*ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆ IIRF ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ – 2025*

*ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆ IIRF ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ – 2025*

IIRF (Indian Institutional Ranking Framework) 2 ICOSA (International Council for School Accreditation) ಅವರಿಂದ ನೀಡಲ್ಪಡುವ IIRF ಎಜುಕೇಶನ್ ಇಂಪ್ಯಾಕ್ಟ್ ಅವಾರ್ಡ್ – 2025 (ಶೈಕ್ಷಣಿಕ ಶ್ರೇಷ್ಠತೆ) ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ ಎನ್. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 11, 2025ರಂದು ನವದೆಹಲಿಯಲ್ಲಿ ICOSA ಶಾಲಾ ಕಾಂಪ್ಲೇವ್ ಸಂದರ್ಭದಲ್ಲಿ ನಡೆಯಿತು.

ಶಾಲೆಯ ಶೈಕ್ಷಣಿಕ ಸಾಧನೆ, ಗುಣಮಟ್ಟದ ಶಿಕ್ಷಣ ಹಾಗೂ ಡೇಟಾ ವಿಶ್ಲೇಷಣೆಯ ಆಧಾರದ ಮೇಲೆ IIRF ರಾಂಕಿಂಗ್ ಸಮಿತಿ ಶಿಫಾರಸ್ಸಿನ ಮೇರೆಗೆ ಈ ಗೌರವ ನೀಡಲಾಗಿದೆ.

ಈ ಸಾಧನೆಯ ಹಿಂದೆ ಶಾಲೆಯ ನನ್ನ ಸಮರ್ಪಿತ ನಾಯಕತ್ವ, ದೃಷ್ಟಿಕೋನ ಹಾಗೂ ಪರಿಶ್ರಮ ಪ್ರಮುಖ ಪಾತ್ರವಹಿಸಿದೆ. ಇದರೊಂದಿಗೆ ಶಾಲಾ ನಿರ್ವಹಣಾ ಮಂಡಳಿ, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳ ಅಹರ್ನಿಶಿ ಶ್ರಮ ಮತ್ತು ಸಹಕಾರವೂ ಈ ಗೌರವಕ್ಕೆ ಕಾರಣವಾಗಿದೆ ಎಂದರು.

IIRF ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ ದೇಶದ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಪ್ರಶಸ್ತಿಯಾಗಿದ್ದು, ಉನ್ನತ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿ ಕೇಂದ್ರಿತ ಬೋಧನೆ ಹಾಗೂ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯೊಂದಿಗೆ ಜೈನ್ ಪಬ್ಲಿಕ್ ಶಾಲೆಯ ಶೈಕ್ಷಣಿಕ ಬದ್ಧತೆ ಮತ್ತೊಮ್ಮೆ ದೃಢಪಟ್ಟಿದೆ ಎಂದು ವಿವರಿಸಿದರು.

ಶಾಲಾ ಆಡಳಿತ ಮಂಡಳಿ ಈ ಗೌರವಕ್ಕೆ ಸಂತಸ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಇನ್ನಷ್ಟು ಉತ್ತಮ ಶಿಕ್ಷಣ ನೀಡಲು ಬದ್ಧವಾಗಿರುವುದಾಗಿ ತಿಳಿಸಿದೆ ಎಂದರು.