*ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಟು ಟೀಕೆ* *ದಾವಣಗೆರೆ ಉಪ ಚುನಾವಣೆ; ಧರ್ಮಾಂಧತೆ ಬಿತ್ತುತ್ತಿರುವ ಕಾಂಗ್ರೆಸ್* *ಸಚಿವ ಜಮೀರ್ ಅಹಮದ್ ಮೇಲೆ ಕೋಮು ಪ್ರಚೋದನೆ ಪ್ರಕರಣ ದಾಖಲಿಸಿ*

*ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಟು ಟೀಕೆ*

*ದಾವಣಗೆರೆ ಉಪ ಚುನಾವಣೆ; ಧರ್ಮಾಂಧತೆ ಬಿತ್ತುತ್ತಿರುವ ಕಾಂಗ್ರೆಸ್*

*ಸಚಿವ ಜಮೀರ್ ಅಹಮದ್ ಮೇಲೆ ಕೋಮು ಪ್ರಚೋದನೆ ಪ್ರಕರಣ ದಾಖಲಿಸಿ*

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಅದರಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಧರ್ಮವನ್ನು ಆಧಾರವಾಗಿಟ್ಟುಕೊಂಡು ಮತದಾರರಲ್ಲಿ ಧರ್ಮಾಂದತೆಯನ್ನು ಮೂಡಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಟೀಕಿಸಿದರು.

ಮತ ವಿಭಜನೆ ಮಾಡಿ ವಾಮಮಾರ್ಗದ ಮೂಲಕ ಚುನಾವಣೆ ಗೆಲ್ಲುವ ಹುನ್ನಾರನ್ನು ಮಾಡುತ್ತಿದೆ. ಹಿಂದೂಗಳು ತಮ್ಮ ಒಗ್ಗಟ್ಟು ಪ್ರದರ್ಶಿಸಿದರೆ ಅದು ಕೋಮುವಾದ ಆಗುವುದಾದರೆ ದಾವಣಗೆರೆಯಲ್ಲಿ ಮುಸಲ್ಮಾನರಿಗೇ ಕಾಂಗ್ರೇಸ್ ಪಕ್ಷದ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ್ದು ಕೋಮುವಾದವಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕಾಗಿ ಸರ್ಕಾರವನ್ನೇ ಬ್ಲಾಕ್‌ಮೇಲ್ ಮಾಡಿ, ಹಿಂದೂ-ಮುಸ್ಲಿಮ್ ಎಂದು ಸಮಾಜದಲ್ಲಿ ಒಡಕು ಮೂಡಿಸಿ, ಸಚಿವ ಸ್ಥಾನಕ್ಕೂ ರಾಜೀನಾಮೆ ಕೊಡಲು ಸಿದ್ದರಾಗಿದ್ದ ಸಚಿವ ಜಮೀರ್ ಅಹ್ಮದ್ ಮೇಲೆ ಕೋಮು ಸೌಹಾರ್ದತೆಗೆ ದಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಬೇಕು. ಇದೇ ರೀತಿ ಸಲೀಮ್ ಅಹ್ಮದ್, ರಿಜ್ವಾನ್ ಹಾಗೂ ಇನ್ನೂ ಅನೇಕ ಮುಸಲ್ಮಾನ್ ಮುಖಂಡರು ಮುಸ್ಲಿಮ್ ಸಮಾಜವನ್ನು ಪ್ರಚೋದಿಸಿ ಧರ್ಮದ ಆಧಾರದ ಮೇಲೆ ಚುನಾವಣಾ ಕಾರ್ಯತಂತ್ರವನ್ನು ರೂಪಿಸುತ್ತಿರುವ ಮತ್ತು ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿರುವ ಇವರೆಲ್ಲರ ಮೇಲೆ ಭಾರತೀಯ ನ್ಯಾಯ ಸಂಹಿತೆ ಕಲಂ 196 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇವೆಲ್ಲದಕ್ಕೂ ಕುಮ್ಮಕ್ಕು ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮೇಲೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದರು.

ಇದೆಲ್ಲವನ್ನು ಗಮನಿಸುತ್ತಿರುವ ಹಿಂದೂ ಸಮಾಜದಲ್ಲಿ ನನ್ನ ಮನವಿಯೆಂದರೆ, ಹಿಂದೂಗಳ ರಕ್ಷಣೆ, ರಾಷ್ಟ್ರೀಯ ಚಿಂತನೆಯುಳ್ಳ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಈ ಮೂಲಕ ಹಿಂದೂ ಸಮಾಜವು ರಾಷ್ಟ್ರ ನಿರ್ಮಾಣದಲ್ಲಿ ತನ್ನ ಜವಾಬ್ದಾರಿಯನ್ನು ನಿಬಾಯಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದರು.