*ಪುನರ್ ನಿರ್ಮಾಣಗೊಂಡ ಸಂಕೇತ್ ಸಮಾಧಿ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದೇನು?*
*ಪುನರ್ ನಿರ್ಮಾಣಗೊಂಡ ಸಂಕೇತ್ ಸಮಾಧಿ ಬಳಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದೇನು?*

ಹತ್ಯೆಯಾದ ಬಾಲಕ ಸಂಕೇತ್‌ನ ಸಮಾಧಿಯನ್ನು ಧ್ವಂಸಗೊಳಿಸಿರುವ ದುಷ್ಕರ್ಮಿಗಳ ಈ ಹೇಯ ಕೃತ್ಯ ಕೇವಲ ಖಂಡನೀಯವಲ್ಲ, ಇದು ಅತ್ಯಂತ ಅಸಹನೀಯ ಮತ್ತು ವಿಕೃತ ಮನಸ್ಥಿತಿಯ ಪರಮಾವಧಿ
ಎಂದು ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಸತ್ತ ಮೇಲೆಯೂ ಹಗೆತನ ಸಾಧಿಸುವ ಇಂತಹ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು.
ಭಗ್ನಗೊಂಡಿದ್ದ ಸಮಾಧಿಯನ್ನು ಕುಟುಂಬಸ್ಥರು ಈಗ ಪುನರ್ ಸ್ಥಾಪಿಸಿದ್ದಾರೆ. ಸಂಕೇತ್ ತಂದೆಯ ಬೆನ್ನಿಗೆ ನಿಂತು ಸ್ಪಷ್ಟವಾಗಿ ಹೇಳಿದ್ದೇನೆ — ‘ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಹಿಂದೂ ಸಮಾಜವಿದೆ. ನ್ಯಾಯ ಸಿಗುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದಿರುವುದಾಗಿ ವಿವರಿಸಿದರು.
ಸಂಕೇತ್ ಹತ್ಯೆಯಾದಾಗ ಸಾಂತ್ವನ ಹೇಳಲು ‘ಕ್ಯಾಂಡಲ್ ಮಾರ್ಚ್’ ನಡೆಸಿದ ಮುಸ್ಲಿಂ ಸಮಾಜದ ಮುಖಂಡರು, ಸಮಾಧಿ ಧ್ವಂಸವಾಗಿರುವ ಇಂದಿನ ಘಟನೆಗೆ ಏನು ಉತ್ತರ ನೀಡುತ್ತಾರೆ?
ಸಂಕೇತ್‌ನನ್ನು ಹತ್ಯೆ ಮಾಡಿದವರು ನಶೆಯಲ್ಲಿದ್ದರು ಎಂದು ಹೇಳಲಾಗಿತ್ತು, ಅವರು ಈಗ ಜೈಲಿನಲ್ಲಿದ್ದಾರೆ. ಆದರೆ, ಈಗ ಈ ಸಮಾಧಿಯನ್ನು ಹಾಳು ಮಾಡಿದವರ ತಲೆಯಲ್ಲಿದ್ದ ‘ನಶೆ’ ಯಾವುದು? ಎಂದು ಪ್ರಶ್ನಿಸಿದ್ದಾರೆ.
ಇಂತಹ ಪುಂಡಾಟಿಕೆಗಳನ್ನು ಹತ್ತಿಕ್ಕಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.


