*ತಮಿಳುನಾಡಿನ ಈ ಲೇಡಿ ಗ್ಯಾಂಗ್‌ಗೆ ಕದಿಯೋದೇ ಕೆಲಸ!* *ದೇವಸ್ಥಾನಗಳಲ್ಲಿ ಸರ ಎಗರಿಸುತ್ತಿದ್ದ ‘ಕಳ್ಳಿಯರ ಗ್ಯಾಂಗ್’ ಈಗ ಅರೆಸ್ಟ್*

*ತಮಿಳುನಾಡಿನ ಈ ಲೇಡಿ ಗ್ಯಾಂಗ್‌ಗೆ ಕದಿಯೋದೇ ಕೆಲಸ!*

*ದೇವಸ್ಥಾನಗಳಲ್ಲಿ ಸರ ಎಗರಿಸುತ್ತಿದ್ದ ‘ಕಳ್ಳಿಯರ ಗ್ಯಾಂಗ್’ ಈಗ ಅರೆಸ್ಟ್*

ದೇವಸ್ಥಾನಗಳ ಜನಸಂದಣಿಯನ್ನೇ ಟಾರ್ಗೆಟ್ ಮಾಡಿ ಗೃಹಿಣಿಯರು, ವೃದ್ಧೆಯರ ಕತ್ತಿಗೆ ಕೈ ಹಾಕುತ್ತಿದ್ದ ತಮಿಳುನಾಡು ಮೂಲದ ಮೂವರು ಲೇಡಿ ಗ್ಯಾಂಗ್ ಪ್ಲಾನ್ ಪ್ಲಾಪ್ ಆಗಿದೆ.

ಉಡುಪಿ ಹೆಜಮಾಡಿಯ ಬ್ರಹ್ಮಬೈದರ್ಕಳ ಗರೋಡಿಯ ನೇಮೋತ್ಸವದಲ್ಲಿ ವೃದ್ಧೆಯ ಸರ ಕದ್ದಿದ್ದ ಈ ಗ್ಯಾಂಗ್, ಪುತ್ತೂರಿನ ಕೆಮ್ಮಿಂಜೆ ದೇವಾಲಯದಲ್ಲಿ ಮತ್ತೊಂದು ಕಳ್ಳತನಕ್ಕೆ ಸ್ಕೆಚ್ ಹಾಕುವಾಗ ಸಾರ್ವಜನಿಕರ ಕಣ್ಣಿಗೆ ಬಿದ್ದು ಪೋಲಿಸರ ಅತಿಥಿಗಳಾಗಿದ್ದಾರೆ.

ಕಳೆದ ಗುರುವಾರ ಹೆಜಮಾಡಿಯ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ನೇಮೋತ್ಸವ ನಡೆಯುತ್ತಿತ್ತು. ಈ ವೇಳೆ ಭಕ್ತಿ ಭಾವದಿಂದ ದೇವಸ್ಥಾನಕ್ಕೆ ಬಂದಿದ್ದ 78 ವರ್ಷದ ವೃದ್ಧೆಯನ್ನು ಈ ಕಳ್ಳಿಯರ ಗ್ಯಾಂಗ್ ಸುತ್ತುವರಿದಿತ್ತು. ಗಂಟೆ ಬಾರಿಸುವ ನೆಪದಲ್ಲಿ ವೃದ್ಧೆಯ ಗಮನ ಬೇರೆಡೆ ಸೆಳೆದು, ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಎಗರಿಸಿದ್ದ ಈ ಖತರ್ನಾಕ್ ಕಳ್ಳಿಯರು ಸ್ಥಳದಿಂದ ಪರಾರಿಯಾಗಿದ್ದರು.

ಸರ ಕಳುವು ಆದ ಬೆನ್ನಲ್ಲೇ ದೇವಸ್ಥಾನದ ಆಡಳಿತ ಮಂಡಳಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳಿಯರ ಕರಾಮತ್ತು ಬೆಳಕಿಗೆ ಬಂದಿತ್ತು. ತಮಿಳುನಾಡು ಮೂಲದ ಶೀಥಲ್, ಕಾಳಿಯಮ್ಮ ಮತ್ತು ಮಾರಿಯಮ್ಮ ಎಂಬುವವರು ವೃದ್ಧೆಯನ್ನ ಸುತ್ತುವರಿದು ಗಮನ ಬೇರೆಡೆ ಸೆಳೆದು ಸರ ಕದಿಯುವ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಬಳಿಕ ಸಾರ್ವಜನಿಕರು ಅಲರ್ಟ್ ಆಗಿದ್ದರು.