿ
ಭಾರತಾಂಬೆಯ ಹೆಸರನ್ನಿಟ್ಟುಕೊಂಡು ಜನರಿಗೆ ಮೋಸ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ
ಭಾರತ್ ಅಕ್ಕಿ ಮನೆ, ಮನೆಗೆ ಮೊದಲು ತಲುಪಿಸಿ
ಎಂ.ಪಿ. ಚುನಾವಣೆಗೆ ಜನರಿಗೆ ಮೋಸ ಮಾಡಲು ಬಿಜೆಪಿ ಘೋಷಣೆ ಮಾಡಿತು
ಆದರೆ, ಅದು ತಲುಪಿಸಲು ವಿಫಲವಾಗಿದೆ
ನಾವು ಗ್ಯಾರಂಟಿ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಿರುವ ತೃಪ್ತಿ ನಮಗಿದೆ
ರಾಜ್ಯ ಬಜೆಟ್ ಬಗ್ಗೆ ನಮ್ಮ ಇಲಾಖೆಯಿಂದ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆದಿದೆ
ಕೂಲಂಕುಷವಾಗಿ ಈ ಬಗ್ಗೆ ಅಧಿಕಾರಿಗಳ ಜೊತೆಗೂಡಿ ಚರ್ಚಿಸಲಾಗಿದೆ
ಶಿವಮೊಗ್ಗ ಜಿಲ್ಲೆಯ ಕುರಿತು ಕೂಡ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಗಿದೆ
*ತಿನ್ನುವ ಅನ್ನದಲ್ಲಿ ಬಿಜೆಪಿಯವರು ಜನರಿಗೆ ಮೋಸ ಮಾಡ್ತಾರಲ್ರೀ… ಮನುಷ್ಯರಾ ಅವರು ?; ಜೋಷಿಗೆ ತಿರುಗೇಟು ಕೊಟ್ಟ ಸಚಿವ ಮಧು*
ಭಾರತಾಂಬೆಯ ಹೆಸರನ್ನಿಟ್ಟುಕೊಂಡು ತಿನ್ನುವ ಅನ್ನದಲ್ಲಿ ಜನರಿಗೆ ಬಿಜೆಪಿಯವರು ಮೋಸ ಮಾಡ್ತಾರಲ್ರೀ. ಮನುಷ್ಯರಾ ಅವರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ನೀಡುತ್ತೆನೆ ಎಂದರೂ ರಾಜ್ಯ ಸರ್ಕಾರ ಖರೀದಿಸುತ್ತಿಲ್ಲ. ಅಕ್ಕಿನೂ ಇಲ್ಲ, ಗೃಹಲಕ್ಷ್ಮಿ ಹಣವೂ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆರೋಪಕ್ಕೆ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ. ಮೊದಲು ಭಾರತ್ ಅಕ್ಕಿ ಮನೆ, ಮನೆಗೆ ತಲುಪುತ್ತಿದಿಯಾ ಎಂದು ಜೋಷಿಯವರು ಹೇಳಲಿ. ಭಾರತಾಂಬೆಯ ಹೆಸರನ್ನಿಟ್ಟುಕೊಂಡು ತಿನ್ನುವ ಅನ್ನದಲ್ಲಿ ಜನರಿಗೆ ಮೋಸ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಮನುಷ್ಯರಾ ಅವರು ಅಂತಾ ಪ್ರಶ್ನೆ ಮಾಡಿದ್ದಾರೆ. ಭಾರತ್ ಅಕ್ಕಿ ಮನೆ, ಮನೆಗೆ ಮೊದಲು ತಲುಪಿಸಿ. ಎಂ.ಪಿ. ಚುನಾವಣೆಗೆ ಜನರಿಗೆ ಮೋಸ ಮಾಡಲು ಬಿಜೆಪಿ ಘೋಷಣೆ ಮಾಡಿತ. ಆದರೆ, ಅದು ತಲುಪಿಸಲು ವಿಫಲವಾಗಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಿರುವ ತೃಪ್ತಿ ನಮಗಿದೆ. ಅಕ್ಕಿ ಕೊಡದೇ ಇದ್ದರೂ, ಅದರ ಹಣ ನೀಡುತ್ತಿದ್ದೆವೆ ಎಂದು ಪ್ರಹ್ಲಾದ್ ಜೋಷಿಗೆ ಸಚಿವ ಮಧು ತಿರುಗೇಟು ನೀಡಿದ್ದಾರೆ.
