ಪೊಲೀಸ್ ಪ್ರಕಟಣೆ; ಮದುವೆಯಾಗಿಯೂ ಹೊಸ ಮದುವೆ ಆಗಿ ಮೋಸ ಮಾಡಿದವನಿಗೆ 6 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್…ಆ ಮಹಿಳೆಗೂ 3 ವರ್ಷದ ಶಿಕ್ಷೆ!!!!
- ಬೇರೆ ಮದುವೆಯಾಗಿಯೂ ಹೊಸ ಮದುವೆ ಆಗಿ ಮೋಸ ಮಾಡಿದವನಿಗೆ 6 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್…ಆ ಮಹಿಳೆಗೂ 3 ವರ್ಷದ ಶಿಕ್ಷೆ!!!!
2017ರಲ್ಲಿ ಚಿಕ್ಕಮಗಳೂರು ಜಿಲ್ಲೆಯ 25 ವರ್ಷದ ಯುವತಿಗೆ ಶಿವಮೊಗ್ಗ ನಗರದ ವಿನೋದ್ ನೊಂದಿಗೆ ವಿವಾಹವಾಗಿದ್ದು, ಆದರೆ ಅವನು ಈ ಮೊದಲೇ *ಬೇರೆ ಮದುವೆಯಾಗಿದ್ದು* ಈ ಬಗ್ಗೆ ಯುವತಿಯು ಕೇಳಿದಾಗ ಆಕೆಯ ಮೇಲೆ *ಕೌಟುಂಬಿಕ ದೌರ್ಜನ್ಯವೆಸಗಿರುತ್ತಾರೆಂದು* ನೊಂದ ಯುವತಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ *ಗುನ್ನೆ ಸಂಖ್ಯೆ 0004/2018 ಕಲಂ 498(ಎ) ಸಹಿತ 34 ಐಪಿಸಿ* ರೀತ್ಯಾ ಪ್ರಕರಣ ದಾಖಲಾಗಿತ್ತು.ದ
ಸದರಿ ಪ್ರಕರಣದಲ್ಲಿ ಆಗಿನ ತನಿಖಾಧಿಖಾರಿಗಳಾದ *ಶ್ರೀಮತಿ ಪ್ರಭಾವತಿ. ಸಿ. ಶೇತಸನದಿ,ಪೊಲೀಸ್ ಇನ್ಸ್ ಪೆಕ್ಟರ್,* ಮಹಿಳಾ ಪೊಲೀಸ್ ಠಾಣೆ ರವರು ಆರೋಪಿತರ ವಿರುದ್ದ *ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು* ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ * ಕಿರಣ್ ಕುಮಾರ್, ಸರ್ಕಾರಿ ಅಭಿಯೋಜಕರವರು* ವಾದ ಮಂಡಿಸಿದ್ದು ಶಿವಮೊಗ್ಗದ *ಘನ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ* ವಿಚಾರಣೆ ನಡೆದು , ಆರೋಪಿತರ ವಿರುದ್ದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ *ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಸನ್ಮತಿ.ಎಸ್.ಆರ್. ಆರೋಪಿ1 ವಿನೋದ್,* 29 ವರ್ಷ ಶಿವಮೊಗ್ಗ ಟೌನ್ ಈತನಿಗೆ 6 ವರ್ಷ ಶಿಕ್ಷೆ ಮತ್ತು 20,000/- ದಂಡ , *ಆರೋಪಿ 2 ಜಯಮ್ಮ,* 56 ವರ್ಷ ಶಿವಮೊಗ್ಗ ಟೌನ್ ಈಕೆಗೆ 3 ವರ್ಷ ಶಿಕ್ಷೆ ಮತ್ತು 10,000/- ರೂ ದಂಡ ಮತ್ತು *ಆರೋಪಿ 3 ಶ್ರೀನಿವಾಸ,* 62 ವರ್ಷ ಶಿವಮೊಗ್ಗ ಟೌನ್ ಈತನಿಗೆ 3 ವರ್ಷ ಶಿಕ್ಷೆ ಮತ್ತು 10000/-ದಂಡ ವಿಧಿಸಿ ಆದೇಶಿಸಿರುತ್ತಾರೆ.