ಜಮೀನು ವಿಚಾರದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಭದ್ರಾವತಿಯ ನಾಗರಾಜ್ ಮತ್ತು ಶೀಲಾರಿಗೆ 3 ವರ್ಷ ಕಠಿಣ ಸಜೆ, 40 ಸಾವಿರ ರೂ.,ಗಳ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. *ಏನಿದು ಪ್ರಕರಣ?- ಇಲ್ಲಿದೆ ಸಂಪೂರ್ಣ ಪೊಲೀಸ್ ರಿಪೋರ್ಟ್…*

ಜಮೀನು ವಿಚಾರದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಭದ್ರಾವತಿಯ ನಾಗರಾಜ್ ಮತ್ತು ಶೀಲಾರಿಗೆ 3 ವರ್ಷ ಕಠಿಣ ಸಜೆ, 40 ಸಾವಿರ ರೂ.,ಗಳ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

*ಏನಿದು ಪ್ರಕರಣ?- ಇಲ್ಲಿದೆ ಸಂಪೂರ್ಣ ಪೊಲೀಸ್ ರಿಪೋರ್ಟ್…*

*ದಿನಾಂಕ: 30-11-2021 ರಂದು ದೂರುದಾರರಾದ ಬಸವರಾಜ್* ರವರು ಶಿವಮೊಗ್ಗದಿಂದ ಭದ್ರಾವತಿ ಹಿರಿಯೂರು ಗ್ರಾಮದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಬಂದಾಗ ,ರಾತ್ರಿ 10.00 ಗಂಟೆಯ ವೇಳೆಗೆ ಆರೋಪಿತರುಗಳು ಜಮೀನಿನಲ್ಲಿ ಬೆಳೆದ ಭತ್ತವನ್ನು ಮೆಷಿನ್ ಮುಖಾಂತರ ಕಟಾವು ಮಾಡಿಸುತ್ತಿದ್ದು, *ದೂರುದಾರರಿಗೂ ಮತ್ತು ಆರೋಪಿತರಿಗೂ ಇರುವ ಜಮೀನಿನ ವ್ಯಾಜ್ಯದಲ್ಲಿ* ಈ ಹಿಂದೆ ಹಲವು ಗಲಾಟೆಗಳು ನಡೆದಿದ್ದು, *ಆರೋಪಿತನಾದ ನಾಗರಾಜ್ ಈತನು ಬಸವರಾಜ್ ರವರಿಗೆ ನೀನು ಪ್ರತಿ ಬಾರಿಯೂ ಜಮೀನಿನ ಕೆಲಸಕ್ಕೆ ತೊಂದರೆ* ಮಾಡುತ್ತಾ ನಮಗೆ ಸಮಸ್ಯೆಯಾಗಿದ್ದೀಯಾ? ನಿನ್ನನ್ನು ಬದುಕಲು ಬಿಡಬಾರದು, ನೀನು ಸತ್ತರೆ ನಾವುಗಳು ನೆಮ್ಮದಿಯಾಗಿ ಇರಬಹುದು ಎಂದು , *ಈ ಸೂಳೆಮಗನನ್ನು ಇವತ್ತು ಬದುಕಲು ಬಿಡಬಾರದು ಎಂದು ಹೇಳಿ ದೊಣ್ಣೆಯಿಂದ ಮೈ ಕೈಗೆ ಬೆನ್ನಿಗೆ* ಹೊಡೆದಿದ್ದು, *ಚಿದಾನಂದ ಈತನು ದೊಣ್ಣೆಯಿಂದ ಬಸವರಾಜ್ ರವರ ತಲೆಗೆ ಹೊಡಿದ್ದು* ತಲೆಯಿಂದ ರಕ್ತ ಬಂದಿದ್ದು, ನಂತರ ಅಲ್ಲೇ ಜಮೀನಿನ ಬಳಿಯಲ್ಲಿ *ಇಟ್ಟುಕೊಂಡಿದ್ದ ಹಗ್ಗವನ್ನು ತಂದು ಕೈಗೆ ಕಟ್ಟಿ ಅಡಿಕೆ ಮರಕ್ಕೆ ಕಟ್ಟಿ ಹಾಕಿರುತ್ತಾರೆ.* ನಂತರ ಆರೋಪಿಯಾದ ಶೀಲಾ ತಂದುಕೊಟ್ಟ *ಮಚ್ಚಿನಿಂದ ಸೂಳೆಮಗನೆ ಸಾಯಿ ನೀನು ಎನ್ನುತ್ತಾ ಮಚ್ಚಿನಿಂದ ತಲೆಗೆ ಮತ್ತು ಮುಖಕ್ಕೆ ಹೊಡೆದು ತೀವ್ರ ಸ್ವರೂಪದ ಗಾಯಗೊಳಿಸಿ* ರಕ್ತ ಬಂದಿದ್ದು, ಬಸವರಾಜ್ ರವರಿಗೆ ಇವತ್ತು ಬದುಕಿಕೊಂಡೆ ಇನ್ನೊಮ್ಮೆ ನಮ್ಮ ತಂಟೆಗೆ ಹಾಗೂ ನಮ್ಮ ಜಮೀನಿನ ತಂಟೆಗೆ ಬಂದರೆ ನಮ್ಮ ಅಣ್ಣ ಎಂಬುವುದನ್ನು ನೋಡದೇ *ನಿನ್ನನ್ನು ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವ ಬೆದರಿಕೆ ಹಾಕಿದ್ದು,* ಸದರಿಯವರ ವಿರುದ್ಧ ನೀಡಿದ ದೂರಿನ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆ, ಭದ್ರಾವತಿ ಗುನ್ನೆ ನಂ 148/2021 ಕಲಂ 324, 326, 504, 506, 307 ಸಹಿತ 34 ಐಪಿಸಿ ಕಾಯಿದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

*ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀಮತಿ ಶಿಲ್ಪಾ ನಾಯನೇಗಲಿ* ಪೊಲೀಸ್ ಉಪ ನಿರೀಕ್ಷಕರು, *ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ* ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

*ಘನನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು* ವಾದ ಮಂಡಿಸಿದ್ದು *ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ* ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ *ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು* ದಿನಾಂಕ:05-01-2026 ರಂದು *1 ) ನಾಗರಾಜ್ ಹೆಚ್, 48 ವರ್ಷ ವಾಸ ದುರ್ಗಮ್ಮ ಬೀದಿ, ಹಿರಿಯೂರು ಭದ್ರಾವತಿ, ಶಿವಮೊಗ್ಗ. ಮತ್ತು 2 ) ಶೀಲಾ, 32 ವರ್ಷ, ವಾಸ ವಾಸ ದುರ್ಗಮ್ಮ ಬೀದಿ, ಹಿರಿಯೂರು ಭದ್ರಾವತಿ, ಶಿವಮೊಗ್ಗ.* ಇವರಿಗೆ ಕಲಂ 326, 307, 504, 506 ಸಹಿತ 34 ಐಪಿಸಿ ಕಾಯಿದೆಗಳಿಗೆ 3 ವರ್ಷ ಕಠಿಣ ಸಜೆ ಮತ್ತು ತಲಾ 40,000 ರೂ ದಂಡ ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸಜೆಯನ್ನು* ಅನುಭವಿಸತಕ್ಕದ್ದು ಎಂದು ಆದೇಶಿಸಿರುತ್ತದೆ.