*ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಕಾರು- ಬಸ್ ಭೀಕರ ಅಪಘಾತ;* *ಕಾರಿನಲ್ಲಿದ್ದ 4 ಜನರ ಸಾವು*

*ತೀರ್ಥಹಳ್ಳಿ ಭಾರತೀಪುರ ಕ್ರಾಸಲ್ಲಿ ಕಾರು- ಬಸ್ ಭೀಕರ ಅಪಘಾತ;*

*ಕಾರಿನಲ್ಲಿದ್ದ 4 ಜನರ ಸಾವು*

ಮಂಗಳವಾರದಂದು ರಾತ್ರಿ 9:30ರ ಸುಮಾರಿಗೆ ಗ ತೀರ್ಥಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಭಾರತೀಪುರ ಕ್ರಾಸ್‌ ಬಳಿ ನಡೆದ ಕಾರ್‌ ಮತ್ತು ಬಸ್‌ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸಾವು ಕಂಡಿದ್ದಾರೆ.

ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಟ್ಟು 4 ಜನ ಮೃತಪಟ್ಟಿದ್ದು, ಈ ಬಗ್ಗೆ ಮಾರಣಾಂತಿಕ ಅಪಘಾತ ಪ್ರಕರಣ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀರ್ಥಹಳ್ಳಿ ಕಡೆಯಿಂದ ರಾಯಚೂರಿಗೆ ಹೊರಟಿದ್ದ ಕೆಎಸ್ಆರ್​ಟಿಸಿ ಬಸ್ ಹಾಗೂ ಶಿವಮೊಗ್ಗದ ಕಡೆಯಿಂದ ಶೃಂಗೇರಿ ಕಡೆಗೆ ಹೊರಟಿದ್ದ ಕಾರಿನ ನಡುವೆ ಡಿಕ್ಕಿಯಾಗಿದೆ. ಕಾರು- ಬಸ್ ನಡುವೆ ನಡೆದ ಅಪಘಾತದಲ್ಲಿ ಕಾರಿನ ಚಾಲಕ ರಿಯಾಜ್ (30) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪ್ರಯಾಣಿಕರಾದ ಫಾತಿಮಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಮೂವರು ಮಕ್ಕಳಿಗೆ ಗಂಭೀರವಾಗಿದ್ದು, ಮತ್ತೋರ್ವ ಮಹಿಳೆಗೆ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಯ್ಯಲಾಗಿತ್ತು.
ಮೂವರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿತ್ತು.

ಈ ಅಪಘಾತ ನಡೆದ ಸ್ಥಳಕ್ಕೆ ಇಂದು ಕಾರ್ಯಪ್ಪ ಎ. ಜಿ. (ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ) ರವರು ಭೇಟಿ ನೀಡಿ, ಪರಿಶೀಲಿಸಿ, ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.