*ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪಿ.ಕೆ.ನಾಯ್ಕರೇಕೆ ಮೌನ?* *ಎ ಸಿ ಸತ್ಯನಾರಾಯಣ್ ನೇತೃತ್ವದಲ್ಲೇ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ವಿರುದ್ಧದ ದಾಳಿಗಳು!* *ಪಿ.ಕೆ.ನಾಯ್ಕರೂ ಅಕ್ರಮ ಮರಳು ಮಾಫಿಯಾವೂ…*
*ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪಿ.ಕೆ.ನಾಯ್ಕರೇಕೆ ಮೌನ?*
*ಎ ಸಿ ಸತ್ಯನಾರಾಯಣ್ ನೇತೃತ್ವದಲ್ಲೇ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ವಿರುದ್ಧದ ದಾಳಿಗಳು!*
*ಪಿ.ಕೆ.ನಾಯ್ಕರೂ ಅಕ್ರಮ ಮರಳು ಮಾಫಿಯಾವೂ…*

ಶಿವಮೊಗ್ಗದಲ್ಲಿ ಅಕ್ರಮ ಮರಳು ಮಾಫಿಯಾ ಗರಿ ಬಿಚ್ಚಿರುವ ಸಂದರ್ಭದಲ್ಲಿ ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ರವರು ಆ ಮಾಫಿಯಾದ ರೆಕ್ಕೆ ಪುಕ್ಕಗಳನ್ನು ಕತ್ತರಿಸಲಾರಂಭಿಸಿದ್ದಾರೆ.
ನಿರಂತರವಾಗಿ ಅಕ್ರಮ ಮರಳು ಗಣಿಗಾರಿಕೆ, ಅಕ್ರಮ ಮರಳಿನ ಸಂಗ್ರಹದ ವಿರುದ್ಧ ತೊಡೆ ತಟ್ಟಿರುವ ಎ ಸಿ ಸತ್ಯನಾರಾಯಣ್ ರವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪಿ.ಕೆ.ನಾಯ್ಕ ರವರು ಮಾಡಬೇಕಾದ ಕೆಲಸಗಳನ್ನು ಮಾಡುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅದೆಷ್ಟು ಭ್ರಷ್ಟಾಚಾರದಲ್ಲಿ ತೊಡಗಿ ಮೌನ ವಹಿಸಿದೆ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.
ಶಿವಮೊಗ್ಗದ ಮಂಡಳಿಯ ತುಂಗಾನಗರ, ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿವಿಧ ಜಾಗಗಳಲ್ಲಿ ಕಣ್ಣಿಗೆ ಕಾಣುವಂತೆಯೇ ಒಟ್ಟು 600 ಮೆಟ್ರಿಕ್ ಟನ್ ಅಕ್ರಮ ಮರಳಿನ ಸಂಗ್ರಹದ ಮೇಲೆ ಎ ಸಿ ಸತ್ಯನಾರಾಯಣ್ ಶನಿವಾರ ದಾಳಿ ಮಾಡಿದ್ದು, ಅದನ್ನೆಲ್ಲ ವಶಕ್ಕೆ ಪಡೆದಿದ್ದಾರೆ.
ನೆಪಕ್ಕಿಲ್ಲಿ ಗಣಿ ಅಧಿಕಾರಿಗಳನ್ನು ಅವರು ಕರೆಸಿಕೊಂಡಿದ್ದು, ದೊಡ್ಡಪೇಟೆ, ತುಂಗಾನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಅನಧಿಕೃತವಾಗಿ ಶೇಖರಿಸಿದ್ದ ಈ ಮರಳನ್ನು ಶಿವಮೊಗ್ಗದ ಫ್ರೀಡಂ ಪಾರ್ಕಿಗೆ ಸ್ಥಳಾಂತರಿಸಲಾಗಿದೆ.
ಇಂಥ ದಾಳಿಗಳನ್ನು ಮಾಡಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪಿ.ಕೆ.ನಾಯ್ಕರು ಮತ್ತು ಅವರ ತಂಡ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಮೌನ ವಹಿಸಿರುವುದು ಬಹಳಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.


