*ತುಂಗಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಸೂಳೆಬೈಲಿನ ಬಾಲಕನನ್ನು ರಕ್ಷಿಸಿದ ERSS*
*ತುಂಗಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಸೂಳೆಬೈಲಿನ ಬಾಲಕನನ್ನು ರಕ್ಷಿಸಿದ ERSS*
ತುಂಗಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ 16 ವರ್ಷದ ಬಾಲಕನೊಬ್ಬನನ್ನು ERSS ಪೊಲೀಸ್ ವಾಹನದ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರದಂದು ರಾತ್ರಿ ನಡೆದಿದೆ.
ತಮ್ಮ ತಂದೆ- ತಾಯಿ ತನ್ನ ಮತ್ತು ತನ್ನ ತಮ್ಮನ ಮಧ್ಯೆ ಭೇದ ಭಾವ ಮಾಡುತ್ತಿದ್ದಾರೆಂದು ಮನನೊಂದು ಶಿವಮೊಗ್ಗದ ವಾದಿ ಎ ಹುದಾ ಸೇತುವೆ ಬಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಬಾಲಕ ಹೊರಟಿದ್ದ.
ಈ ವಿಚಾರ ತಿಳಿದ ERSS ವಾಹನದ ರೆಸ್ಪಾಂಡರ್, ತುಂಗಾನಗರ ಠಾಣೆಯ ಸಿ ಹೆಚ್ ಸಿ ಶಬ್ಬೀರ್ ಬೇಗ್ ಹಾಗೂ ವಾಹನ ಚಾಲಕ ಡಿ ಎ ಆರ್ ಎ ಹೆಚ್ ಸಿ ಮಂಜುನಾಥ್ ಕೂಡಲೇ ಸ್ಥಳಕ್ಕೆ ಹೋಗಿ ಬಾಲಕನನ್ನು ರಕ್ಷಿಸಿ, ಆನಂತರ ಅವರ ಪೋಷಕರಿಗೊಪ್ಪಿಸಿದ್ದಾರೆ.