*ನಾನು ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು – ಆದರೆ ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು : ಮಧು ಬಂಗಾರಪ್ಪ*
*ನನಗೆ ಕನ್ನಡದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ. ಆದರೆ ಕನ್ನಡದ ಬಗ್ಗೆ ಉಳಿವಿಕೆಗೆ ನನ್ನ ಜವಬ್ದಾರಿ ಇದೆ ಅಂತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಾನು ಕನ್ನಡ ಸರಿಯಾಗಿ ಮಾತನಾಡದೇ ಇರಬಹುದು. ಆದರೆ ನನ್ನ ಹೃದಯ ಮಾತ್ರ ಪ್ಯೂರ್ ಕನ್ನಡದ್ದು ಎಂದು ಕೂಡ ಅವರು ಹೇಳಿದ್ದಾರೆ. ನಮ್ಮ ತಂದೆಯವರು ಕಷ್ಟಪಟ್ಟು ಬೀದಿ ದೀಪದಲ್ಲಿ ಓದಿಕೊಂಡು ಬಂದವರು. ರನ್ನ, ಪಂಪರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಕನ್ನಡ ಸಹಿತ ಯಾವುದೇ ವಿಷಯ ನೀಡಿದರೂ ನಮ್ಮ ತಂದೆ ಬಂಗಾರಪ್ಪಾಜೀಯವರು ಮಾತನಾಡುತ್ತಿದ್ದರು. ಆದರೆ ನಾವೆಲ್ಲಾ ಕಾನ್ವೆಂಟ್ ನಲ್ಲಿ ಓದಿದವರು. ಆದರೂ ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಇದ್ದರೂ, ಅದಕ್ಕಿಂತ ಮಿಗಿಲಾಗಿ ನನಗೆ ಕನ್ನಡದ ಬಗ್ಗೆ ಅಭಿಮಾನ ಇದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಈ ವೇಳೆ ಶಿವಮೊಗ್ಗ ಕ.ಸಾ.ಪ. ಗೆ 5 ಲಕ್ಷ ರೂ. ಅನುದಾನದ ಚೆಕ್ ವಿತರಿಸಿದ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ ನ ಗ್ರಂಥಾಲಯಕ್ಕೆ 5 ಲಕ್ಷ ರೂ. ನೀಡಿದ್ದೆನೆ. ನಮ್ಮ ತಂದೆ ಎಸ್. ಬಂಗಾರಪ್ಪನವರ ಹೆಸರಿನಲ್ಲಿ ಈ ಅನುದಾನ ನೀಡಿದ್ದೇನೆ. ಕ.ಸಾ.ಪ. ಭವನ ಸದ್ಭಳಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ಈ ಸಾಹಿತ್ಯ ಗ್ರಾಮದ ಭವನದ ಸದ್ಭಳಕೆಯಾಗಬೇಕಿದೆ. ಅದೆಷ್ಟೋ ಸಾಹಿತಿಗಳು ತಮ್ಮ ಜೀವನ ಕನ್ನಡಕ್ಕಾಗಿ, ಸಾಹಿತ್ಯಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಕನ್ನಡ ಮೀಡಿಯಂನಲ್ಲಿ ಕಲಿಕೆ ಎಂಬುದು ಪೋಷಕರ ವಿವೇಚನೆಗೆ ಬಿಟ್ಟಿದ್ದು. ನಮ್ಮ ಕಾರ್ಯ ಪ್ರಚಾರವಾಗಿ ಮತ್ತೊಬ್ಬರು ದೇಣಿಗೆ ನೀಡುವಂತಾಗಲಿ ಎಂದು ಮಧು ಬಂಗಾರಪ್ಪ, ತಾವು 5 ಲಕ್ಷ ರೂ. ನೀಡುವ ಬಗ್ಗೆ ಹೇಳಿದರು.*