*ಮಾಲೆ ಧರಿಸಿ ಇರುಮುಡಿ ಕಟ್ಟಿದ ಡಾ.ಶಿವರಾಜ್ ಕುಮಾರ್ ದಂಪತಿ*
*ಮಾಲೆ ಧರಿಸಿ ಇರುಮುಡಿ ಕಟ್ಟಿದ ಡಾ.ಶಿವರಾಜ್ ಕುಮಾರ್ ದಂಪತಿ*

ಡಾ. ಶಿವರಾಜ್ ಕುಮಾರ್- ಪತ್ನಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿ ಸಮೇತವಾಗಿ ಇಂದು ಮಾಲೆ ಧರಿಸಿ, ಇರುಮುಡಿ ಕಟ್ಟಿದರು.
ಮಕರ ಸಂಕ್ರಮಣ ಅಂಗವಾಗಿ ಕರ್ನಾಟಕದ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆದ ಮಕರ ಸಂಕ್ರಾಂತಿ ಉತ್ಸವ ಹಾಗೂ ಪೀಠ ಸ್ಥಾಪನೆಯ 14ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಪತ್ನಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿ ಸಮೇತವಾಗಿ ಮಾಲೆ ಧರಿಸಿ, ಇರುಮುಡಿ ಕಟ್ಟಿ ದೇವಸ್ಥಾನಕ್ಕೆ ತೆರಳಿ, ಅಯ್ಯಪ್ಪ ಸ್ವಾಮಿಯ ದಿವ್ಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.


