*ಚೈನ್ ಲಿಂಕ್ ಸ್ಕೀಮ್ ವಂಚನೆ- ಉಡುಪಿ ಮೂಲದ ಅಯಾನ್ ಗ್ರೂಪ್ ವಂಚನೆ* *1960 ಕ್ಕೂ ಹೆಚ್ಚು ಜನರಿಗೆ ವಂಚನೆ* *3ಕೋಟಿ ರೂ.,ಗಳಿಗೂ ಹೆಚ್ಚಿನ ಟೋಪಿ ಹಾಕಿದ ಅಬ್ದುಲ್ ರಜಾಕ್- ಶೇಖ್ ಮೊಹಮ್ಮದ್ ಫಜಲ್*
*ಚೈನ್ ಲಿಂಕ್ ಸ್ಕೀಮ್ ವಂಚನೆ- ಉಡುಪಿ ಮೂಲದ ಅಯಾನ್ ಗ್ರೂಪ್ ವಂಚನೆ*
*1960 ಕ್ಕೂ ಹೆಚ್ಚು ಜನರಿಗೆ ವಂಚನೆ*
*3ಕೋಟಿ ರೂ.,ಗಳಿಗೂ ಹೆಚ್ಚಿನ ಟೋಪಿ ಹಾಕಿದ ಅಬ್ದುಲ್ ರಜಾಕ್- ಶೇಖ್ ಮೊಹಮ್ಮದ್ ಫಜಲ್*
ಅಯಾನ್ ಗ್ರೂಪಿನ ಮಾಲೀಕರಿಬ್ಬರು ಸ್ಕೀಮ್ ಗಳ ಆಸೆ ತೋರಿಸಿ ಕೋಟ್ಯಾಂತರ ರೂ.,ಗಳ ಸಾರ್ವಜನಿಕ ವಂಚನೆ ಮಾಡಿದ್ದು, ಅಬ್ದುಲ್ ರಜಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸನಗರದ ನಿಖಿಲ್(27) ನೀಡಿದ ದೂರಿನ ಮೇರೆಗೆ ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
13,16,21 ತಿಂಗಳುಗಳ ಸ್ಕೀಮ್ ಇವೆ. ಪ್ರತಿ ತಿಂಗಳು ಒಬ್ಬರಿಂದ 1000₹ ವಂತಿಗೆ ಸಂಗ್ರಹಿಸಿ ಸ್ಕೀಮಿನ ಅವಧಿಯ ಮಧ್ಯದಲ್ಲಿ ಆಕರ್ಷಕ ಬಹುಮಾನ ಹಾಗೂ ಸ್ಕೀಮ್ ಮುಗಿದ ನಂತರ ಸಮಾಧಾನಕರ ಬಹುಮಾನ ನೀಡುವುದಾಗಿ ಈ ಇಬ್ಬರು ನಂಬಿಸಿದ್ದರು.
ಪ್ರತಿ ಕಾರ್ಡಿಗೆ ತಲಾ 300₹ ಕಮೀಷನ್ ನೀಡುವುದಾಗಿಯೂ ಭರವಸೆ ನೀಡಿದ್ದ ಇವರು, 2023ರಿಂದ ಒಟ್ಟು 150 ಜನರಿಂದ ಹಣ ಸಂಗ್ರಹಿಸಿ ನಿಖಿಲ್ ಈ ಇಬ್ಬರಿಗೆ ನೀಡಿದ್ದರು.
ಅಬ್ದುಲ್ ರಜಾಖ್- ಶೇಖ್ ಮೊಹಮ್ಮದ್ ಫಜಲ್ ರವರ ಫೋನ್ ಪೇ ನಂಬರ್ ಗಳಿಗೆ ಹಣ ಜಮೆ ಮಾಡಲಾಗಿದೆ. ಕಳೆದ ವರ್ಷದ ಮೇ 4 ರಂದೇ ಸ್ಕೀಮ್ ಮುಕ್ತಾಯವಾಗಿದ್ದರೂ ಸಹ ಹೇಳಿದಂತೆ ಯಾವುದೇ ಬಹುಮಾನ, ಹಣ ನೀಡಿಲ್ಲ. ಒಟ್ಟು 24 ಲಕ್ಷ ರೂ.,ಗಳನ್ನು ನಿಖಿಲ್ ಸಂಗ್ರಹಿಸಿ ನೀಡಿದ್ದಾರೆ.
ನಿಖಿಲ್ ನಂತೆಯೇ ಏಳೆಂಟು ಜನ ಏಜೆಂಟರಿದ್ದು, ಸುಮಾರು 1960 ಜನರಿಂದ ಮೂರು ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಈ ವಂಚನೆ ಆರೋಪಿಗಳಿಗೆ ನೀಡಿದ್ದಾರೆ.
ಉಡುಪಿಯ ಅಬ್ದುಲ್ ರಜಾಖ್ ನನ್ನು ಬಂಧಿಸಿರುವ ಪೊಲೀಸರು ಇನ್ನೊಬ್ಬ ಆರೋಪಿ ಶೇಖ್ ಮೊಹಮ್ಮದ್ ಫಜಲ್ ನನ್ನು ಬಂಧಿಸಲು ಜಾಲ ಬೀಸಿದ್ದಾರೆ.


